ಕ್ರಿಕೆಟ್ ಇತಿಹಾದಲ್ಲೇ ನ್ಯೂಜಿಲೆಂಡ್ ಗೆ ಅತ್ಯಂತ ದೊಡ್ಡ ಹೀನಾಯ ಸೋಲು!!

ಭಾರತದ ವಿರುದ್ಧ 372ರನ್ ಗಳ ಅಂತರದಲ್ಲಿ 2ನೇ ಟೆಸ್ಟ್ ಪಂದ್ಯವನ್ನು ಸೋತು ಸರಣಿ ಕಳೆದುಕೊಂಡಿರುವ ನ್ಯೂಜಿಲೆಂಡ್ ತಂಡ ಇತಿಹಾಸದಲ್ಲೇ ಅತೀ ದೊಡ್ಡ ಸೋಲು ಕಂಡಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ಮುಂಬೈ: ಭಾರತದ ವಿರುದ್ಧ 372ರನ್ ಗಳ ಅಂತರದಲ್ಲಿ 2ನೇ ಟೆಸ್ಟ್ ಪಂದ್ಯವನ್ನು ಸೋತು ಸರಣಿ ಕಳೆದುಕೊಂಡಿರುವ ನ್ಯೂಜಿಲೆಂಡ್ ತಂಡ ಇತಿಹಾಸದಲ್ಲೇ ಅತೀ ದೊಡ್ಡ ಸೋಲು ಕಂಡಿದೆ.

ಹೌದು.. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಮುಕ್ತಾಯವಾದ 2ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ 372ರನ್ ಗಳ ಅಂತರದಲ್ಲಿ ಸೋಲಿಸಿತು. ಆ ಮೂಲಕ ಭಾರತ ತನ್ನ ಕ್ರಿಕೆಟ್ ಇತಿಹಾಸದಲ್ಲಿಯೇ ಅತೀ ದೊಡ್ಡ ಗೆಲುವು ಸಾಧಿಸಿದರೆ, ಅತ್ತ ನ್ಯೂಜಿಲೆಂಡ್ ತಂಡ ತನ್ನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಹೀನಾಯ ಸೋಲು ಕಂಡಿದೆ.

ಈ ಹಿಂದೆ ಇದೇ ನ್ಯೂಜಿಲೆಂಡ್ ತಂಡ ಜೋಹಾನ್ಸ್ ಬರ್ಗ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 358ರನ್ ಗಳ ಅಂತರದಲ್ಲಿ ಸೋಲು ಕಂಡಿತ್ತು. ಇದಾದ ಬಳಿಕ 2016ರಲ್ಲಿ ಇಂದೋರ್ ನಲ್ಲಿ ನ್ಯೂಜಿಲೆಂಡ್ ತಂಡ 321ರನ್ ಗಳ ಅಂತರದಲ್ಲಿ ಸೋಲು ಕಂಡಿತ್ತು. ಅಂತೆಯೇ 2001ರಲ್ಲಿ ಪಾಕಿಸ್ತಾನ ವಿರುದ್ಧ ಆಕ್ಲೆಂಡ್ ನಲ್ಲಿ 299ರನ್ ಗಳ ಅಂತರದಲ್ಲಿ ಸೋಲು ಕಂಡಿತ್ತು.

Biggest defeat for New Zealand (by runs):
372 runs vs IND, Mumbai 2021*
358 runs vs SA, Jo'burg 2007
321 runs vs IND, Indore 2016
299 runs vs PAK, Auckland 2001

Biggest Test wins for India v New Zealand:
Inns & 198 runs, Nagpur 2010
Inns & 115 runs, Hyderabad 2012
Inns & 109 runs, Chennai 1956 
Inns & 27 runs, Mumbai BS 1955
372 runs, Mumbai WS 2021*

ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 6ನೇ ದೊಡ್ಡ ಗೆಲುವು
ಇನ್ನು ಇಂದಿನ ಜಯ ಭಾರತಕ್ಕೆ ನ್ಯೂಜಿಲೆಂಡ್ ವಿರುದ್ಧ 6ನೇ ದೊಡ್ಡ ಗೆಲುವಾಗಿದೆ. ಈ ಹಿಂದೆ 2010ರಲ್ಲಿ ನಾಗ್ಪುರ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 198ರನ್ ಗಳ ಅಂತರದ ಜಯ ಸಾಧಿಸಿತ್ತು. ಇದು ನ್ಯೂಜಿಲೆಂಡ್ ವಿರುದ್ಧದ ಅತೀ ದೊಡ್ಡ ಗೆಲುವಾಗಿದೆ. 2012ರಲ್ಲಿ ಹೈದರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 115ರನ್ ಗೆಲುವು ಸಾಧಿಸಿತ್ತು. ಅಂತೆಯೇ 1956ರಲ್ಲಿ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಇನ್ನಿಂಗ್ಸ್ ಮತ್ತು 109ರನ್ ಗಳ ಜಯ ಸಾಧಿಸಿತ್ತು. 1955ರಲ್ಲಿ ಮುಂಬೈನಲ್ಲಿ ಇನ್ನಿಂಗ್ಸ್ ಮತ್ತು 27ರನ್ ಗಳ ಅಂತರದ ಜಯ ಸಾಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com