ಐಪಿಎಲ್ 2021: ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಆರ್ ಸಿಬಿಗೆ ಆರು ರನ್ ಗಳ ಗೆಲುವು

ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ ಆರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ಆರು ರನ್ ಗಳಿಂದ ಆರ್ ಸಿಬಿ ಸೋಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 
ಆರ್ ಸಿಬಿ ಆಟಗಾರರ ಸಂಭ್ರಮದ ಚಿತ್ರ
ಆರ್ ಸಿಬಿ ಆಟಗಾರರ ಸಂಭ್ರಮದ ಚಿತ್ರ

ಚೆನ್ನೈ: ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ ಆರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ಆರು ರನ್ ಗಳಿಂದ ಆರ್ ಸಿಬಿ ಸೋಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಕಲೆ ಹಾಕಿತು. ಆರ್ ಸಿಬಿ ಪರ ಗ್ಲೆನ್ ಮ್ಯಾಕ್ಸ್ ವೆಲ್ ಆಕರ್ಷಕ 59, ನಾಯಕ ವಿರಾಟ್ ಕೊಹ್ಲಿ 33, ಶಹಬಾಜ್ ಅಹ್ಮದ್ 14 ರನ್ ಗಳಿಸಿದರು. ಸನ್ ರೈಸರ್ಸ್ ಹೈದ್ರಾಬಾದ್ ಪರ ಜೇಸನ್ ಹೋಲ್ಡರ್ 3, ರಶೀದ್ ಖಾನ್ 2 , ಭುವನೇಶ್ವರ್ ಕುಮಾರ್  1 ವಿಕೆಟ್ ಪಡೆದರು.

ಆರ್ ಸಿಬಿ ನೀಡಿದ 149 ರನ್ ಗಳ ಗುರಿ ಬೆನ್ನಟ್ಟಿದ್ದ ಸನ್ ರೈಸರ್ಸ್ ಹೈದ್ರಾಬಾದ್ ಪರ ನಾಯಕ ಡೇವಿಡ್ ವಾರ್ನರ್ 54, ಮನೀಶ್ ಪಾಂಡೆ 38, ರಶೀದ್ ಖಾನ್ 17 ರನ್ ಪಡೆದರು.  ಪಂದ್ಯದ 16ನೇ ಓವರ್ ವರೆಗೂ ಸನ್ ರೈಸರ್ಸ್ ಹೈದ್ರಾಬಾದ್ ತಂಡದಲ್ಲಿದ್ದ ಮಂದಹಾಸ ಆರೇ ಎಸೆತದಲ್ಲಿ ಬೆಂಗಳೂರು ತಂಡದತ್ತ ಬದಲಾಯಿತು.

ಯುವ ಸ್ಪಿನ್ ಬೌಲರ್ ಶಹಬಾಜ್ ನದೀಮ್ ಮಾಡಿದ ಓವರ್ ನಲ್ಲಿ ಹೈದರಾಬಾದ ಮೂರು ಪ್ರಮುಖ ವಿಕೆಟ್ ಗಳನ್ನು ಕಳೆದು ಕೊಂಡು ಒತ್ತಡಕ್ಕೆ ಸಿಲುಕಿತು. ಮೊದಲ ಎಸೆತದಲ್ಲಿ ಜಾನಿ ಬೇರ್ ಸ್ಟೋ, ಎರಡನೇ ಎಸೆತದಲ್ಲಿ ಮನೀಷ್ ಪಾಂಡೆ, ಆರನೇ ಎಸೆತದಲ್ಲಿ ಅಬ್ದುಲ್ ಸಮಾದ್ ಅವರನ್ನು ಬಲೆಗೆ ಕೆಡವಿ, ಜಯದಲ್ಲಿ ಅಬ್ಬರಿಸಿದರು. ಸನ್ ರೈಸರ್ಸ್ ಹೈದ್ರಾಬಾದ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಶಕ್ತವಾಯಿತು.  ಆರ್ ಸಿಬಿ ಪರ ಬೌಲರ್ ಶಹಬಾಜ್ ಅಹ್ಮದ್ 3, ಮೊಹಮ್ಮದ್ ಸಿರಾಜ್ 2, ಹರ್ಷಲ್ ಪಟೇಲ್ 2 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com