ಬಿಸಿಸಿಐ, ವಿರಾಟ್ ಕೊಹ್ಲಿ ನಡುವಿನ ಸಂಪರ್ಕ ಕೊರತೆಯೇ ನಾಯಕತ್ವ ತ್ಯಜಿಸಲು ಕಾರಣ: ಸಂದೀಪ್ ಪಾಟೀಲ್

ವಿರಾಟ್ ಕೊಹ್ಲಿ ನಾಯಕನ ಸ್ಥಾನ ತ್ಯಜಿಸಲು ಬಿಸಿಸಿಐನೊಂದಿಗಿನ ಸಂಪರ್ಕ ಕೊರತೆಯೇ ಕಾರಣ ಎಂದು ಟೀಂ ಇಂಡಿಯಾದ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಸಂದೀಪ್ ಪಾಟೀಲ್ ಮತ್ತು ವಿರಾಟ್ ಕೊಹ್ಲಿ
ಸಂದೀಪ್ ಪಾಟೀಲ್ ಮತ್ತು ವಿರಾಟ್ ಕೊಹ್ಲಿ

ನವದೆಹಲಿ: ವಿರಾಟ್ ಕೊಹ್ಲಿ ನಾಯಕನ ಸ್ಥಾನ ತ್ಯಜಿಸಲು ಬಿಸಿಸಿಐನೊಂದಿಗಿನ ಸಂಪರ್ಕ ಕೊರತೆಯೇ ಕಾರಣ ಎಂದು ಟೀಂ ಇಂಡಿಯಾದ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ಹೇಳಿದ್ದಾರೆ.

ವಿಶ್ವಕಪ್ ನಂತರ ಟಿ- 20 ನಾಯಕತ್ವದಿಂದ ದೂರ ಸರಿಯುವುದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಂಚಲನ ಹೇಳಿಕೆಯ ಹಿಂದಿನ ಹಲವು ಕಾರಣಗಳ ಬಗ್ಗೆ ವಿಶ್ಲೇಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕ್ರಮದಲ್ಲಿ ಭಾರತದ ಮಾಜಿ ಮುಖ್ಯ ಆಯ್ಕೆಗಾರ ಸಂದೀಪ್ ಪಾಟೀಲ್ ಕೂಡ ಮಾಧ್ಯಮಗಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಟೀಂ ಇಂಡಿಯಾ ನಾಯಕ, ಬಿಸಿಸಿಐ ನಡುವೆ ದೊಡ್ಡ ಸಂಪರ್ಕದ ಅಂತರ ಉಂಟಾಗಿರುವುದು ಕಂಡುಬರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣದಿಂದಲೇ ಕೊಹ್ಲಿ ಟಿ -20 ನಾಯಕತ್ವದಿಂದ ಕೆಳಗಿಳಿಯುವ ಕಠಿಣ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

"ಕೊಹ್ಲಿ ಒಂದು ಹೇಳಿದರೆ, ಬಿಸಿಸಿಐ ಇನ್ನೊಂದು ಹೇಳುತ್ತದೆ ಎಂದು ನಾನು ಭಾವಿಸುವುದಿಲ್ಲ. ಈ ನಿರ್ಣಯ ಕೊಹ್ಲಿಯ ವೈಯಕ್ತಿಕ ನಿರ್ಧಾರವೇ ಆಗಿರಲಿದೆ. ಆದರೆ, ಕೊಯ್ಲಿಯ ಈ ನಿರ್ಧಾರ ಅವರ ಬ್ಯಾಟಿಂಗ್ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್‌ಗೆ ಕೊಹ್ಲಿ ದೊಡ್ಡ ಆಸ್ತಿ .. ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಅತ್ಯಂತ ಯಶಸ್ವಿ ನಾಯಕ. ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಕಿರು ವಿಶ್ವಕಪ್ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಕೊಹ್ಲಿ ಟಿ 20 ನಾಯಕತ್ವಕ್ಕೆ ವಿದಾಯ ಹೇಳಿದರೂ .. ದೇಶಕ್ಕಾಗಿ ರನ್‌ ಗಳನ್ನು ಮಾಡುತ್ತಲೇ ಇರಬೇಕು ಎಂಬ ಬಯಕೆ ವ್ಯಕ್ತಪಡಿಸಿದ್ದಾರೆ. ಟಿ 20 ನಾಯಕತ್ವದ ಚುಕ್ಕಾಣಿ ಪಡೆಯಲು ರೋಹಿತ್ ಗಿಂತ ಮೀರಿದ ಅರ್ಹರು ಯಾರೂ ಇಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

1983ರಲ್ಲಿ ಭಾರತ ವಿಶ್ವಕಪ್ ಗೆದ್ದ ತಂಡದ ಸದಸ್ಯರಾದ ಪಾಟೀಲ್, 2012-16 ರ ನಡುವೆ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದರು. ಪಾಟೀಲ್ 80 ರ ದಶಕದಲ್ಲಿ ಭಾರತೀಯ ತಂಡದ ಪ್ರಮುಖ ಸದಸ್ಯರಾಗಿದ್ದರು. ನಿವೃತ್ತಿಯ ನಂತರ ಅವರು ಕೀನ್ಯಾ ತಂಡದ ಕೋಚ್, ಮ್ಯಾನೇಜರ್ ಆಗಿದ್ದರು. ಅವರ ನಾಯಕತ್ವದಲ್ಲಿ, ಕೀನ್ಯಾ 2003 ವಿಶ್ವಕಪ್‌ನ ಸೆಮಿಫೈನಲ್ ತಲುಪಿ ಸಂಚಲನ ಸೃಷ್ಟಿಸಿತು. 1980-86ರ ನಡುವೆ ಪಾಟೀಲ್ ಭಾರತ ತಂಡದ ಪ್ರಮುಖ ಆಲ್ ರೌಂಡರ್ ಆಗಿದ್ದರು. ಅವರು 29 ಟೆಸ್ಟ್ ಮತ್ತು 45 ಏಕದಿನ ಪಂದ್ಯಗಳಲ್ಲಿ 2500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ 16 ಅರ್ಧ ಶತಕಗಳು ಮತ್ತು 4 ಶತಕಗಳು ಸೇರಿವೆ. ಅವರು ಎರಡೂ ಮಾದರಿಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com