India vs England 5th test: 100 ರನ್ ನೊಳಗೆ 5 ವಿಕೆಟ್ ಪತನ; ಆದರೂ 400+ ಸ್ಕೋರ್; ದಾಖಲೆ ಬರೆದ ಟೀಮ್ ಇಂಡಿಯಾ
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಭಾರತ 100 ರನ್ ನೊಳಗೆ 5 ವಿಕೆಟ್ ಕಳೆದುಕೊಂಡರೂ ಬಳಿಕ ಚೇತರಿಸಿಕೊಂಡು 400ಕ್ಕೂ ಅಧಿಕ ರನ್ ಗಳಿಸಿ ದಾಖಲೆ ಬರೆದಿದೆ.
Published: 02nd July 2022 05:53 PM | Last Updated: 04th July 2022 04:27 PM | A+A A-

ಭಾರತ ತಂಡ
ಎಡ್ಜ್ ಬ್ಯಾಸ್ಟನ್: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಭಾರತ 100 ರನ್ ನೊಳಗೆ 5 ವಿಕೆಟ್ ಕಳೆದುಕೊಂಡರೂ ಬಳಿಕ ಚೇತರಿಸಿಕೊಂಡು 400ಕ್ಕೂ ಅಧಿಕ ರನ್ ಗಳಿಸಿ ದಾಖಲೆ ಬರೆದಿದೆ.
ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಹಾಗೂ 5ನೇ ಟೆಸ್ಟ್ ಪಂದ್ಯದಲ್ಲಿ ಕೇವಲ 98 ರನ್ ಗಳಿಗೆ 5 ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಜೋಡಿ ಆಸರೆಯಾಗಿತ್ತು. ಈ ಜೋಡಿ 222 ರನ್ ಗಳ ಭರ್ಜರಿ ಜೊತೆಯಾಟ ನೀಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಪರಿಣಾಮ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 416ರನ್ ಗಳಿಸಿ ಆಲೌಟ್ ಆಗಿದೆ.
ಇದನ್ನೂ ಓದಿ: ದಾಖಲೆ ಬರೆದ ಪಂತ್-ಜಡೇಜಾ ಶತಕ, 7ನೇ ಕ್ರಮಾಂಕದಲ್ಲಿ ಜಡೇಜಾ ದಾಖಲೆ
ದಾಖಲೆ ನಿರ್ಮಾಣ
ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಮೂರನೇ ಬಾರಿಗೆ ಇನ್ನಿಂಗ್ಸ್ ವೊಂದರಲ್ಲಿ 100ಕ್ಕೂ ಅಧಿಕ ರನ್ ಗಳಿಸುವ ಮೊದಲೇ 5 ವಿಕೆಟ್ ಕಳೆದುಕೊಂಡು ಬಳಿಕ 400ಕ್ಕೂ ಅಧಿಕ ರನ್ ಗಳಿಸಿ ದಾಖಲೆ ನಿರ್ಮಿಸಿದೆ. ಇಂದಿನ ಪಂದ್ಯಕ್ಕೂ ಮೊದಲು ಭಾರತ ಮೊದಲ ಬಾರಿಗೆ 1983ರಲ್ಲಿ ಚೆನ್ನೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 92 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಬಳಿಕ ಚೇತರಿಸಿಕೊಂಡು 451 ರನ್ ಗಳಿಸಿತ್ತು. ಬಳಿಕ 2013ರಲ್ಲಿ ಇದೇ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಭಾರತ ತಂಡ 83 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡ ಹೊರತಾಗಿಯೂ 453 ರನ್ ಗಳಿಸಿತ್ತು.
Stats: 400+ totals for India after losing first 5 wkts < 100 runs
453 (83/5) vs WI Kolkata 2013
451 (92/5) vs WI Chennai 1983
416 (98/5) vs Eng Birmingham 2022 *