ಏಷ್ಯಾಕಪ್ ಗೆ ಟೀಂ ಇಂಡಿಯಾ ಸಿದ್ಧತೆ: ತಂಡದ ಫಿಟ್ಟೆಸ್ಟ್ ಆಟಗಾರ ಕಿಂಗ್ ಕೊಹ್ಲಿ ಅಲ್ಲ.. ಯೋ-ಯೋ ಟೆಸ್ಟ್​ನಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ ಗಿಲ್!

ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿರುವ ಟೀಂ ಇಂಡಿಯಾದ ಆಟಗಾರರು ತಂಡದ ಫಿಟ್ನೆಸ್ ಟೆಸ್ಟ್ ನಲ್ಲಿ ಪಾಲ್ಗೊಂಡಿದ್ದು, ಈ ಫಿಟ್ನೆಸ್ ಟೆಸ್ಟ್ ನಲ್ಲಿ ತಂದ ಫಿಟ್ಟೆಸ್ಟ್ ಆಟಗಾರ ಎಂದೇ ಖ್ಯಾತಿಗಳಿಸಿರುವ ವಿರಾಟ್ ಕೊಹ್ಲಿ ಗಿಂತಲೂ ಟೀಂ ಇಂಡಿಯಾ ಯಂಗ್ ಗನ್ ಶುಭ್ ಮನ್ ಗಿಲ್ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.
ಟೀಂ ಇಂಡಿಯಾ ಫಿಟ್ನೆಸ್ ಟೆಸ್ಟ್
ಟೀಂ ಇಂಡಿಯಾ ಫಿಟ್ನೆಸ್ ಟೆಸ್ಟ್
Updated on

ಬೆಂಗಳೂರು: ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿರುವ ಟೀಂ ಇಂಡಿಯಾದ ಆಟಗಾರರು ತಂಡದ ಫಿಟ್ನೆಸ್ ಟೆಸ್ಟ್ ನಲ್ಲಿ ಪಾಲ್ಗೊಂಡಿದ್ದು, ಈ ಫಿಟ್ನೆಸ್ ಟೆಸ್ಟ್ ನಲ್ಲಿ ತಂದ ಫಿಟ್ಟೆಸ್ಟ್ ಆಟಗಾರ ಎಂದೇ ಖ್ಯಾತಿಗಳಿಸಿರುವ ವಿರಾಟ್ ಕೊಹ್ಲಿ ಗಿಂತಲೂ ಟೀಂ ಇಂಡಿಯಾ ಯಂಗ್ ಗನ್ ಶುಭ್ ಮನ್ ಗಿಲ್ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.

ಹೌದು.. ಏಷ್ಯಾಕಪ್ ಪಂದ್ಯಾವಳಿಗಾಗಿ ಶ್ರೀಲಂಕಾಗೆ ಪ್ರಯಾಣಿಸುವ ಮೊದಲು ಭಾರತದ ಎಲ್ಲಾ ಕ್ರಿಕೆಟಿಗರು ಕಡ್ಡಾಯವಾಗಿ ಯೋ-ಯೋ ಫಿಟ್ನೆಸ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಇದೀಗ ಈ ಯೋ-ಯೋ ಟೆಸ್ಟ್​ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ್ದು ಯಾವ ಆಟಗಾರ ಎಂಬ ಸುದ್ದಿ ಹೊರಬಿದ್ದಿದೆ. ಟೀಂ ಇಂಡಿಯಾದ ಕಠಿಣ ಯೋ-ಯೋ ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿಗಿಂತಲೂ ಶುಭ್ ಮನ್ ಗಿಲ್ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಟೀಂ ಇಂಡಿಯಾದ ಫಿಟ್ಟೆಸ್ಟ್ ಆಟಗಾರ ಎನಿಸಿಕೊಂಡಿದ್ದಾರೆ. 

ಭಾರತವು ಏಷ್ಯಾಕಪ್ 2023 ಕ್ಕೆ ಸಕಲ ಸಿದ್ಧತೆ ನಡೆಸುತ್ತಿದೆ. ಟೀಮ್ ಇಂಡಿಯಾ ಸೆಪ್ಟೆಂಬರ್ 2 ರಂದು ಪಲ್ಲೆಕೆಲೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಕ್ಕೂ ಮೊದಲು, ತಂಡವು ಬೆಂಗಳೂರು ಸಮೀಪದ ಆಲೂರಿನಲ್ಲಿ ಶಿಬಿರವನ್ನು ನಡೆಸುತ್ತಿದೆ. ವಾಸ್ತವವಾಗಿ, ಏಷ್ಯಾಕಪ್ ಪಂದ್ಯಾವಳಿಗಾಗಿ ಶ್ರೀಲಂಕಾಗೆ ಪ್ರಯಾಣಿಸುವ ಮೊದಲು ಭಾರತದ ಎಲ್ಲಾ ಕ್ರಿಕೆಟಿಗರು ಕಡ್ಡಾಯವಾಗಿ ಯೋ-ಯೋ ಫಿಟ್ನೆಸ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಇದರಲ್ಲಿ ತೇರ್ಗಡೆಯಾದರಷ್ಟೆ ಏಷ್ಯಾಕಪ್​ನಲ್ಲಿ ಆಡಲು ಅವಕಾಶ. ಇದೀಗ ಈ ಯೋ-ಯೋ ಟೆಸ್ಟ್​ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ್ದು ಯಾವ ಆಟಗಾರ ಎಂಬ ಸುದ್ದಿ ಹೊರಬಿದ್ದಿದೆ.

ಅಚ್ಚರಿ ಎಂಬಂತೆ ಭಾರತದ ಫಿಟ್​ನೆಸ್ ಮಾಸ್ಟರ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಅಥವಾ ಹಾರ್ದಿಕ್ ಪಾಂಡ್ಯ ಅವರನ್ನು ಮೀರಿಸಿ, ಶುಭ್​ಮನ್ ಗಿಲ್ ಅವರು ಯೋ-ಯೋ ಟೆಸ್ಟ್​ನಲ್ಲಿ ಟಾಪರ್‌ ಆಗಿ ಅತಿ ಹೆಚ್ಚಿನ ಸ್ಕೋರ್ ಗಳಿಸಿದ್ದಾರೆ. ವರದಿ ಪ್ರಕಾರ, 23 ವರ್ಷದ ಶುಭ್​ಮನ್ ಗಿಲ್ ಅತಿ ಹೆಚ್ಚು ಅಂಕ ಗಳಿಸಿದ ಆಟಗಾರರಾಗಿದ್ದಾರೆ. ಹೆಚ್ಚಿನ ಆಟಗಾರರು 16.5 ಮತ್ತು 18 ರ ನಡುವೆ ಸ್ಕೋರ್ ಮಾಡಿದ್ದಾರೆ. ಆದರೆ, ಗಿಲ್ ಎಲ್ಲರನ್ನೂ ಮೀರಿಸಿ 18.7 ಸ್ಕೋರ್ ಮಾಡುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದೆ. 

ಏಷ್ಯಾಕಪ್ ತಂಡದಲ್ಲಿ ಜಸ್​ಪ್ರಿತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮ, ಸಂಜು ಸ್ಯಾಮ್ಸನ್ (ಏಷ್ಯಾ ಕಪ್‌ಗಾಗಿ ಮೀಸಲು ಸದಸ್ಯ) ಮತ್ತು ಕೆಎಲ್ ರಾಹುಲ್ ಈ ಐವರು ಆಟಗಾರರನ್ನು ಹೊರತುಪಡಿಸಿ ಉಳಿದ ಎಲ್ಲಾ ಆಟಗಾರರು ಯೋ ಯೋ ಟೆಸ್ಟ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಇವರ ಟೆಸ್ಟ್ ಇನ್ನಷ್ಟೆ ನಡೆಯಬೇಕಿದೆ. ಸಂಜು ಸ್ಯಾಮ್ಸನ್, ಪ್ರಸಿದ್ಧ್ ಕೃಷ್ಣ ಮತ್ತು ಜಸ್​ಪ್ರಿತ್ ಬುಮ್ರಾ ಐರ್ಲೆಂಡ್​ನಿಂದ ಹೊರಟು ಬಹುಶಃ ಇಂದು ತಂಡ ಸೇರಿಕೊಳ್ಳಲಿದ್ದಾರೆ. ಏಷ್ಯಾಕಪ್ 2023 ತರಬೇತಿ ಶಿಬಿರವು ಆಗಸ್ಟ್ 29 ರವರೆಗೆ ಇರಲಿದೆ. ಭಾರತ ಆಗಸ್ಟ್ 30 ರಂದು ಕೊಲಂಬೋಕ್ಕೆ ತೆರಳಲಿದೆ.

ಕೊಹ್ಲಿ ಅಂಕ ಎಷ್ಟು?
ವಿರಾಟ್ ಕೊಹ್ಲಿ ಮೊದಲಿಗರಾಗಿ ಯೋ-ಯೋ ಟೆಸ್ಟ್‌ಗೆ ಒಳಗಾಗಿ, ಈ ಟೆಸ್ಟ್‌ನಲ್ಲಿ 17.2 ಅಂಕ ಸಂಪಾದಿಸುವುದರೊಂದಿಗೆ ತೇರ್ಗಡೆಗೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಕೊಹ್ಲಿ ಅವರೇ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

ಏನಿದು ಯೋಯೋ ಟೆಸ್ಟ್!!
ಯೋ-ಯೋ ಟೆಸ್ಟ್ ಮಾತ್ರವಲ್ಲದೆ ಶಿಬಿರದಲ್ಲಿ ಲಿಪಿಡ್ ಪ್ರೊಫೈಲ್, ಬ್ಲಡ್ ಶುಗರ್, ಯೂರಿಕ್ ಆಸಿಡ್, ಕ್ಯಾಲ್ಸಿಯಂ, ವಿಟಮಿನ್ ಬಿ 12 ಮತ್ತು ಡಿ, ಕ್ರಿಯೇಟಿನೈನ್, ಟೆಸ್ಟೋಸ್ಟೆರಾನ್ ಮತ್ತು ಡೆಕ್ಸಾ ಪರೀಕ್ಷೆಗಳು ಸೇರಿದಂತೆ ಆಟಗಾರರನ್ನು ಅನೇಕ ರೀತಿಯಲ್ಲಿ ಪರಿಶೀಲಿಸಲಾಗುತ್ತದೆ. ಫಿಟ್‌ನೆಸ್ ಹೊರತಾಗಿ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಮೂಲಕ ಮ್ಯಾಚ್ ಸಿಮ್ಯುಲೇಶನ್ ಸೆಷನ್ ಅನ್ನು ಸಹ ಏರ್ಪಡಿಸಲಾಗಿದೆ. ಅಂದಹಾಗೆ ಯೋ ಯೋ ಟೆಸ್ಟ್‌ನಲ್ಲಿ ಉತ್ತೀರ್ಣರಾಗಲು ಕನಿಷ್ಠ ಸ್ಕೋರ್ 16.5 ಆಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com