Stat: ಮೊದಲ ಏಕದಿನ ಪಂದ್ಯ; ಟಾಪ್ ಸ್ಕೋರಿಂಗ್ ಅಂತರದಲ್ಲೂ ದಾಖಲೆ

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಕ್ರಿಕೆಟ್ ಲೋಕದ ಹಲವು ದಾಖಲೆಗಳ ಪತನಕ್ಕೆ ಕಾರಣವಾಗಿದ್ದು, ಇದೀಗ ಈ ಪಂದ್ಯದಲ್ಲಿನ ಟಾಪ್ ಸ್ಕೋರರ್ ಮತ್ತು 2ನೇ ಗರಿಷ್ಠ ರನ್ ಕಲೆಹಾಕಿದ ಆಟಗಾರರ ಅಂತರದಲ್ಲೂ ದಾಖಲೆ ಸೃಷ್ಟಿಯಾಗಿದೆ.
ಗಿಲ್ ಮತ್ತು ರೋಹಿತ್ ಶರ್ಮಾ
ಗಿಲ್ ಮತ್ತು ರೋಹಿತ್ ಶರ್ಮಾ

ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಕ್ರಿಕೆಟ್ ಲೋಕದ ಹಲವು ದಾಖಲೆಗಳ ಪತನಕ್ಕೆ ಕಾರಣವಾಗಿದ್ದು, ಇದೀಗ ಈ ಪಂದ್ಯದಲ್ಲಿನ ಟಾಪ್ ಸ್ಕೋರರ್ ಮತ್ತು 2ನೇ ಗರಿಷ್ಠ ರನ್ ಕಲೆಹಾಕಿದ ಆಟಗಾರರ ಅಂತರದಲ್ಲೂ ದಾಖಲೆ ಸೃಷ್ಟಿಯಾಗಿದೆ.

ಹೌದು.. ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿಗ ಭಾರತ ತಂಡ ಶುಭ್ ಮನ್ ಗಿಲ್ (208 ರನ್) ದ್ವಿಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿ ನ್ಯೂಜಿಲೆಂಡ್ ಗೆ ಗೆಲ್ಲಲು 350 ರನ್ ಗಳ ಬೃಹತ್ ಗುರಿ ನೀಡಿದೆ. ಭಾರತದ ಪರ ನಾಯಕ ರೋಹಿತ್ ಶರ್ಮಾ 34 ರನ್ ಗಳಿಸಿದರೆ, ಮತ್ತೋರ್ವ ಆರಂಭಿಕ ಆಟಗಾರ ಶುಭ್ ಮನ್ ಗಿಲ್ ಕೇವಲ 149 ಎಸೆತಗಳನ್ನು ಎದುರಿಸಿ 9 ಸಿಕ್ಸರ್ ಮತ್ತು 19 ಬೌಂಡರಿಗಳ ನೆರವಿನಿಂದ 208ರನ್ ಗಳನ್ನು ಕಲೆಹಾಕಿದರು.

ಈ ಇಬ್ಬರು ಆಟಗಾರರೂ ಇಂದಿನ ಪಂದ್ಯದ ಭಾರತ ಪರ ಟಾಪ್ ಸ್ಕೋರರ್ ಗಳಾಗಿದ್ದು, ಈ ಪಂದ್ಯದಲ್ಲಿ ರನ್ ಮೆಶಿನ್ ವಿರಾಟ್ ಕೊಹ್ಲಿ ಕೇವಲ 8 ರನ್ ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಹಾರ್ದಿಕ್ ಪಾಂಡ್ಯಾ 28 ಮತ್ತು ಸೂರ್ಯ ಕುಮಾರ್ ಯಾದವ್ 31 ರನ್ ಗಳಿಸಿದರು. 

ಟಾಪ್ ಸ್ಕೋರಿಂಗ್ ಅಂತರದಲ್ಲೂ ದಾಖಲೆ
ಈ ಪಂದ್ಯದಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಭಾರತದ ಇನ್ನಿಂಗ್ಸ್ ನ ಟಾಪ್ ಸ್ಕೋರರ್ ಶುಭ್ ಮನ್ ಗಿಲ್ (208ರನ್) ಮತ್ತು 2ನೇ ಟಾಪ್ ಸ್ಕೋರರ್ ನಾಯಕ ರೋಹಿತ್ ಶರ್ಮಾ (34 ರನ್) ಅವರ ರನ್ ಗಳಿಕೆಯ ಅಂತರ.. ರೋಹಿತ್ ಮತ್ತು ಗಿಲ್ ನಡುವಿನ ಸ್ಕೋರ್ ಅಂತರ ಬರೊಬ್ಬರಿ 174 ರನ್ ಗಳು...

ಏಕದಿನ ಕ್ರಿಕೆಟ್ ನಲ್ಲಿ ಪಂದ್ಯವೊಂದ ತಂಡದ ಇಬ್ಬರು ಟಾಪ್ ಸ್ಕೋರರ್ ಆಟಗಾರರ ನಡುವಿನ ರನ್ ಗಳ ಅಂತರ ಇಷ್ಟು ದೊಡ್ಡ ಪ್ರಮಾಣದಲ್ಲಿರುವುದು ಇದು ಟಾಪ್ ಮೂರನೇ ಉದಾಹರಣೆಯಾಗಿದೆ. ಈ ಹಿಂದೆ 2014ರಲ್ಲಿ ಕೋಲ್ಕತಾದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೋಪ್ ಸ್ಕೋರರ್ ಆಗಿದ್ದ ರೋಹಿತ್ ಶರ್ಮಾ (264 ರನ್) ಮತ್ತು 2ನೇ ಟಾಪ್ ಸ್ಕೋರರ್ ಆಗಿದ್ದ ವಿರಾಟ್ ಕೊಹ್ಲಿ (66 ರನ್) ನಡುವೆ ಬರೊಬ್ಬರಿ 198 ರನ್ ಗಳ ಅಂತರವಿತ್ತು. ಇದು ಕ್ರಿಕೆಟ್ ಲೋಕದಲ್ಲಿ ದಾಖಲಾದ ಪಂದ್ಯವೊಂದರ ಟಾಪ್ ಸ್ಕೋರ್ ಆಟಗಾರರ ನಡುವಿನ ಬೃಹತ್ ರನ್ ಗಳ ಅಂತರವಾಗಿದೆ.

ಅಂತೆಯೇ 2015ರಲ್ಲಿ ವೆಲ್ಲಿಂಗ್ಟನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟಾಪ್ ಸ್ಕೋರರ್ ಆಗಿದ್ದ ಮಾರ್ಟಿನ್ ಗಪ್ಟಿಲ್ (ಅಜೇಯ 237 ರನ್) 2ನೇ ಟಾಪ್ ಸ್ಕೋರರ್ ಆಗಿದ್ದ ರಾಸ್ ಟೇಲರ್ (42 ರನ್) ನಡುವಿನ ರನ್ ಗಳ ಅಂತರ 195 ರನ್ ಗಳಾಗಿತ್ತು. ಇದು ಪಟ್ಟಿಯ 2ನೇ ಟಾಪ್ ಸ್ಕೋರ್ ಆಟಗಾರರ ನಡುವಿನ 2ನೇ ಬೃಹತ್ ರನ್ ಗಳ ಅಂತರವಾಗಿ ದಾಖಲಾಗಿದೆ.

Highest difference between top scorer and next highest scorer in an ODI inngs
198 Rohit (264) | Kohli (66) vs SL Kolkata 2014
195 Guptill (237*) | Taylor (42) vs WI Wellington 2015
174 Shubman (208) | Rohit (34) vs NZ Hyderabad 2023 *

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com