ಏಷ್ಯಾಕಪ್ 2022: 147ಕ್ಕೆ ಪಾಕ್ ಆಲೌಟ್, ದಾಖಲೆ ಬರೆದ ಭಾರತದ ವೇಗಿಗಳು

ಏಷ್ಯಾಕಪ್ 2022 ಟೂರ್ನಿಯ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಕೇವಲ 147 ರನ್ ಗಳಿಗೆ ನಿಯಂತ್ರಿಸಿದ ಭಾರತದ ವೇಗಿಗಳು ದಾಖಲೆಯೊಂದನ್ನು ಬರೆದಿದ್ದಾರೆ.
ಭಾರತದ ವೇಗಿಗಳ ಪಾರಮ್ಯ
ಭಾರತದ ವೇಗಿಗಳ ಪಾರಮ್ಯ

ದುಬೈ: ಏಷ್ಯಾಕಪ್ 2022 ಟೂರ್ನಿಯ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಕೇವಲ 147 ರನ್ ಗಳಿಗೆ ನಿಯಂತ್ರಿಸಿದ ಭಾರತದ ವೇಗಿಗಳು ದಾಖಲೆಯೊಂದನ್ನು ಬರೆದಿದ್ದಾರೆ.

ಹೌದು.. ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಭಾರತದ ವೇಗಿಗಳ ಅಬ್ಬರಕ್ಕೆ ತತ್ತರಿಸಿತು. ಪ್ರಮುಖವಾಗಿ ಭಾರತದ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯಾ ಮಾರಕ ಬೌಲಿಂಗ್ ತತ್ತರಿ ಕೇವಲ 147 ರನ್ ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಭಾರತದ ಪರ ಭುವನೇಶ್ವರ್ ಕುಮಾರ್ 4 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 3, ಅರ್ಷ್ ದೀಪ್ ಸಿಂಗ್ 2 ಮತ್ತು ಆವೇಶ್ ಖಾನ್ 1 ವಿಕೆಟ್ ಪಡೆದರು.

ಗಮನಾರ್ಹ ಅಂಶವೆಂದರೆ ಈ ಪಂದ್ಯದಲ್ಲಿ ಭಾರತ ಸ್ಪಿನ್ನರ್ ಗಳಿಗೆ ಒಂದೂ ವಿಕೆಟ್ ಲಭಿಸಲಿಲ್ಲ. ಭಾರತದ ಪರ ಕಣಕ್ಕಿಳಿದಿರುವ ಸ್ಪಿನ್ನರ್ ಗಳಾದ ಯುಜೇವಂದ್ರ ಚಹಲ್ ಮತ್ತು ರವೀಂದ್ರ ಜಡೇಜಾ ಕ್ರಮವಾಗಿ 4 ಮತ್ತು 2 ಓವರ್ ಮಾಡಿದರೂ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಚಹಲ್ 32 ರನ್ ನೀಡಿ ಕೊಂಚ ದುಬಾರಿ ಎನಿಸಿಕೊಂಡರು.

ದಾಖಲೆ ಬರೆದ ಭಾರತದ ವೇಗಿಗಳು
ಇನ್ನು ಇಂದಿನ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಭಾರತದ ವೇಗಿಗಳು ಜಂಟಿಯಾಗಿ ದಾಖಲೆ ಬರೆದಿದ್ದು, ಇನ್ನಿಂಗ್ಸ್ ನ 10 ವಿಕೆಟ್ ಗಳನ್ನೂ ಪಡೆಯುವ ಮೂಲಕ ಈ ಹಿಂದೆ ಸ್ಪಿನ್ನರ್ ಗಳು ಮಾಡಿದ್ದ ದಾಖಲೆಯನ್ನು ವೇಗಿಗಳೂ ಮಾಡಿದ್ದಾರೆ. ಟಿ20 ಮಾದರಿಯಲ್ಲಿ ಎದುರಾಳಿ ತಂಡದ ಎಲ್ಲ 10 ವಿಕೆಟ್ ಗಳನ್ನು ವೇಗಿಗಳು ಪಡೆದಿರುವುದು ಭಾರತದ ಪಾಲಿಗೆ ಇದೇ ಮೊದಲು. ಈ ಹಿಂದೆ ಫ್ಲೋರಿಡಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ಗಳು ಎಲ್ಲ 10 ವಿಕೆಟ್ ಪಡೆದು ದಾಖಲೆ ಬರೆದಿದ್ದರು.

ಭುವಿ ವೈಯುಕ್ತಿಕ ದಾಖಲೆ
ಇದೇ ಪಂದ್ಯದಲ್ಲಿ 4 ಓವರ್ ಎಸೆದು ಕೇವಲ 26 ರನ್ ನೀಡಿ 4 ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಪಾಕಿಸ್ತಾನ ವಿರುದ್ಧ ತಮ್ಮ ಸಾಧನೆಯನ್ನು ಉತ್ತಮಪಡಿಸಿಕೊಂಡರು. ಅಂತೆಯೇ 3 ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ ಪಾಕ್ ವಿರುದ್ಧ ತಮ್ಮದೇ ದಾಖಲೆಯನ್ನು ಸರಿಗಟ್ಟಿದ್ದು ಈ ಹಿಂದೆ 2016ರಲ್ಲಿ ಮೀರ್ ಪುರದಲ್ಲಿ 3.3 ಓವರ್ ನಲ್ಲಿ 8 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಇದೀಗ ದುಬೈನಲ್ಲಿ 4 ಓವರ್ ಎಸೆದು 25 ರನ್ ನೀಡಿ ಮೂರು ವಿಕೆಟ್ ಪಡೆದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com