ಐಪಿಎಲ್-2021: ಹೈದರಾಬಾದ್ ತಂಡಕ್ಕೆ 2ನೇ ಗೆಲುವು; ರಾಜಸ್ಥಾನ ರಾಯಲ್ಸ್ ವಿರುದ್ಧ ಎಸ್ ಹೆಚ್ ಆರ್ ಗೆ 7 ವಿಕೆಟ್ ಜಯ

ಐಪಿಎಲ್-2021 ರಲ್ಲಿ ಸತತ 5 ಸೋಲುಗಳನ್ನು ಕಂಡಿದ್ದ ಹೈದರಾಬಾದ್ ಸನ್ ರೈಸರ್ಸ್ ತಂಡ ಸೆ.27 ರಂದು ದುಬೈ ನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ಹೈದರಾಬಾದ್ ಸನ್ ರೈಸರ್ಸ್ ತಂಡ
ಹೈದರಾಬಾದ್ ಸನ್ ರೈಸರ್ಸ್ ತಂಡ
Updated on: 

ದುಬೈ: ಐಪಿಎಲ್-2021 ರಲ್ಲಿ ಸತತ 5 ಸೋಲುಗಳನ್ನು ಕಂಡಿದ್ದ ಹೈದರಾಬಾದ್ ಸನ್ ರೈಸರ್ಸ್ ತಂಡ ಸೆ.27 ರಂದು ದುಬೈ ನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳನ್ನು ಗಳಿಸಿತು.
 
ಆರಂಭಿಕ ಆಟಗಾರ ಎವಿನ್ ಲೆವಿಸ್ 4 ಎಸೆತಗಳನ್ನು ಎದುರಿಸಿ 6 ರನ್ ಗಳಿಗೆ ವಿಕೆಟ್ ಒಪ್ಪಿಸಿ ಪೆಲಿವಿಯನ್ ಗೆ ಮರಳಿದರು. 

ನಂತರ ಯಶಸ್ವಿ ಜೈಸ್ವಾಲ್ (23 ಎಸೆತಗಳಲ್ಲಿ 36 ರನ್)  ಹಾಗೂ ಸಂಜು ಸ್ಯಾಮ್ಸನ್ (57 ಎಸೆತಗಳಲ್ಲಿ 82 ರನ್) ಗಳನ್ನು ಗಳಿಸಿ ತಂಡ ಉತ್ತಮ ಸ್ಕೋರ್ ಗಳಿಸಲು ಕಾರಣರಾದರು.

164 ರನ್ ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ಸನ್ ರೈಸರ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಜೇಸನ್ ರಾಯ್ (42 ಎಸೆತ, 60 ರನ್) ವೃದ್ಧಿಮಾನ್ ಸಾಹ (11 ಎಸೆತ, 18 ರನ್) ಕೇನ್ ವಿಲಿಯಮ್ ಸನ್ (41 ಎಸೆತ, 51 ರನ್) ಅಭಿಷೇಕ್ ಶರ್ಮಾ (16 ಎಸೆತ, 21 ರನ್ )ಗಳ ನೆರವಿನಿಂದ ತಂಡ ಗೆಲುವು ಸಾಧಿಸಿದೆ.

ಸನ್ ರೈಸರ್ಸ್ ಪರ ಸಂದೀಪ್ ಶರ್ಮ 30 ರನ್ ಗಳನ್ನು ನೀಡಿ 1 ವಿಕೆಟ್ ಪಡೆದರೆ, ವೇಗಿ ಭುವನೇಶ್ವರ್ ಕುಮಾರ್, 1 ಮೇಡಿನ್ ಓವರ್ ಮಾಡಿ, 28 ರನ್ ನೀಡಿ 1 ವಿಕೆಟ್ ಪಡೆದರು. ಸಿದ್ಧಾರ್ಥ್ ಕೌಲ್ 2 ವಿಕೆಟ್ ಪಡೆದು 31 ರನ್ ನೀಡಿ ಉತ್ತಮ ಬೌಲರ್ ಎನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com