ಐಪಿಎಲ್: ಡೆಕನ್ ಚಾರ್ಜರ್ಸ್ ವಿರುದ್ಧದ ಕಾನೂನು ಹೋರಾಟದಲ್ಲಿ ಬಿಸಿಸಿಐಗೆ ಗೆಲುವು

ಡೆಕ್ಕನ್ ಚಾರ್ಜರ್ಸ್ (ಡಿಸಿ) ಮತ್ತು ಬಿಸಿಸಿಐ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದ್ದ ಕೋರ್ಟ್ ಮೊಕದ್ದಮೆ ವಿಚಾರದಲ್ಲಿ ಬಿಸಿಸಿಐಗೆ ಭಾರಿ ನಿರಾಳತೆ ದೊರೆತಿದ್ದು, ಡೆಕ್ಕನ್ ಚಾರ್ಜರ್ಸ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೇ ಹೈಕೋರ್ಟ್ ವಜಾಗೊಳಿಸಿದೆ.
ಬಿಸಿಸಿಐ
ಬಿಸಿಸಿಐ

ನವದೆಹಲಿ: ಡೆಕ್ಕನ್ ಚಾರ್ಜರ್ಸ್ (ಡಿಸಿ) ಮತ್ತು ಬಿಸಿಸಿಐ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದ್ದ ಕೋರ್ಟ್ ಮೊಕದ್ದಮೆ ವಿಚಾರದಲ್ಲಿ ಬಿಸಿಸಿಐಗೆ ಭಾರಿ ನಿರಾಳತೆ ದೊರೆತಿದ್ದು, ಡೆಕ್ಕನ್ ಚಾರ್ಜರ್ಸ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೇ ಹೈಕೋರ್ಟ್ ವಜಾಗೊಳಿಸಿದೆ.

ಮಾಜಿ ಐಪಿಎಲ್ ತಂಡವಾದ ಡೆಕ್ಕನ್ ಚಾರ್ಜರ್ಸ್ ಬಾಂಬೆ ಹೈಕೋರ್ಟ್‌ನಲ್ಲಿ ದಾಖಲಾದ ಪ್ರಕರಣದಲ್ಲಿ ಬಿಸಿಸಿಐ ಪರವಾಗಿ ತೀರ್ಪು ನೀಡಲಾಗಿದ್ದು, ಡಿಸಿಎಚ್‌ಎಲ್‌ಗೆ (ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್) ರೂ. 4,800 ಕೋಟಿ ರೂ.ಗಳನ್ನು ಪಾವತಿಸುವಂತೆ ಕೋರಿ ಮಧ್ಯಸ್ಥಿಕೆಯ  ಆದೇಶವನ್ನು ನ್ಯಾಯಮೂರ್ತಿ ಜಿ.ಎಸ್. ಈ ಪಟೇಲ್ ನೇತೃತ್ವದ ಬಾಂಬೆ ಹೈಕೋರ್ಟ್ ಪೀಠ ವಜಾಗೊಳಿಸಿದೆ.

ಡೆಕ್ಕನ್ ಚಾರ್ಜರ್ಸ್ 2008 ರಿಂದ ಐದು ವರ್ಷಗಳಿಂದ ಐಪಿಎಲ್‌ನಲ್ಲಿ ಪಾಲ್ಗೊಂಡಿತ್ತು. 2009 ರಲ್ಲಿ ಚಾಂಪಿಯನ್ ಕೂಡ ಆಗಿತ್ತು.  ಆದರೆ 2012 ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ಫ್ರಾಂಚೈಸಿಗಳು 100 ಕೋಟಿ ರೂ.ಗೆ ಭದ್ರತೆ ಒದಗಿಸಲು ವಿಫಲವಾದ ಕಾರಣ ಬಿಸಿಸಿಐ  ತಂಡದ ಮಾಲೀಕರಾದ ಡಿಸಿಎಚ್‌ಎಲ್‌ಗೆ ಶೋಕಾಸ್ ನೋಟಿಸ್ ಕಳುಹಿಸಿ ಪ್ರತಿಕ್ರಿಯಿಸಲು ಬಿಸಿಸಿಐ ಮಾಲೀಕರಿಗೆ 30 ದಿನಗಳ ಕಾಲಾವಕಾಶ ನೀಡಿತ್ತು.  ಇದು ಬಿಸಿಸಿಐ ಮತ್ತು ಡಿಸಿಎಚ್‌ಎಲ್ ನಡುವಿನ ಕೋರ್ಟ್ ವಿವಾದಕ್ಕೆ ನಾಂದಿ ಹಾಡಿತ್ತು. 

ಆದರೆ, ಈ ಗಡುವು ಮುಕ್ತಾಯವಾದರೂ ಡಿಸಿಎಚ್‌ಎಲ್ ಭದ್ರತಾ ಠೇವಣೆ ಇಡಲು ವಿಫಲಲಾಗಿದ್ದು ಮಾತ್ರವಲ್ಲದೇ ಪ್ರತಿಕ್ರಿಯೆ ಕೂಡ ನೀಡಿರಲಿಲ್ಲ. ಹೀಗಾಗಿ ಬಿಸಿಸಿಐ ತಂಡದ ಫ್ರಾಂಚೈಸಿಗಳನ್ನು ವಿಸರ್ಜಿಸುವುದಾಗಿ ಹೇಳಿತು. ಬಳಿಕ ಈ ತಂಡದ ಫ್ರಾಂಚೈಸಿಗಳು ಬದಲಾಗಿ ಸನ್ ನೆಟ್ವರ್ಕ್  ಸಂಸ್ಥೆ ಫ್ರಾಂಚೈಸಿ ಪಡೆದಿತ್ತು. ಈ ತಂಡಕ್ಕೆ ಸನ್ ರೈಸರ್ಸ್ ಹೈದರಬಾದ್ ಎಂದು ಹೆಸರಿಡಲಾಗಿತ್ತು. 

ಆದರೆ, ಡಿಸಿ ಯನ್ನು ಐಪಿಎಲ್ ಲೀಗ್‌ನಿಂದ ಹೊರಗಿಡುವುದು ಕಾನೂನುಬಾಹಿರ ಎಂದು ಡಿಸಿಎಚ್‌ಎಲ್ ಕಂಪನಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿತ್ತು. ಅಲ್ಲದೆ ಬಿಸಿಸಿಐ ನಡೆಯಿಂದ ತನಗೆ ಭಾರಿ ಮೊತ್ತದ ನಷ್ಟವಾಗಿದ್ದು, ಕೂಡಲೇ ಬಿಸಿಸಿಐ ಪರಿಹಾರವಾಗಿ ಬಡ್ಡಿ ಮತ್ತು ಇತರ ವೆಚ್ಚಗಳು  ಸೇರಿದಂತೆ ರೂ. 8,000 ಕೋಟಿ ರೂ.ಗಳನ್ನು ಬಿಸಿಸಿಐಗೆ ಪಾವತಿಸುವಂತೆ ಡೆಕ್ಕನ್ ಚಾರ್ಜರ್ಸ್ ನ್ಯಾಯಾಲಯವನ್ನು ಕೋರಿತ್ತು. ಉಳಿದ ಐದು ವರ್ಷಗಳ ಫ್ರ್ಯಾಂಚೈಸಿ ಶುಲ್ಕದ ಅಡಿಯಲ್ಲಿ 214 ಕೋಟಿ ರೂ. ಅವುಗಳನ್ನು ಪಾವತಿಸುವಂತೆ ಸೂಚಿಸಬೇಕು ನ್ಯಾಯಾಲಯಕ್ಕೆ ಮನವಿ  ಮಾಡಿದ್ದರು. 

ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ತಂಡವನ್ನು ವಜಾಗೊಳಿಸುವುದು ಸೂಕ್ತವಲ್ಲ ಎಂದು ಮಧ್ಯಸ್ಥಿಕೆ ನ್ಯಾಯಾಲಯ ತೀರ್ಪು ನೀಡಿತು. ಪರಿಹಾರ ಮತ್ತು ಮಧ್ಯಸ್ಥಿಕೆ ಇತ್ಯಾದಿಗಳಿಗೆ 2012 ರಿಂದ 4,814.67 ಕೋಟಿ ರೂ. ಜೊತೆಗೆ ವಾರ್ಷಿಕ 10 ಶೇಕಡಾ ಬಡ್ಡಿ ಸಹಿತ  ಬಿಸಿಸಿಐ 50 ಲಕ್ಷ ರೂಗಳನ್ನು ಡಿಸಿಎಚ್‌ಎಲ್ ಗೆ ನೀಡಬೇಕು ಎಂದು ಆದೇಸಿತ್ತು, ಈ ಆದೇಶದ ವಿರುದ್ಧ ಬಿಸಿಸಿಐ ಬಾಂಬೇ ಹೈಕೋರ್ಟ್ ನಲ್ಲಿ ದಾವೆ ಹೂಡಿತ್ತು. 

ಬಿಸಿಸಿಐ ಸಂತಸ
ಇನ್ನು ತೀರ್ಪಿನ ಕುರಿತಂತೆ ಬಿಸಿಸಿಐ ಸಂತಸ ವ್ಯಕ್ತಪಡಿಸಿದ್ದು, 'ಬೆಳವಣಿಗೆಯ ಬಗ್ಗೆ ತಿಳಿದು ನಮಗೆ ತುಂಬಾ ಖುಷಿಯಾಗಿದೆ. ತೀರ್ಪು ನಮ್ಮ ಪರವಾಗಿ ಬರುವುದರಲ್ಲಿದೆ. ಯಾಕೆಂದರೆ ನಾವು ಒಪ್ಪಂದದಲ್ಲಿ ಹೇಳಿರುವಂತೆ ನಡೆದುಕೊಂಡಿದ್ದೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ  ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com