ನಾಳೆ ಟಿ20 ವಿಶ್ವಕಪ್ ಫೈನಲ್: ಮೂರು ಫಾರ್ಮ್ಯಾಟ್ ಕ್ರಿಕೆಟ್ ನಲ್ಲಿ ನಂಬರ್ 1 ಆಗಲು ಕಿವೀಸ್ ಗೆ ಸುವರ್ಣಾವಕಾಶ

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಗೇರಿ ವಿರೋಚಿತ ಸೋಲು ಕಂಡು, ಏಕದಿನ ಕ್ರಿಕೆಟ್ ನಲ್ಲಿ ನಂಬರ್ 1 ಸ್ಥಾನಕ್ಕೇರಿದ್ದ ನ್ಯೂಜಿಲೆಂಡ್ ತಂಡ ಬಳಿಕ ಭಾರತದ ವಿರುದ್ಧ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಗೆದ್ದು ಟೆಸ್ಟ್ ಕ್ರಿಕೆಟ್ ನಲ್ಲೂ ಅಗ್ರ ಸ್ಥಾನಕ್ಕೇರಿತ್ತು. ಇದೀಗ ಟಿ20 ಕ್ರಿಕೆಟ್ ನಲ್ಲೂ ಅಗ್ರ ಸ್ಥಾನಕ್ಕೇರುವ ಸುವರ್ಣಾವಕಾಶ ಕೇನ್ ವಿಲಿಯಮ್ಸನ್ ಪಡೆ ಮುಂದಿದೆ.
ನ್ಯೂಜಿಲೆಂಡ್ ವರ್ಸಸ್ ಆಸ್ಟ್ರೇಲಿಯಾ
ನ್ಯೂಜಿಲೆಂಡ್ ವರ್ಸಸ್ ಆಸ್ಟ್ರೇಲಿಯಾ

ದುಬೈ: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಗೇರಿ ವಿರೋಚಿತ ಸೋಲು ಕಂಡು, ಏಕದಿನ ಕ್ರಿಕೆಟ್ ನಲ್ಲಿ ನಂಬರ್ 1 ಸ್ಥಾನಕ್ಕೇರಿದ್ದ ನ್ಯೂಜಿಲೆಂಡ್ ತಂಡ ಬಳಿಕ ಭಾರತದ ವಿರುದ್ಧ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಗೆದ್ದು ಟೆಸ್ಟ್ ಕ್ರಿಕೆಟ್ ನಲ್ಲೂ ಅಗ್ರ ಸ್ಥಾನಕ್ಕೇರಿತ್ತು. ಇದೀಗ ಟಿ20 ಕ್ರಿಕೆಟ್ ನಲ್ಲೂ ಅಗ್ರ ಸ್ಥಾನಕ್ಕೇರುವ ಸುವರ್ಣಾವಕಾಶ ಕೇನ್ ವಿಲಿಯಮ್ಸನ್ ಪಡೆ ಮುಂದಿದೆ.

ಹೌದು.. ವಿಶ್ವ ಕ್ರಿಕೆಟ್ ನಲ್ಲಿ ಈ ಹಿಂದೆ ಆಸ್ಟ್ರೇಲಿಯಾ ತಂಡ ಕ್ರೀಡೆಯ ಎಲ್ಲ ಮಾದರಿಗಳಲ್ಲೂ ಅಧಿಪತ್ಯ ಸಾಧಿಸಿ ಅಗ್ರ ಸ್ಥಾನದಲ್ಲಿತ್ತು. ಇದೀಗ ಆ ಸ್ಥಾನ ನ್ಯೂಜಿಲೆಂಡ್ ಬಳಿಯಿದ್ದು, ಚುಟುಕು ಕ್ರಿಕೆಟ್ ನಲ್ಲೂ ತನ್ನ ಹೋರಾಟದ ಮೂಲಕ ಫೈನಲ್ ತಲುಪಿರುವ ಕೇನ್ ವಿಲಿಯಮ್ಸನ್ ಪಡೆ ಟಿ20 ವಿಶ್ವಕಪ್ ಗೆದ್ದು ಅಗ್ರ ಸ್ಥಾನ ಪಡೆಯುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. 

ನ್ಯೂಜಿಲೆಂಡ್ ಈ ವರೆಗೂ ಯಾವುದೇ ಪ್ರತ್ಯೇಕ ಆಟಗಾರನನ್ನು ನೆಚ್ಚಿಕೊಂಡು ಪಂದ್ಯಗಳನ್ನು ಗೆದ್ದಿಲ್ಲ. ತಾನು ಗೆದ್ದಿರುವ ಬಹುತೇಕ ಎಲ್ಲ ಪಂದ್ಯಗಳಲ್ಲಿ ಇಡೀ ತಂಡದ ಸಾಂಘಿಕ ಪ್ರದರ್ಶನದ ಮೇರೆಗೆ ಅದು ಜಯ ಗಳಿಸಿದೆ. ಮೈದಾನದಲ್ಲಿ ರಿಸಲ್ಟ್.. ಯಾರೂ ಊಹೆ ಮಾಡದ ರೀತಿಯಲ್ಲಿ ಎದುರಾಳಿ ತಂಡದ ವಿರುದ್ಧ ಯೋಜನೆ ರೂಪಿಸಿ ಸಕ್ಸಸ್ ಕಂಡಿರುವ ನ್ಯೂಜಿಲೆಂಡ್ ತಂಡದ ಆಟಗಾರರು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದ್ದಾರೆ.  

ಕ್ರಿಕೆಟ್ ನ ಮೂರೂ ಮಾದರಿಯಲ್ಲಿ ಅಗ್ರಸ್ಥಾನ ಪಡೆದ ಮೊದಲ ತಂಡವಾಗುತ್ತದೆಯೇ ನ್ಯೂಜಿಲೆಂಡ್?
ಪ್ರಸ್ತುತ ಟೆಸ್ಟ್ ಕ್ರಿಕೆಟ್ ಮತ್ತು ಒನ್ ಡೇಗಳಲ್ಲಿ ನ್ಯೂಜಿಲೆಂಡ್ ನಂಬರ್ ಒನ್ ತಂಡವಾಗಿ ಕ್ರಿಕೆಟ್ ರಂಗವನ್ನು ಆಳುತ್ತಿದೆ. ಈ ಮಧ್ಯೆ ಇಂಗ್ಲೆಂಡ್ ತಂಡವನ್ನು ಸೋಲಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಗೆ ಕಿವೀಸ್ ಲಗ್ಗೆ ಇಟ್ಟಿದೆ. ನವೆಂಬರ್ 14ರಂದು ಅಂದರೆ ನಾಳೆ ಬಲಾಢ್ಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಆದರೆ, ಈ ಟೂರ್ನಿ ಗೆದ್ದುಕೊಂಡು ಎಲ್ಲಾ 3 ಸ್ವರೂಪಗಳ ಐಸಿಸಿ ರಾಂಕಿಂಗ್ ನಲ್ಲಿ ನಂಬರ್ ಒನ್ ಆಗುವ ವಿಶ್ವದ ಮೊದಲ ತಂಡ ನ್ಯೂಜಿಲೆಂಡ್ ಆಗಲು ಸಾಧ್ಯವೇ? 

ನ್ಯೂಜಿಲೆಂಡ್ 3 ಸ್ವರೂಪಗಳಲ್ಲಿ ನಂ-1 ಆಗಲು ಏನು ಮಾಡಬೇಕು?
ವಿಶ್ವಕಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾವನ್ನು ಸೋಲಿಸಿದರೂ ಟಿ20ಗಳಲ್ಲಿ ವಿಶ್ವದ ನಂಬರ್ ಒನ್ ತಂಡ ಆಗಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ನವೆಂಬರ್ 17 ರಿಂದ ಟೀಂ ಇಂಡಿಯಾ ವಿರುದ್ಧದ ಸರಣಿಯನ್ನು ನ್ಯೂಜಿಲೆಂಡ್ ಎದುರು ನೋಡುತ್ತಿದೆ. 

ಟಿ20 ವಿಶ್ವಕಪ್ ಜಯಸಿದರೆ ಸಾಲದು, ಟೀಂ ಇಂಡಿಯಾವನ್ನು ಸೋಲಿಸಬೇಕು!
ಭಾರತ ಪ್ರವಾಸದಲ್ಲಿ ಟೀಂ ಇಂಡಿಯಾವನ್ನು ಕೇನ್ ವಿಲಿಯಮ್ಸನ್ ಪಡೆ 3-0 ಅಂತರದಿಂದ ಸೋಲಿಸಿದರೆ, ನ್ಯೂಜಿಲೆಂಡ್ 3 ಮಾದರಿಯ ಕ್ರಿಕೆಟ್ ನಲ್ಲಿ ವಿಶ್ವದ ನಂಬರ್ 1 ಟೀಮ್ ಆಗಿ ಮೆರೆಯಲಿದೆ. ಸದ್ಯ ಟಿ-20 ಕ್ರಿಕೆಟ್‌ನಲ್ಲಿ ವಿಲಿಯಮ್ಸನ್ ತಂಡ 4ನೇ ಸ್ಥಾನದಲ್ಲಿದ್ದು, ಅದೇ ಸಮಯದಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ.  ಟೀಂ ಇಂಡಿಯಾ ವಿರುದ್ಧದ ಟಿ20 ಸರಣಿಯನ್ನು 3-0ಅಂತರಗಲ್ಲಿ ಗೆದ್ದರೆ ಕಿವೀಸ್ ಪಡೆಯ ಅಂಕಗಳಿಕೆ 278 ದಾಟಲಿದೆ. ಆಗ ಕಿವೀಸ್ ಪಡೆ ಅಗ್ರ ಸ್ಥಾನಕ್ಕೇರುವ ಸಾಧ್ಯತೆ ಇದೆ. 

ಇಂಗ್ಲೆಂಡ್‌ಗೆ ಮಣ್ಣುಮುಕ್ಕಿಸಿದ ಕೇನ್!
2019ರ ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್‌ ಕೈಯಲ್ಲಿ ಸೋತಿದ್ದ ಕಿವೀಸ್, ಇದಕ್ಕಾಗಿ ಈ ಬಾರಿ ತಕ್ಕ ಉತ್ತರ ಕೊಟ್ಟಿದೆ. ಇದೀಗ ಚುಟುಕು ಪಂದ್ಯಗಳ ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವುದರ ಮೇಲೆ ಕಿವೀಸ್ ಕಣ್ಣು ನೆಟ್ಟಿದೆ. ಇದರೊಂದಿಗೆ, ವಿಲಿಯಮ್ಸನ್ ತಂಡವು ಭಾರತವನ್ನು 3-0 ಅಂತರದಲ್ಲಿ ಸೋಲಿಸುವುದು ಮತ್ತು ಕ್ರಿಕೆಟ್‌ನ ಎಲ್ಲಾ 3 ಸ್ವರೂಪಗಳಲ್ಲಿ ನಂಬರ್ ಒನ್ ಆಗುವ ಮೂಲಕ ಇತಿಹಾಸ ಬರೆಯಬೇಕೆಂದು ಯೋಜನೆ ಹಾಕಿಕೊಂಡಿದೆ. 

ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ತಾರಾ ಕೇನ್?
ನ್ಯೂಜಿಲೆಂಡ್ ಕೂಡ ಆಸ್ಟ್ರೇಲಿಯಾದ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. 2015ರ ಒನ್ ಡೇ (ODI) ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಕೈಯಲ್ಲಿ ನ್ಯೂಜಿಲೆಂಡ್ ಸೋಲು ಕಂಡಿತ್ತು. ಆದ್ರೆ, ಈ ಸೋಲನ್ನು ಕೇನ್ ವಿಲಿಯಮ್ಸನ್ ಆಟಗರಾರರು ಮರೆತಿಲ್ಲ. ನಾಳೆ ನಡೆಯಲಿರುವ ಟಿ-20 ವಿಶ್ವಕಪ್ ಫೈನಲ್ ನಲ್ಲಿ ಸೇಡು ತೀರಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಿದೆ. ಎರಡೂ ತಂಡಗಳು ಒಮ್ಮೆಯೂ ಟಿ20 ವಿಶ್ವಕಪ್ ಗೆದ್ದಿಲ್ಲ. ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಉಭಯ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು.
 

Related Article

ಬ್ಯಾಟಿಂಗ್ ನತ್ತ ಗಮನ ಹರಿಸಲು ಏಕದಿನ ನಾಯಕ ಸ್ಥಾನಕ್ಕೂ ಕೊಹ್ಲಿ ಗುಡ್ ಬೈ: ರವಿಶಾಸ್ತ್ರಿ ಹೇಳಿದ್ದೇನು?

17ರ ಪೈಕಿ 16 ಪಂದ್ಯದಲ್ಲಿ 2ನೇ ಬ್ಯಾಟಿಂಗ್ ಮಾಡಿದ ತಂಡಕ್ಕೆ ಜಯ; ದುಬೈ ಕ್ರೀಡಾಂಗಣದಲ್ಲಿ ಟಾಸ್ ಗೆದ್ದವನೇ ಬಾಸು!

ಸಿಡ್ನಿ ಟೆಸ್ಟ್ ಹೀರೋ ಹನುಮ ವಿಹಾರಿ ಮರೆತ ಆಯ್ಕೆ ಸಮಿತಿ ವಿರುದ್ಧ ಅಭಿಮಾನಿಗಳ ಆಕ್ರೋಶ, ಸ್ಪಷ್ಟನೆ ಕೊಟ್ಟ ಬಿಸಿಸಿಐ ಹೇಳಿದ್ದೇನು?

ಟಿ20 ವಿಶ್ವಕಪ್: ಪಾಕ್ ಗೆ ಮತ್ತೆ ನಾಕೌಟ್ ಹಾರ್ಟ್ ಬ್ರೇಕ್; 34 ವರ್ಷಗಳಿಂದ ಆಸಿಸ್ ಅಜೇಯ ದಾಖಲೆ ಮುಂದುವರಿಕೆ

ಟಿ20 ವಿಶ್ವಕಪ್: ಆಗ ಹಸ್ಸಿ, ಈಗ ವೇಡ್; ಪಾಕ್ ಕೈಯಿಂದ ಗೆಲುವು ಕಸಿದ ಆಸಿಸ್ ಎಡಗೈ ಬ್ಯಾಟ್ಸಮನ್ ಗಳು!

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ರೋಹಿತ್ ಶರ್ಮಾ ಔಟ್, ಮೊದಲ ಪಂದ್ಯ ಕೊಹ್ಲಿಗೆ ವಿಶ್ರಾಂತಿ

ಟಿ20 ವಿಶ್ವಕಪ್: ಪಾಕ್ ಮಣಿಸಿ, ರನ್ ಚೇಸಿಂಗ್ ನಲ್ಲೂ ದಾಖಲೆ ಬರೆದ ಆಸಿಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com