ಸೋತ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ: ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ಎಜಾಜ್ ಪಟೇಲ್

ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಎಲ್ಲ 10 ವಿಕೆಟ್ ಪಡೆದು ಎಜಾಜ್ ಪಟೇಲ್ ಐತಿಹಾಸಿಕ ದಾಖಲೆ ಮಾಡಿದ್ದರೂ ಸಹ ಆ ಪಂದ್ಯವನ್ನು ಗೆಲ್ಲಲಾಗಲಿಲ್ಲ. 
ಎಜಾಜ್ ಪಟೇಲ್
ಎಜಾಜ್ ಪಟೇಲ್

ಮುಂಬೈ: ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಎಲ್ಲ 10 ವಿಕೆಟ್ ಪಡೆದು ಎಜಾಜ್ ಪಟೇಲ್ ಐತಿಹಾಸಿಕ ದಾಖಲೆ ಮಾಡಿದ್ದರೂ ಸಹ ಆ ಪಂದ್ಯವನ್ನು ಗೆಲ್ಲಲಾಗಲಿಲ್ಲ. 

ಹೌದು.. ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ 10 ವಿಕೆಟ್ ಪಡೆದಿದ್ದ ಕಿವೀಸ್ ಎಜಾಜ್ ಪಟೇಲ್ 2ನೇ ಇನ್ನಿಂಗ್ಸ್ ನಲ್ಲೂ 4 ವಿಕೆಟ್ ಪಡೆದಿದ್ದರು. ಆ ಮೂಲಕ 2ನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು ಅವರು 14 ವಿಕೆಟ್ ಪಡೆದು ಟೆಸ್ಟ್ ಕ್ರಿಕೆಟ್ ಜೀವನದ ಸರ್ವಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ್ದರು. 

Best match bowling figures in a losing cause
14/225 - Ajaz Patel v IND, 2021*
13/132 - Javagal Srinath v PAK, 1999
13/163 - Sydney Barnes v AUS, 1902
13/217 - Merv Hughes v WI, 1988
13/244 - Tom Richardson v AUS, 1896

ಅಂತೆಯೇ ಸರ್ವಶ್ರೇಷ್ಠ ಪ್ರದರ್ಶನದ ಹೊರತಾಗಿಯೂ ಪಂದ್ಯ ಸೋತ ಪಟ್ಟಿಯಲ್ಲಿ ಏಜಾಜ್ ಅಗ್ರಸ್ಥಾನಿಯಾಗಿದ್ದಾರೆ. ಈ ಹಿಂಗೆ 1999ರಲ್ಲಿ ಪಾಕಿಸ್ತಾನದ ಭಾರತ ಜಾವಗಲ್ ಶ್ರೀನಾಥ್ 2 ಇನ್ನಿಂಗ್ಸ್ ನಿಂದ 132ರನ್ ನೀಡಿ 13 ವಿಕೆಟ್ ಪಡೆದಿದ್ದರು. ಆ ಪಂದ್ಯವನ್ನು ಭಾರತ ಸೋತಿತ್ತು. ಅಂತೆಯೇ 1902ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಸಿಡ್ನಿ ಬರ್ನ್ಸ್ 163ಕ್ಕೆ 13 ವಿಕೆಟ್ ಪಡೆದಿದ್ದರು. ಆ ಪಂದ್ಯವನ್ನು ಇಂಗ್ಲೆಂಡ್ ಸೋತಿತ್ತು.

ಬಳಿಕ 1988ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆಸ್ಚ್ರೇಲಿಯಾದ ಮರ್ವ್ ಹ್ಯೂಸ್ 217ರನ್ ಗಳಿಗೆ 13 ವಿಕೆಟ್ ಪಡೆದಿದ್ದರು. ಆ ಪಂದ್ಯವನ್ನೂ ಆಸ್ಟ್ರೇಲಿಯಾ ಸೋತಿತ್ತು. ಅಂತೆಯೇ 1896ರಲ್ಲಿ ಆಸ್ಚ್ರೇಲಿಯಾ ವಿರುದ್ಧ ಇಂಗ್ಲೆಂಡ್ ನ ಟಾಮ್ ರಿಚರ್ಡ್ ಸನ್ 244 ರನ್ ಗಳಿಗೆ 13 ವಿಕೆಟ್ ಪಡೆದಿದ್ದರು. ಇದು ಅವರ ಸರ್ವಶ್ರೇಷ್ಠ ಪ್ರದರ್ಶನವಾಗಿದ್ದರೂ ಆ ಪಂದ್ಯವನ್ನು ಇಂಗ್ಲೆಂಡ್ ಸೋತಿತ್ತು.

ದಾಖಲೆ ಬರೆದ ಭಾರತೀಯ ಸಂಜಾತ ಕಿವಿಸ್ ಬೌಲರ್
ಇನ್ನು ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಸ್ಪಿನ್ನರ್ ಅಜಾಜ್ ಪಟೇಲ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಅಜಾಜ್ ಪಟೇಲ್ ಭಾರತದ ಎಲ್ಲಾ ಹತ್ತೂ ವಿಕಟ್‌ಗಳನ್ನು ಒಬ್ಬರೆ ಪಡೆದು ದಾಖಲೆ ಬರೆದಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಕೇವಲ ಮೂರನೇ ಆಟಗಾರ ಎನಿಸಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿಯೂ ಈ ಉತ್ತಮ ಪ್ರದರ್ಶನ ಮುಂದುವರಿಸಿದ ಅಜಾಜ್ ಪಟೇಲ್ ನಾಲ್ಕು ವಿಕೆಟ್‌ಗಳನ್ನು ಕೆಡವಿದ್ದರು. ಈ ಮೂಲಕ ಟೀಮ್ ಇಂಡಿಯಾಗೆ ಮತ್ತೊಮ್ಮೆ ಅಡ್ಡಿಯಾದರು ಈ ಭಾರತೀಯ ಸಂಜಾತ ನ್ಯೂಜಿಲೆಂಡ್ ಆಟಗಾರ. ಒಟ್ಟಯ ಈ ಪಂದ್ಯದಲ್ಲಿ ಅಜಾಜ್ ಪಟೇಲ್ ಭಾರತದ 14 ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com