ಐಸಿಸಿ ಟಿ-20 ವಿಶ್ವಕಪ್: ಎರಡು ಫೇವರಿಟ್ ತಂಡಗಳನ್ನು ಆಯ್ಕೆ ಮಾಡಿದ ಶೇನ್ ವಾರ್ನ್ 

ಯುಎಇ ಮತ್ತು ಒಮನ್ ನಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಟಿ-20 ವಿಶ್ವಕಪ್ ಗೆಲ್ಲುವ ಎರಡು ಫೆೇವರಿಟ್ ತಂಡಗಳನ್ನು ಲಿಜೆಂಡರಿ ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್  ಶೇನ್ ವಾರ್ನ್ ಆಯ್ಕೆ ಮಾಡಿದ್ದಾರೆ.
ಶೇನ್ ವಾರ್ನ್
ಶೇನ್ ವಾರ್ನ್

ಮೇಲ್ಬರ್ನ್: ಯುಎಇ ಮತ್ತು ಒಮನ್ ನಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಟಿ-20 ವಿಶ್ವಕಪ್ ಗೆಲ್ಲುವ ಎರಡು ಫೇವರಿಟ್  ತಂಡಗಳನ್ನು ಲಿಜೆಂಡರಿ, ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಆಯ್ಕೆ ಮಾಡಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ಈ ಬಾರಿಯ ಐಸಿಸಿ ಟಿ-20 ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಳ್ಳುವ ತಮ್ಮ ಫೇವರಿಟ್ ತಂಡಗಳಾಗಿವೆ ಎಂದು ಶೇನ್ ವಾರ್ನ್ ಟ್ವೀಟ್ ಮಾಡಿದ್ದಾರೆ. 

ಆದಾಗ್ಯೂ, ಈ ಎರಡು ತಂಡಗಳಿಗೆ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಭಾರೀ ಪೈಪೋಟಿ ನೀಡುವ ಸಾಧ್ಯತೆಯಿರುವುದಾಗಿ ಅವರು ತಿಳಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com