ವೇಗದ ಬೌಲಿಂಗ್; ಬುಮ್ರಾ ದಾಖಲೆ ಮುರಿದ ಉಮ್ರಾನ್ ಮಲ್ಲಿಕ್, ಮುಂದಿನ ಗುರಿ ಶೊಯೆಬ್ ಅಖ್ತರ್!!

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಟೀಂ ಇಂಡಿಯಾ ವೇಗಿ ಜಮ್ಮು ಎಕ್ಸ್ ಪ್ರೆಸ್ ಖ್ಯಾತಿಯ ಉಮ್ರಾನ್ ಮಲ್ಲಿಕ್ ತಮ್ಮ ವೇಗದ ಬೌಲಿಂಗ್ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಉಮ್ರಾನ್ ಮಲ್ಲಿಕ್-ಜಸ್ ಪ್ರೀತ್ ಬುಮ್ರಾ
ಉಮ್ರಾನ್ ಮಲ್ಲಿಕ್-ಜಸ್ ಪ್ರೀತ್ ಬುಮ್ರಾ

ಮುಂಬೈ: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಟೀಂ ಇಂಡಿಯಾ ವೇಗಿ ಜಮ್ಮು ಎಕ್ಸ್ ಪ್ರೆಸ್ ಖ್ಯಾತಿಯ ಉಮ್ರಾನ್ ಮಲ್ಲಿಕ್ ತಮ್ಮ ವೇಗದ ಬೌಲಿಂಗ್ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಹೌದು.. ಶ್ರೀಲಂಕಾ ವಿರುದ್ಧದ ಮೊದಲ ಟಿ–20 ಪಂದ್ಯದಲ್ಲಿ ಭಾರತದ ಯುವ ವೇಗಿ ಉಮ್ರಾನ್‌ ಮಲಿಕ್ ಅವರು ಅಪರೂಪದ ದಾಖಲೆ ನಿರ್ಮಿಸಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದ ಬೌಲಿಂಗ್ ಮಾಡಿದ ಭಾರತದ ವೇಗಿ ಎನ್ನುವ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಉಮ್ರಾನ್ ಮಲಿಕ್‌ ಗಂಟೆಗೆ 155 ಕಿ.ಮಿ ವೇಗದಲ್ಲಿ ಬೌಲಿಂಗ್‌ ಮಾಡಿ ಈ ದಾಖಲೆ ನಿರ್ಮಿಸಿದ್ದು, ಈ ಮೂಲಕ ಈ ದಾಖಲೆಯನ್ನು ಹೊಂದಿದ್ದ ಭಾರತದ ಮತ್ತೋರ್ವ ವೇಗಿ ಜಸ್‌ಪ್ರೀತ್‌ ಬೂಮ್ರಾ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. 

ಈ ಹಿಂದೆ 2018ರ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್‌ ಬೂಮ್ರಾ ಗಂಟೆಗೆ 153.2 ಕಿ.ಮಿ ವೇಗದಲ್ಲಿ ಬೌಲಿಂಗ್‌ ಮಾಡಿ ದಾಖಲೆ ಬರೆದಿದ್ದರು. ಇದೀಗ ಆ ದಾಖಲೆಯನ್ನು ಜಮ್ಮು ಎಕ್ಸ್ ಪ್ರೆಸ್ ಖ್ಯಾತಿ 23 ವರ್ಷದ ಯುವ ಬೌಲರ್‌ ಉಮ್ರಾನ್ ಮಲ್ಲಿಕ್ ಮುರಿದಿದ್ದಾರೆ.

ಜಾಗತಿಕ ಕ್ರಿಕೆಟ್ ನಲ್ಲಿ ವೇಗವಾಗಿ ಬೌಲಿಂಗ್ ಮಾಡಿದ ದಾಖಲೆ ಪಾಕಿಸ್ತಾನದ ವೇಗಿ ಶೋಯೆಬ್ ಮಲ್ಲಿಕ್ ಅವರ ಹೆಸರಲ್ಲಿದೆ. ಅಖ್ತರ್ 161 ಕಿ.ಮಿ ವೇಗದಲ್ಲಿ  ಬೌಲಿಂಗ್ ಮಾಡಿ ಈ ದಾಖಲೆಯನ್ನು ನಿರ್ಮಿಸಿದ್ದಾರೆ. 

ಇನ್ನು ಈ ಪಂದ್ಯದಲ್ಲಿ ಭಾರತ ತಂಡ ಎರಡು ರನ್‌ಗಳ ವಿರೋಚಿತ ಜಯ ಸಾಧಿಸಿ, ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com