ಐಪಿಎಲ್-2023: ರಾಣಾ- ರಿಂಕು ಹೋರಾಟ ವ್ಯರ್ಥ; ಕೆಕೆಆರ್ ವಿರುದ್ಧ ಸನ್ ರೈಸರ್ಸ್ 23 ರನ್ ಜಯ

ಕೋಲ್ಕತ್ತಾದಲ್ಲಿ ನಡೆದ ಐಪಿಎಲ್ 2023 ರ 19 ನೇ ಪಂದ್ಯದಲ್ಲಿ ಕೋಲ್ಕತ್ತಾ ತಂಡವನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 23 ರನ್ ಗಳ ಅಂತರದಿಂದ ಮಣಿಸಿದೆ. 
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ
Updated on: 

ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ನಡೆದ ಐಪಿಎಲ್ 2023 ರ 19 ನೇ ಪಂದ್ಯದಲ್ಲಿ ಕೋಲ್ಕತ್ತಾ ತಂಡವನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 23 ರನ್ ಗಳ ಅಂತರದಿಂದ ಮಣಿಸಿದೆ.
 
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕೋಲ್ಕತ್ತಾ ತಂಡ,  ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟ್ಸ್ ಮನ್ ಗಳನ್ನು ನಿಯಂತ್ರಿಸುವಲ್ಲಿ ವಿಫಲವಾಯಿತು. ಪರಿಣಾಮ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿ ಬೃಹತ್ ಮೊತ್ತದ ಗುರಿಯನ್ನು ಎದುರಾಳಿ ತಂಡಕ್ಕೆ ನೀಡಿತು.

ಸನ್ ರೈಸರ್ಸ್ ತಂಡದ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್ (55 ಎಸೆತಗಳಲ್ಲಿ 100 ರನ್) ಶತಕ ದಾಖಲಿಸುವ ಮೂಲಕ ತಂಡಕ್ಕೆ ಅತ್ಯುತ್ತಮ ಆರಂಭ ನೀಡಿದರು. ಆದರೆ ಮಯಾಂಕ್ ಅಗರ್ವಾಲ್ (13 ಎಸೆತಗಳಲ್ಲಿ 9 ರನ್) ರಾಹುಲ್ ತ್ರಿಪಾಠಿ (4 ಎಸೆತಗಳಲ್ಲಿ 9 ರನ್) ಗಳಿಸಿ ನಿರಾಸೆ ಮೂಡಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್  ಐಡೆನ್ ಮಾರ್ಕ್ರಾಮ್ (26 ಎಸೆತಗಳಲ್ಲಿ 50 ರನ್) ಗಳಿಸಿದರೆ, ಅಭಿಷೇಕ್ ಶರ್ಮಾ (17 ಎಸೆತಗಳಲ್ಲಿ 32 ರನ್) ಹಾಗೂ ಹೆನ್ರಿಕ್ ಕ್ಲಾಸೆನ್ (6 ಎಸೆತಗಳಲ್ಲಿ 16 ರನ್) ಗಳಿಸಿದರು. 

ಕೋಲ್ಕತ್ತಾ ಪರ ಆರಂಭಿಕ ಆಟಗಾರರಾದ ರಹಮಾನುಲ್ಲಾ ಗುರ್ಬಾಜ್ (3 ಎಸೆತಗಳಲ್ಲಿ 0 ರನ್) ಗಳಿಸಿದರೆ ನ್ ಹಗದೀಶನ್ (21 ಎಸೆತಗಳಲ್ಲಿ 36 ರನ್) ಗಳಿಸಿದರೆ, ವೆಂಕಟೇಶ್ ಐಯ್ಯರ್ (11 ಎಸೆತಗಳಲ್ಲಿ 10 ರನ್ ) ಗಳಿಸಿ ನಿರಾಶೆ ಮೂಡಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ನಿತೀಶ್ ರಾಣ (41 ಎಸೆತಗಳಲ್ಲಿ 75 ರನ್) ರಿಂಕು ಸಿಂಗ್ (31 ಎಸೆತಗಳಲ್ಲಿ 58 ರನ್) ಗಳಿಸಿ ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು. ಆದರೆ ಇಬ್ಬರೂ ಬ್ಯಾಟ್ಸ್ ಮನ್ ಗಳ ಹೋರಾಟ ಸನ್ ರೈಸರ್ಸ್ ಬೌಲರ್ ಗಳೆದುರು ಮಂಕಾಯಿತು. 

ಸನ್ ರೈಸರ್ಸ್ ಪರ ಭುವನೇಶ್ವರ್ ಕುಮಾರ್ 29 ರನ್ ನೀಡಿ 1 ವಿಕೆಟ್ ಗಳಿಸಿದರೆ, ಮಾಕ್ರೋ ಜಾನ್ಸೆನ್ 37 ರನ್ ನೀಡಿ 2 ವಿಕೆಟ್ ಗಳಿಸಿದರು, ಮಾಯಾಂಕ್ ಮಾರ್ಕಂಡೆ 27 ರನ್ ಗಳನ್ನು ನೀಡಿ 2 ವಿಕೆಟ್ ಗಳಿಸಿ ಉತ್ತಮ ಬೌಲರ್ ಎನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com