ಟಿ20 ವಿಶ್ವಕಪ್: ಮೇಡೆನ್ ಓವರ್ ಮೂಲಕ ದಾಖಲೆ ಬರೆದ ಭುವನೇಶ್ವರ್ ಕುಮಾರ್

ಟಿ20 ವಿಶ್ವಕಪ್ ಟೂರ್ನಿಯ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ವೇಗಿ ಭುವನೇಶ್ವರ್ ಕುಮಾರ್ ಅಪರೂಪದ ದಾಖಲೆ ಬರೆದಿದ್ದಾರೆ.
ಟಿ20 ವಿಶ್ವಕಪ್: ಮೇಡೆನ್ ಓವರ್ ಮೂಲಕ ದಾಖಲೆ ಬರೆದ ಭುವನೇಶ್ವರ್ ಕುಮಾರ್

ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ವೇಗಿ ಭುವನೇಶ್ವರ್ ಕುಮಾರ್ ಅಪರೂಪದ ದಾಖಲೆ ಬರೆದಿದ್ದಾರೆ.

ಹೌದು.. ನೆದರ್ಲೆಂಡ್ ವಿರುದ್ಧ ಪಂದ್ಯದಲ್ಲಿ ಭಾರತದ ಭುವನೇಶ್ವರ್ ಕುಮಾರ್ 2 ಮೇಡೆನ್ ಓವರ್ ಗಳನ್ನು ಎಸೆಯುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಗೆ ಪಾತ್ರರಾಗಿದ್ದಾರೆ. ಭಾರತದ ಪರ ಅತೀ ಹೆಚ್ಚು ಮೇಡನ್ ಓವರ್ ಎಸೆದ ಬೌಲರ್ ಗಳ ಪಟ್ಟಿಗೆ ಭುವಿ ಸೇರ್ಪಡೆಯಾಗಿದ್ದು, ಭುವಿ 2 ಬಾರಿ 2 ಮೇಡೆನ್ ಓವರ್ ಗಳನ್ನು ಎಸೆದ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಈ ಹಿಂದೆ ಭುವಿ 2016ರಲ್ಲಿ ಮೀರ್ ಪುರದಲ್ಲಿ ಯುಎಇ ತಂಡದ ವಿರುದ್ಧದ ಟಿ20 ಪಂದ್ಯದಲ್ಲಿ 2 ಮೇಡೆನ್ ಓವರ್ ಎಸೆದಿದ್ದರು. ಬಳಿಕ ಇಂದು ನೆದರ್ಲೆಂಡ್ ವಿರುದ್ಧವೂ ಇದೇ ಸಾಧನೆ ಮಾಡಿದ್ದಾರೆ. ಅಲ್ಲದೆ ಭಾರತದ ಪರ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತೀ ಹೆಚ್ಚು ಮೇಡೆನ್ ಓವರ್ ಎಸೆದ ಜಂಟಿ ಅಗ್ರ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಇಂದಿನ ಪಂದ್ಯವೂ ಸೇರಿದಂತೆ ಭುವಿ ಈ ವರೆಗೂ ಒಟ್ಟು 9 ಮೇಡೆನ್ ಓವರ್ ಎಸೆದಿದ್ದು, ಇಷ್ಟೇ ಪ್ರಮಾಣದ ಮೇಡೆನ್ ಓವರ್ ಎಸೆದಿರುವ ಜಸ್ ಪ್ರೀತ್ ಬುಮ್ರಾರೊಂದಿಗೆ ಭಾರತದ ಪರ ಅತೀ ಹೆಚ್ಚು ಮೇಡೆನ್ ಓವರ್ ಎಸೆದ ಬೌಲರ್ ಗಳ ಪಟ್ಟಿಯಲ್ಲಿ ಜಂಟಿ ಅಗ್ರ ಸ್ಥಾನಕ್ಕೇರಿದ್ದಾರೆ. 

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಂದೇ ಇನ್ನಿಂಗ್ಸ್ ನಲ್ಲಿ ಎರಡೆರಡು ಮೇಡೆನ್ ಓವರ್ ಎಸೆದ ಆಟಗಾರರ ಪಟ್ಟಿಯಲ್ಲಿ ಗ್ರೇಮ್ ಸ್ವಾನ್ (ಅಫ್ಘಾನಿಸ್ತಾನ ವಿರುದ್ಧ 2012 ರಲ್ಲಿ), ನುವಾನ್ ಕುಲಶೇಖರ (ನೆದರ್ಲ್ಯಾಂಡ್ಸ್ ವಿರುದ್ಧ 2014 ರಲ್ಲಿ) ಮತ್ತು ರಂಗನಾ ಹೆರಾತ್ (ನ್ಯೂಜಿಲೆಂಡ್ ವಿರುದ್ಧ 2014 ರಲ್ಲಿ) ಈ ಸಾಧನೆ ಮಾಡಿದ್ದಾರೆ.

ಅಂತೆಯೇ ಜಾಗತಿಕ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಮೇಡೆನ್ ಓವರ್ ಎಸೆದ ಬೌಲರ್ ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ನ ಸುನೀಲ್ ನರೈನ್ ಅಗ್ರ ಸ್ಥಾನದಲ್ಲಿದ್ದು ಅವರು ಒಟ್ಟು 27 ಮೇಡೆನ್ ಓವರ್ ಎಸೆದಿದ್ದಾರೆ. ಅವರ ನಂತರ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ 23 ಬಾರಿ, ವೆಸ್ಟ್ ಇಂಡೀಸ್ ಮಾಜಿ ಲೆಗ್ ಸ್ಪಿನ್ನರ್ ಸ್ಯಾಮ್ಯುಯೆಲ್ ಬದ್ರಿ 21 ಬಾರಿ ಮೇಡೆನ್ ಓವರ್ ಎಸೆದಿದ್ದಾರೆ. ಭುವನೇಶ್ವರ್ ಕುಮಾರ್ 20 ಬಾರಿ ಮೇಡೆನ್ ಓವರ್ ಎಸೆದು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಬುಮ್ರಾ 19 ಬಾರಿ ಮೇಡೆನ್ ಓವರ್ ಎಸೆದು ಆರನೇ ಸ್ಥಾನದಲ್ಲಿದ್ದಾರೆ.

STAT: Two maiden overs in a T20I (India)
Harbhajan vs Eng Colombo 2012
J Bumrah vs Pak Mirpur 2016
Bhuvneshwar vs UAE Mirpur 2016
Bhuvneshwar vs Net Sydney 2022 *

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com