ಶ್ರೀಲಂಕಾ ವಿರುದ್ಧ ಭರ್ಜರಿ ಬ್ಯಾಟಿಂಗ್, ಶತಕದ ಮೂಲಕ 2 ದಾಖಲೆ, ಸಚಿನ್ ದಾಖಲೆಗೂ ಕುತ್ತು ತಂದ ಭಾರತದ 'ರನ್ ಮೆಷಿನ್' ವಿರಾಟ್ ಕೊಹ್ಲಿ

ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ವರ್ಷದ ಮೊದಲ ಶತಕ ಸಿಡಿಸಿದ್ದು, ಆ ಮೂಲಕ ಒಂದೇ ಶತಕದ ಮೂಲಕ ಎರಡೆರಡು ವಿಶ್ವ ದಾಖಲೆ ನಿರ್ಮಿಸಿ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಸರಿಗಟ್ಟಿದ್ದಾರೆ.
ವಿರಾಟ್ ಕೊಹ್ಲಿ ಶತಕ
ವಿರಾಟ್ ಕೊಹ್ಲಿ ಶತಕ

ಗುವಾಹತಿ: ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ವರ್ಷದ ಮೊದಲ ಶತಕ ಸಿಡಿಸಿದ್ದು, ಆ ಮೂಲಕ ಒಂದೇ ಶತಕದ ಮೂಲಕ ಎರಡೆರಡು ವಿಶ್ವ ದಾಖಲೆ ನಿರ್ಮಿಸಿ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಸರಿಗಟ್ಟಿದ್ದಾರೆ.

ಗುವಾಹತಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿದ್ದು, ಈ ಮೂಲಕ ಶ್ರೀಲಂಕಾಗೆ ಗೆಲ್ಲಲು 374 ರನ್ ಗಳ ಬೃಹತ್ ಗುರಿ ನೀಡಿದೆ. ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ 87 ಎಸೆತಗಳಲ್ಲಿ 113 ರನ್ ಗಳಿಸಿ ಈ ವರ್ಷದ ಮೊದಲ ಶತಕ ಸಿಡಿಸಿದರು. ಅಂತೆಯೇ ಇದು ಅವರ ವೃತ್ತಿ ಜೀವನದ 45ನೇ ಶತಕವಾಗಿದೆ.

Most ODI 100s in a country
20 Virat Kohli in India (99 inngs) *
20 Sachin Tendulkar in India (160)
14 Hashim Amla in South Africa (69)
14 Ricky Ponting in Australia (151)

ಈ ಶತಕದ ಮೂಲಕ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲೂ ತಮ್ಮ ಶತಕದ ಭರವನ್ನು ನೀಗಿಸಿಕೊಂಡಿದ್ದು ಮಾತ್ರವಲ್ಲದೇ ಒಂದೇ ಪಂದ್ಯದಿಂದ ಎರಡೆರಡು ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಶತಕದ ಮೂಲಕ ಕೊಹ್ಲಿ ಅತೀ ಹೆಚ್ಚು ಏಕದಿನ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದು, ಭಾರತದ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಜಂಟಿ ಅಗ್ರ ಸ್ಥಾನಕ್ಕೇರಿದ್ದಾರೆ. 

ಕೊಹ್ಲಿಗೆ ಇದು 20 ಏಕದಿನ ಶತಕವಾಗಿದ್ದು, ಇದಕ್ಕಾಗಿ ಅವರು 99 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ. ಅಂತೆಯೇ ಇಷ್ಟೇ ಶತಕಕ್ಕೆ ಸಚಿನ್ ತೆಂಡೂಲ್ಕರ್ ಅವರು 160 ಇನ್ನಿಂಗ್ಸ್ ಆಡಿದ್ದಾರೆ. ಉಳಿದಂತೆ 69 ಇನ್ನಿಂಗ್ಸ್ ಗಳಲ್ಲಿ 14 ಶತಕ ಸಿಡಿಸಿರುವ ದಕ್ಷಿಣ ಆಫ್ರಿಕಾದ ಅಶೀಂ ಆಮ್ಲಾ ಮೂರನೇ ಸ್ಥಾನದಲ್ಲಿದ್ದು, ಆಸ್ಚ್ರೇಲಿಯಾದ ದಂತಕಥೆ ರಿಕ್ಕಿ ಪಾಂಟಿಂಗ್  151 ಇನ್ನಿಂಗ್ಸ್ ಗಳಲ್ಲಿ 14 ಶತಕ ಸಿಡಿಸಿ 4ನೇ ಸ್ಥಾನದಲ್ಲಿದ್ದಾರೆ.

ತಂಡವೊಂದರ ವಿರುದ್ಧ ಅಧಿಕ ಶತಕ: ಕೊಹ್ಲಿ ದಾಖಲೆ
ಅಂತೆಯೇ ಲಂಕಾ ವಿರುದ್ಧ ಶತಕದ ಮೂಲಕ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು ತಮ್ಮದೇ ಹಳೆಯ ದಾಖಲೆಯನ್ನು ಪುನರ್ ನಿರ್ಮಾಣ ಮಾಡಿದ್ದಾರೆ. ತಂಡವೊಂದರ ವಿರುದ್ಧ ಅಧಿಕ ಶತಕಗಳನ್ನು ಸಿಡಿಸಿದ ಪಟ್ಟಿಯಲ್ಲೂ ಕೊಹ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಈ ಹಿಂದೆ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅತೀ ಹೆಚ್ಚು ಅಂದರೆ 9 ಶತಕ ಸಿಡಿಸಿ ಈ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದರು. ಇದೀಗ ಇಂತಹುದೇ ದಾಖಲೆಯನ್ನು ಶ್ರೀಲಂಕಾ ವಿರುದ್ಧವೂ ಕೊಹ್ಲಿ ನಿರ್ಮಾಣ ಮಾಡಿದ್ದು, ಇಂದು ಕೊಹ್ಲಿ ಸಿಡಿಸಿದ ಶತಕ ಶ್ರೀಲಂಕಾ ವಿರುದ್ಧದ 9ನೇ ಶತಕವಾಗಿದೆ. ಉಳಿದಂತೆ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ 9 ಶತಕ ಸಿಡಿಸಿದ್ದು, ಇದೇ ಆಸ್ಟ್ರೇಲಿಯಾ ವಿರುದ್ಧ ಭಾರತದ ಮತ್ತೋರ್ವ ಆಟಗಾರ ಹಾಗೂ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 8 ಶತಕ ಸಿಡಿಸಿ ಜಂಟಿ 2ನೇ ಸ್ಥಾನದಲ್ಲಿದ್ದಾರೆ.

STAT: Most ODI 100s vs a team
9 Virat Kohli vs WI
9 Virat Kohli vs SL *
9 Sachin Tendulkar vs Aus
8 Rohit Sharma vs Aus
8 Virat Kohli vs Aus
8 Sachin Tendulkar vs SL

ಇನ್ನು ಇದೇ ಕೊಹ್ಲಿ ಅಸ್ಟ್ರೇಲಿಯಾ ವಿರುದ್ಧವೂ 8 ಶತಕ ಸಿಡಿಸಿದ್ದು, ಶ್ರೀಲಂಕಾ ವಿರುದ್ಧ ಸಚಿನ್ 8 ಶತಕ ಸಿಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com