ಕೃಣಾಲ್ ಪಾಂಡ್ಯ
ಕೃಣಾಲ್ ಪಾಂಡ್ಯ

ಕೊರೋನಾ ಸೋಂಕು: ಲಂಕಾ ಸರಣಿಯಿಂದ ಕೃಣಾಲ್ ಪಾಂಡ್ಯ ಔಟ್, ಸಂಪರ್ಕಿತರ ಪರೀಕ್ಷೆ ನೆಗೆಟಿವ್ ಬಂದರೂ ಮೈದಾನಕ್ಕಿಳಿಯುವಂತಿಲ್ಲ!

ಭಾರತ ಮತ್ತು ಶ್ರೀಲಂಕಾ ಸರಣಿ ಮೇಲೆ ಕೋವಿಡ್ ಭೀತಿ ಎದುರಾಗಿದ್ದು, ಆಲ್ ರೌಂಡರ್ ಕೃಣಾಲ್ ಪಾಂಡ್ಯ ಸೋಂಕಿಗೆ ತುತ್ತಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಕೊಲಂಬೋ: ಭಾರತ ಮತ್ತು ಶ್ರೀಲಂಕಾ ಸರಣಿ ಮೇಲೆ ಕೋವಿಡ್ ಭೀತಿ ಎದುರಾಗಿದ್ದು, ಆಲ್ ರೌಂಡರ್ ಕೃಣಾಲ್ ಪಾಂಡ್ಯ ಸೋಂಕಿಗೆ ತುತ್ತಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಮಂಗಳವಾರ ಕೃಣಾಲ್ ಪಾಂಡ್ಯ ಸೋಂಕಿಗೆ ತುತ್ತಾದ ಬೆನ್ನಲ್ಲೇ ಅಂದು ನಡೆಯಬೇಕಿದ್ದ 2ನೇ ಟಿ20 ಪಂದ್ಯವನ್ನು ಮುಂದೂಡಲಾಗಿದ್ದು, ಉಭಯ ತಂಡಗಳ ಆಟಗಾರರನ್ನು ಐಸೋಲೇಷನ್​ಗೆ ಒಳಪಡಿಸಲಾಗಿದೆ. ಪಂದ್ಯಕ್ಕೂ ಮುನ್ನ ನಡೆಸಿದ ರ್ಯಾಪಿಡ್ ಅ್ಯಂಟಿ ಜೆನ್ ಟೆಸ್ಟ್​ನಲ್ಲಿ ಕೃಣಾಲ್ ಪಾಂಡ್ಯ ಸೋಂಕಿಗೆ  ಒಳಗಾಗಿರುವುದು ದೃಢಪಟ್ಟಿತ್ತು.

ಸರಣಿಯೇ ರದ್ದಾಗುವ ಭೀತಿ
ಈ ಹಿನ್ನಲೆಯಲ್ಲಿ ಇದೀಗ ಟೀಮ್ ಇಂಡಿಯಾದ ಎಲ್ಲಾ ಆಟಗಾರರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಆಟಗಾರರು ಸೇರಿದಂತೆ ಕೋಚ್ ಮತ್ತು ಸಹಾಯಕ ಸಿಬ್ಬಂದಿಗಳನ್ನೂ ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಅದರಲ್ಲೂ 8 ಆಟಗಾರರು ಕೃಣಾಲ್ ಪಾಂಡ್ಯ ಅವರೊಂದಿಗೆ ನೇರ ಸಂಪರ್ಕ  ಹೊಂದಿದ್ದರು ಎಂಬುದನ್ನು ಬಿಸಿಸಿಐ ದೃಢಪಡಿಸಿದೆ. ಹೀಗಾಗಿ ಈ ಆಟಗಾರರ ಮೇಲೆ ತೀವ್ರ ನಿಗಾ ಇಡಲಾಗಿದೆ. ಒಂದು ವೇಳೆ ಈ ಆಟಗಾರರಲ್ಲೂ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ಸರಣಿಯೇ ರದ್ದಾಗುವ ಸಾಧ್ಯತೆಯಿದೆ ಹೆಚ್ಚಿದೆ.

ಟೆಸ್ಟ್ ನೆಗೆಟಿವ್ ಬಂದರೂ ಮೈದಾನಕ್ಕಿಳಿಯುವಂತಿಲ್ಲ ಆಟಗಾರರು
ಇನ್ನು ಕೃಣಾಲ್ ಪಾಂಡ್ಯ ಸಂಪರ್ಕಕ್ಕೆ ಬಂದಿದ್ದ 8 ಮಂದಿ ಆಟಗಾರರನ್ನೂ ಪರೀಕ್ಷೆಗೊಳಪಡಿಸಲಾಗಿದ್ದು, ಅವರ ವರದಿ ನೆಗೆಟಿವ್ ಬಂದಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಅವರನ್ನು ಐಸೊಲೇಷನ್ ನಲ್ಲಿರಿಸಲಾಗಿದ್ದು, ಬುಧವಾರ ನಡೆಯುವ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದಿಲ್ಲ ಎನ್ನಲಾಗಿದೆ. 

ಇತ್ತ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಕೃನಾಲ್ ಪಾಂಡ್ಯ ಜೊತೆ ನೇರ ಸಂಪರ್ಕ ಹೊಂದಿದ್ದರು. ಹೀಗಾಗಿ ಇಂಗ್ಲೆಂಡ್​ ಸರಣಿಗೆ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್ ಹಾಗೂ ಪೃಥ್ವಿ ಶಾ ಅವರಲ್ಲೂ ಆತಂಕ ಎದುರಾಗಿದೆ. ಅದರಲ್ಲೂ ಚೊಚ್ಚಲ ಬಾರಿ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ  ಸೂರ್ಯಕುಮಾರ್ ಯಾದವ್ ಚಿಂತೆಗೀಡಾಗಿದ್ದಾರೆ.

ಬ್ಯಾಕ್ ಟು ಬ್ಯಾಕ್ ಪಂದ್ಯಗಳು
ಇನ್ನು ಸರಣಿಯ ಉಳಿದಿರುವ ಎರಡು ಪಂದ್ಯಗಳನ್ನು ಬುಧವಾರ ಮತ್ತು ಗುರುವಾರ ಬ್ಯಾಕ್ ಟು ಬ್ಯಾಕ್ ಆಡಿಸಲು ನಿರ್ಧರಿಸಲಾಗಿದೆ.

ಲಂಕಾ ಬ್ಯಾಟಿಂಗ್ ಕೋಚ್ ಗೂ ರೋಗ ಲಕ್ಷಣಗಳಿದ್ದವು
ಈ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ ಪ್ರವಾಸ ಮುಗಿಸಿ ಹಿಂದಿರುಗಿದ ಶ್ರೀಲಂಕಾದ ಎಲ್ಲಾ ಆಟಗಾರರನ್ನು ಕೊರೋನಾ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಈ ವೇಳೆ ಆಟಗಾರರ ಫಲಿತಾಂಶ ನೆಗೆಟಿವ್ ಬಂದರೂ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಹಾಗೂ ಸಿಬ್ಬಂದಿಯಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಿತ್ತು.  ಇದೇ ಕಾರಣದಿಂದ ಭಾರತ, ಶ್ರೀಲಂಕಾ ಸರಣಿ ವೇಳಾಪಟ್ಟಿಯನ್ನು ಬದಲಿಸಲಾಗಿತ್ತು. ಅದರಂತೆ ಜುಲೈ 13 ರಿಂದ ಶುರುವಾಗಬೇಕಿದ್ದ ಸರಣಿಯನ್ನು ಜುಲೈ 18 ರಿಂದ ಪ್ರಾರಂಭಿಸಲಾಗಿತ್ತು. ಇದೀಗ ಮತ್ತೊಮ್ಮೆ ಕೊರೋನಾಂತಕ ಎದುರಾಗಿದೆ.
 

Related Stories

No stories found.

Advertisement

X
Kannada Prabha
www.kannadaprabha.com