ಟಿ-20 ವಿಶ್ವಕಪ್: ಹೈ ವೋಲ್ಟೇಜ್ ಪಂದ್ಯಕ್ಕೂ ಮುನ್ನ ಕೊಹ್ಲಿ ಪಡೆಯ ಡ್ಯಾನ್ಸ್ ವಿಡಿಯೋ ವೈರಲ್!

ಕೊಹ್ಲಿ ಪಡೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಆರ್.ಅಶ್ವಿನ್ ಅವರ ಪತ್ನಿ ತಮ್ಮ ಇನಸ್ಟಾ ಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಆ ದೃಶ್ಯದಲ್ಲಿ ಶಾರ್ದೂಲ್ ಠಾಕೂರ್ ಹಾಗೂ ಇಶಾನ್ ಕಿಶಾನ್ ಡ್ಯಾನ್ಸ್ ಮಾಡಿದ್ದಾರೆ
ಟೀಂ ಇಂಡಿಯಾ ಆಟಗಾರರ ಡ್ಯಾನ್ಸ್
ಟೀಂ ಇಂಡಿಯಾ ಆಟಗಾರರ ಡ್ಯಾನ್ಸ್
Updated on

ದುಬೈ: ಭಾರತ ಹಾಗೂ ನ್ಯೂಜಿಲೆಂಡ್ ಮಧ್ಯೆ ಹೈವೋಲ್ಟೇಜ್ ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ. ಸೆಮಿ ಫೈನಲ್ ರೇಸ್ ನಲ್ಲಿ ಉಳಿಯಬೇಕಾದ್ರೆ ಎರಡೂ ತಂಡಗಳಿಗೆ ಗೆಲುವು ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಗೆಲುವಿಗಾಗಿ ಸಂಜೆ ಪೈಪೋಟಿಗೆ ಬೀಳುವುದು ನಿಕ್ಕಿಯಾಗಿದೆ. ಇದಕ್ಕೂ ಮುನ್ನ ಕೊಹ್ಲಿ ಪಡೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆರ್.ಅಶ್ವಿನ್ ಅವರ ಪತ್ನಿ ತಮ್ಮ ಇನಸ್ಟಾ ಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಆ ದೃಶ್ಯದಲ್ಲಿ ಶಾರ್ದೂಲ್ ಠಾಕೂರ್ ಹಾಗೂ ಇಶಾನ್ ಕಿಶಾನ್ ಡ್ಯಾನ್ಸ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಈ ಜೋಡಿಯ ನೃತ್ಯ ನೋಡಿ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ನಗುತ್ತಿದ್ದಾರೆ. ತಂಡದ ಆಟಗಾರರ ಕುಟುಂಬಗಳು ಸಹ ಈ ಮಸ್ತಿಯಲ್ಲಿ ಪಾಲ್ಗೊಂಡಿರುವುದು ಕಾಣಿಸಿಕೊಂಡಿದೆ.

ಸೂಪರ್ 12ರ 2ನೇ ಗುಂಪಿನಲ್ಲಿ ಪಾಕಿಸ್ತಾನ ಸತತ 3 ಪಂದ್ಯ ಗೆದ್ದು 6 ಅಂಕಗಳೊಂದಿಗೆ ನಂಬರ್-1 ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ತಂಡ 1 ಗೆಲುವು ಮತ್ತು 1 ಸೋಲಿನೊಂದಿಗೆ 2 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ನಮೀಬಿಯಾ 2 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್, ಭಾರತ ಹಾಗೂ ಸ್ಕಾಟ್ಲೆಂಡ್ ಇನ್ನೂ ತಮ್ಮ ಖಾತೆ ತೆರೆದಿಲ್ಲ. ಉತ್ತಮ ರನ್ ರೇಟ್ ಆಧಾರದ ಮೇಲೆ ನ್ಯೂಜಿಲೆಂಡ್ 4ನೇ ಸ್ಥಾನದಲ್ಲಿದೆ. ಇನ್ನು ಭಾರತ 5 ಹಾಗೂ ಸ್ಕಾಟ್ಲೆಂಡ್ 6ನೇ ಸ್ಥಾನದಲ್ಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com