ಬಿಸಿಸಿಐ ಲೋಗೋ
ಬಿಸಿಸಿಐ ಲೋಗೋ

ಓಮಿಕ್ರಾನ್ ಭೀತಿ: ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ, ಬಿಸಿಸಿಐಗೆ ಧನ್ಯವಾದ ಹೇಳಿದ ಸಿಎಸ್ಎ!

ಭಾರತದ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ಕೋವಿಡ್-19 ರೂಪಾಂತರಿ ಓಮಿಕ್ರಾನ್ ಕರಿನೆರಳು ಆವರಿಸಿದ್ದು, ಭೀತಿಯ ನಡುವೆಯೂ ಪ್ರವಾಸ ಮುಂದುವರೆಸುವುದಾಗಿ ಬಿಸಿಸಿಐ ಹೇಳಿದೆ.

ನವದೆಹಲಿ: ಭಾರತದ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ಕೋವಿಡ್-19 ರೂಪಾಂತರಿ ಓಮಿಕ್ರಾನ್ ಕರಿನೆರಳು ಆವರಿಸಿದ್ದು, ಭೀತಿಯ ನಡುವೆಯೂ ಪ್ರವಾಸ ಮುಂದುವರೆಸುವುದಾಗಿ ಬಿಸಿಸಿಐ ಹೇಳಿದೆ.
 
ಬಿಸಿಸಿಐನ ಖಜಾಂಚಿ ಅರುಣ್ ಧುಮಾಲ್ ಮಾತನಾಡಿ, ಸದ್ಯಕ್ಕೆ ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿ ಯಾವುದೇ ಬದಲಾವಣೆ ಇಲ್ಲ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್-19 ನ ಹೊಸ ರೂಪಾಂತರಿಯಿಂದ ಉಂಟಾಗುತ್ತಿರುವ ಪರಿಸ್ಥಿತಿಗಳು ತೀವ್ರಗೊಳ್ಳದೇ ಇದ್ದಲ್ಲಿ ಎಲ್ಲವೂ ನಿಗದಿಯಂತೆಯೇ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮುಂಬೈ ನಲ್ಲಿ ನಿಗದಿಯಾಗಿರುವ ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ನಂತರ ಟೀಂ ಇಂಡಿಯಾ ಡಿ.8 ಅಥವಾ ಡಿ.9 ರಂದು ಜೋಹನ್ಸ್ ಬರ್ಗ್ ಗೆ ಪ್ರಯಾಣಿಸಲು ಅಣಿಯಾಗಬೇಕಿದೆ. 

ದಕ್ಷಿಣ ಆಫ್ರಿಕಾದಲ್ಲಿ ಸಿಎಸ್ಎ ಸೃಷ್ಟಿಸಿರುವ ಬಯೋ ಬಬಲ್ ಆಟಗಾರರನ್ನು ಸುರಕ್ಷಿತವಾಗಿಡಲಿದೆ ಎಂದು ಅರುಣ್ ಧುಮಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿ.17 ರಿಂದ ಮೊದಲ ಟೆಸ್ಟ್ ಪಂದ್ಯ ಜೋಹನ್ಸ್ ಬರ್ಗ್ ನಲ್ಲಿ ನಿಗದಿಯಾಗಿದೆ. 

ಹೊಸ ತಳಿ ಪತ್ತೆಯಾಗಿರುವ ದಕ್ಷಿಣ ಆಫ್ರಿಕಾಗೆ ಅಂತಾರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧ ವಿಧಿಸಲಾಗುತ್ತಿರುವ ಹೊತ್ತಿನಲ್ಲಿ ಬಿಸಿಸಿಐ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿರುವುದಕ್ಕೆ ಸಿಎಸ್ಎ ಧನ್ಯವಾದ ತಿಳಿಸಿದೆ. 

Related Stories

No stories found.

Advertisement

X
Kannada Prabha
www.kannadaprabha.com