ಟಿ20 ವಿಶ್ವಕಪ್: ನ್ಯೂಜಿಲೆಂಡ್ ಗೆ 8 ವಿಕೆಟ್ ಗಳ ಭರ್ಜರಿ ಜಯ, ಟೂರ್ನಿಯಿಂದ ಟೀಂ ಇಂಡಿಯಾ ಬಹುತೇಕ ಔಟ್!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲೂ ಟೀಂ ಇಂಡಿಯಾ ಮುಗ್ಗರಿಸಿದ್ದು, ಟೂರ್ನಿಯಿಂದ ಬಹುತೇಕ ಔಟ್ ಆದಂತಾಗಿದೆ.
ನ್ಯೂಜಿಲೆಂಡ್ ಗೆ ಜಯ
ನ್ಯೂಜಿಲೆಂಡ್ ಗೆ ಜಯ
Updated on: 

ದುಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲೂ ಟೀಂ ಇಂಡಿಯಾ ಮುಗ್ಗರಿಸಿದ್ದು, ಟೂರ್ನಿಯಿಂದ ಬಹುತೇಕ ಔಟ್ ಆದಂತಾಗಿದೆ.

ಇಂದು ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ್ದು, ಆ ಮೂಲಕ ಟೂರ್ನಿಯಲ್ಲಿ ತನ್ನ ಹೋರಾಟವನ್ನು ಕಿವೀಸ್ ಪಡೆ ಜೀವಂತವಾಗಿರಿಸಿಕೊಂಡಿದೆ. 

ಭಾರತ ನೀಡಿದ 111ರನ್ ಗಳ ಸುಲಭ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡ ಕೇವಲ 14.3 ಓವರ್ ನಲ್ಲಿಯೇ 2 ವಿಕೆಟ್ ಕಳೆದುಕೊಂಡು 111ರನ್ ಗಳಿಸಿ ಗುರಿ ಸಾಧಿಸಿತು. ಆ ಮೂಲಕ ಭಾರತದ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ತನ್ನ ಸ್ಪರ್ಧೆಯನ್ನು ಜೀವಂತವಾಗಿರಿಸಿಕೊಂಡಿದೆ. 

ಇನ್ನು ಈ ಮಹತ್ವದ ಪಂದ್ಯದ ಸೋಲಿನ ಮೂಲಕ ಟೀಂ ಇಂಡಿಯಾ ಬಹುತೇಕ ಟೂರ್ನಿಯಿಂದ ಹೊರಬಿದ್ದಂತಾಗಿದೆ. ಸೂಪರ್ ಸಿಕ್ಸ್ ಹಂತದಲ್ಲಿ ಗ್ರೂಪ್ 2 ಹಂತದಲ್ಲಿ ಭಾರತ ತಂಡ ಇದೀಗ 5ನೇ ಸ್ಥಾನಕ್ಕೆ ಕುಸಿದಿದ್ದು, ಆಡಿರುವ ಮೂರು ಪಂದ್ಯಗಳಲ್ಲೂ ಜಯ ಗಳಿಸಿ 6 ಅಂಕಗಳಿಸಿರುವ ಪಾಕಿಸ್ತಾನ ಆಗ್ರಸ್ಥಾನಿಯಾಗಿ ಸೆಮಿಫೈನಲ್ ಗೇರಿದೆ. ಅಂತೆಯೇ ಆಡಿರುವ 3 ಪಂದ್ಯಗಳಲ್ಲಿ 2 ಪಂದ್ಯ ಗೆದ್ದಿರುವ ಆಫ್ಘಾನಿಸ್ತಾನ ಮತ್ತು ಆಡಿರುವ 2 ಪಂದ್ಯದಲ್ಲಿ 1 ಪಂದ್ಯ ಗೆದ್ದಿರುವ ನ್ಯೂಜಿಲೆಂಡ್ ನಡುವೆ ಸೆಮೀಸ್ ಸೆಣಸಾಟಕ್ಕಾಗಿ ಸ್ಪರ್ಧೆ ಏರ್ಪಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com