ಕ್ರಿಕೆಟ್ ಇತಿಹಾಸದ ಮೊಟ್ಟ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್: ಗರಿಷ್ಠ ವಿಕೆಟ್ ದಾಖಲೆ ಬರೆದ ಆರ್.ಅಶ್ವಿನ್

ನಿನ್ನೆ ಮುಕ್ತಾಯವಾದ ಕ್ರಿಕೆಟ್ ಇತಿಹಾಸದ ಮೊಟ್ಟ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಟೂರ್ನಿಯಲ್ಲಿ ಭಾರತ ಆರ್ ಅಶ್ವಿನ್ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು, ಗರಿಷ್ಠ ವಿಕೆಟ್ ಪಡೆದ ಕೀರ್ತಿಗೆ ಭಾಜನರಾಗಿದ್ದಾರೆ.
ಆರ್ ಅಶ್ವಿನ್
ಆರ್ ಅಶ್ವಿನ್

ಸೌಥ್ಯಾಂಪ್ಟನ್: ನಿನ್ನೆ ಮುಕ್ತಾಯವಾದ ಕ್ರಿಕೆಟ್ ಇತಿಹಾಸದ ಮೊಟ್ಟ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಟೂರ್ನಿಯಲ್ಲಿ ಭಾರತ ಆರ್ ಅಶ್ವಿನ್ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು, ಗರಿಷ್ಠ ವಿಕೆಟ್ ಪಡೆದ ಕೀರ್ತಿಗೆ ಭಾಜನರಾಗಿದ್ದಾರೆ.

2019-21ರ ನಡುವೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ ಷಿಪ್ ಟೂರ್ನಿಯಲ್ಲಿ ಆರ್ ಅಶ್ವಿನ್ ಒಟ್ಟು  71 ವಿಕೆಟ್‌ಗಳನ್ನು ಕಬಳಿಸಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. 

34 ವರ್ಷದ ತಮಿಳುನಾಡು ಮೂಲದ ಆಫ್ ಸ್ಪಿನ್ನರ್ ಅಶ್ವಿನ್ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ ಷಿಪ್ ಫೈನಲ್‌ನಲ್ಲಿ 4 ವಿಕೆಟ್ ಪಡೆದು ಈ ಸಾಧನೆ ಮಾಡಿದ್ದಾರೆ. ಫೈನಲ್‌ನಲ್ಲಿ ಅಶ್ವಿನ್ ಮೊದಲ ಇನ್ನಿಂಗ್ಸ್ ನಲ್ಲಿ 28 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಅಂತೆಯೇ ಎರಡನೇ ಇನ್ನಿಂಗ್ಸ್‌ನಲ್ಲೂ   (2/17) ತಲಾ ಎರಡು ವಿಕೆಟ್ ಪಡೆದರು. ಆ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ ಷಿಪ್ ನಲ್ಲಿ ಫೈನಲ್ ಪಂದ್ಯವೂ ಸೇರಿದಂತೆ ಒಟ್ಟು 14 ಪಂದ್ಯಗಳಿಂದ ಅಶ್ವಿನ್ ತಮ್ಮ ವಿಕೆಟ್ ಗಳಿಕೆಯನ್ನು 71ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ ಷಿಪ್ ನಲ್ಲಿ  ಗರಿಷ್ಠ ವಿಕೆಟ್ ಪಡೆದ ಬೌಲರ್  ಎಂಬ ಕೀರ್ತಿಗೆ ಭಾಜನರಾದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com