ಭಾರತದ ಕೆಎಲ್ ರಾಹುಲ್ ಮೇಲೆ ಶಾಂಪೇನ್ ಬಾಟಲ್ ಮುಚ್ಚಳ ಎಸೆತ: ಪ್ರೇಕ್ಷಕರ ದುರ್ನಡತೆ

ಲಾರ್ಡ್ಸ್‌ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್‌ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಮೂರನೇ ದಿನದಾಟದ ವೇಳೆ ಭಾರತದ ಬ್ಯಾಟ್ಸ್ ಮನ್ ಕೆ.ಎಲ್‌ ರಾಹುಲ್‌ ಮೇಲೆ ಶಾಂಪೇನ್‌ ಬಾಟಲಿಯ ಮುಚ್ಚಳ (ಬಾಟಲ್ ಕಾರ್ಕ್ ) ಎಸೆಯಲಾಗಿದೆ.
ಕೆಎಲ್ ರಾಹುಲ್  ಮೇಲೆ ಬಾಟಲ್ ಕಾರ್ಕ್ ಎಸೆತ
ಕೆಎಲ್ ರಾಹುಲ್ ಮೇಲೆ ಬಾಟಲ್ ಕಾರ್ಕ್ ಎಸೆತ

ಲಂಡನ್‌: ಲಾರ್ಡ್ಸ್‌ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್‌ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಮೂರನೇ ದಿನದಾಟದ ವೇಳೆ ಭಾರತದ ಬ್ಯಾಟ್ಸ್ ಮನ್ ಕೆ.ಎಲ್‌ ರಾಹುಲ್‌ ಮೇಲೆ ಶಾಂಪೇನ್‌ ಬಾಟಲಿಯ ಮುಚ್ಚಳ (ಬಾಟಲ್ ಕಾರ್ಕ್ ) ಎಸೆಯಲಾಗಿದೆ.

ಭಾರತದ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್‌ ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಶತಕ (129) ಗಳಿಸಿ ಇಂಗ್ಲೆಂಡ್‌ ತಂಡವನ್ನು ಕಾಡಿದ್ದರು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವ ವೇಳೆ ಇನ್ನಿಂಗ್ಸ್ ನ 69ನೇ ಓವರ್‌ನ ವೇಳೆ, ಮೊಹಮದ್‌ ಶಮಿ ಅವರು ಬೌಲಿಂಗ್‌ ಮಾಡುತ್ತಿದ್ದಾಗ, ಪ್ರೇಕ್ಷಕರ ಗ್ಯಾಲರಿಯಿಂದ  ರಾಹುಲ್‌ ಮೇಲೆ ಶಾಂಪೇನ್‌ ಬಾಟಲಿ ಮುಚ್ಚಳ ಎಸೆಯಲಾಗಿದೆ. ಈ ವೇಳೆ ರಾಹುಲ್ ಬೌಂಡರಿ ಗೆರೆಯ ಬಳಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದರು.

ಘಟನೆಯಿಂದ ಬೇಸರಗೊಂಡಂತೆ ಕಂಡ ವಿರಾಟ್‌ ಕೊಹ್ಲಿ ಅವರು, ಮುಚ್ಚಳವನ್ನು ಎಸೆಯುವಂತೆ ಹೇಳಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಭಾರತದ ಆಟಗಾರರು ಅಂಪೈರ್‌ಗಳಾದ ಮೈಕೆಲ್ ಗಾಗ್ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್ ಅವರೊಂದಿಗೆ ಮಾತುಕತೆ ನಡೆಸಿದರು. ಹೀಗಾಗಿ ಪಂದ್ಯ ಕೆಲಕಾಲ ಸ್ತಗಿತಗೊಂಡಿತ್ತು. 

ಈ ವರ್ಷದ ಆರಂಭದಲ್ಲಿ, ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿ ಜನಾಂಗೀಯ ನಿಂದನೆಗಳನ್ನು ಎದುರಿಸಿತ್ತು. ಮೊಹಮ್ಮದ್ ಸಿರಾಜ್ ಅವರನ್ನು ನಿಂದಿಸಲಾಗಿತ್ತು. ಇದೀಗ ಇಂಗ್ಲೆಂಡ್ ನೆಲದಲ್ಲೂ ಅಂತಹುದೇ ಘಟನೆ ಮರುಕಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com