65 ವರ್ಷಗಳಲ್ಲಿ ಇದೇ ಮೊದಲು: ಬೌಲರ್ ಗೆ ಆಸಿಸ್ ಕ್ರಿಕೆಟ್ ತಂಡದ ಸಾರಥ್ಯ, ಪ್ಯಾಟ್ ಕಮಿನ್ಸ್ ನಾಯಕತ್ವ, ಸ್ಮಿತ್ ಉಪನಾಯಕ
ನಿರೀಕ್ಷೆಯಂತೆಯೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಿ ವೇಗಿ ಪ್ಯಾಟ್ ಕಮಿನ್ಸ್ ಆಯ್ಕೆಯಾಗಿದ್ದು, ಆ ಮೂಲಕ ಬರೊಬ್ಬರಿ 65 ವರ್ಷಗಳ ಬಳಿಕ ವೇಗಿಯೊಬ್ಬರು ಆಸ್ಟ್ರೇಲಿಯಾ ತಂಡದ ಸಾರಥ್ಯ ವಹಿಸಿದಂತಾಗಿದೆ.
Published: 26th November 2021 01:40 PM | Last Updated: 26th November 2021 01:40 PM | A+A A-

ಪ್ಯಾಟ್ ಕಮಿನ್ಸ್ ಮತ್ತು ಸ್ಟೀವೆನ್ ಸ್ಮಿತ್
ಸಿಡ್ನಿ: ನಿರೀಕ್ಷೆಯಂತೆಯೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಿ ವೇಗಿ ಪ್ಯಾಟ್ ಕಮಿನ್ಸ್ ಆಯ್ಕೆಯಾಗಿದ್ದು, ಆ ಮೂಲಕ ಬರೊಬ್ಬರಿ 65 ವರ್ಷಗಳ ಬಳಿಕ ವೇಗಿಯೊಬ್ಬರು ಆಸ್ಟ್ರೇಲಿಯಾ ತಂಡದ ಸಾರಥ್ಯ ವಹಿಸಿದಂತಾಗಿದೆ.
ಇದನ್ನೂ ಓದಿ: ಅಶ್ಲೀಲ ಮೆಸೇಜ್ ಪ್ರಕರಣ: ಆಸಿಸ್ ನಾಯಕನ ತಲೆದಂಡ; ಟೆಸ್ಟ್ ತಂಡದ ನಾಯಕತ್ವ ತೊರೆದ 'ಟಿಮ್ ಪೈನ್'
ಹೌದು.. ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಗೂ ಮುನ್ನ ಸೆಕ್ಸ್ಟಿಂಗ್ ವಿವಾದದ ಮೂಲಕ ನಾಯಕತ್ವದಿಂದ ಕೆಳಗಿಳಿದಿದ್ದ ನಾಯಕ ಟಿಮ್ ಪೈನ್ ಬದಲಿಗೆ ಆಲ್‌ರೌಂಡರ್ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾದ ಟೆಸ್ಟ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಅಂತೆಯೇ ಈ ಹಿಂದೆ ಬಾಲ್ ಟ್ಯಾಂಪರಿಂಗ್ ವಿವಾದದಿಂದಾಗಿ ನಾಯಕತ್ವ ಕಳೆದುಕೊಂಡಿದ್ದ ಸ್ವೀವನ್ ಸ್ಮಿತ್‌ರನ್ನು ಇದೀಗ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಟಿ-20 ವಿಶ್ವಕಪ್: ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು? ಸೋತರೂ ಭಾರತಕ್ಕೆ ದಕ್ಕಿದ್ದು ಎಷ್ಟು?
ಆಸ್ಟ್ರೇಲಿಯಾದ 47ನೇ ಟೆಸ್ಟ್ ನಾಯಕನಾಗಿ ಆಯ್ಕೆಯಾಗಿರುವ ಪ್ಯಾಟ್ ಕಮಿನ್ಸ್ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸಲಿದ್ದಾರೆ. ಈ ಮೂಲಕ 65 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡವನ್ನು ವೇಗದ ಬೌಲರ್ ಒಬ್ಬರು ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ.
The 47th captain of the Australian men's Test cricket team! @patcummins30