ರೋಹಿತ್ ಶರ್ಮಾ ಮತ್ತೆ ಡಕೌಟ್, ಐಪಿಎಲ್ ಇತಿಹಾಸದ ಬೇಡದ ದಾಖಲೆ ಬರೆದ ಮುಂಬೈ ನಾಯಕ!

ಐಪಿಎಲ್ ಟೂರ್ನಿಯ ಇಂದಿನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮತ್ತೆ ಡಕೌಟ್ ಆಗುವ ಮೂಲಕ ಐಪಿಎಲ್ ಇತಿಹಾಸದ ಕುಖ್ಯಾತ ದಾಖಲೆಯೊಂದನ್ನು ಬರೆದಿದ್ದಾರೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಮುಂಬೈ: ಐಪಿಎಲ್ ಟೂರ್ನಿಯ ಇಂದಿನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮತ್ತೆ ಡಕೌಟ್ ಆಗುವ ಮೂಲಕ ಐಪಿಎಲ್ ಇತಿಹಾಸದ ಕುಖ್ಯಾತ ದಾಖಲೆಯೊಂದನ್ನು ಬರೆದಿದ್ದಾರೆ.

ಹೌದು.. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಶನಿವಾರ ಎಂಎಸ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಅನಗತ್ಯ ಬ್ಯಾಟಿಂಗ್ ದಾಖಲೆಯನ್ನು ದಾಖಲಿಸಿದ್ದು, ಈ ಪಂದ್ಯದಲ್ಲಿ ಮತ್ತೆ ಡಕೌಟ್ ಆಗುವ ಮೂಲಕ ರೋಹಿತ್ ಶರ್ಮಾ ಹೀನಾಯ ದಾಖಲೆ ಬರೆದಿದ್ದಾರೆ. 

ರೋಹಿತ್ ಶರ್ಮಾ ಅವರು ದೀಪಕ್ ಚಹಾರ್ ಅವರ ಮೂರನೇ ಓವರ್‌ನ ಐದನೇ ಎಸೆತದಲ್ಲಿ ಔಟಾದರು. ಲ್ಯಾಪ್ ಶಾಟ್‌ಗೆ ಹೋಗುವ ಪ್ರಯತ್ನದಲ್ಲಿ ಅವರು ಬ್ಯಾಕ್‌ವರ್ಡ್ ಪಾಯಿಂಟ್‌ನಿಂದ ಬಂದ ರವೀಂದ್ರ ಜಡೇಜಾಗೆ ಸುಲಭ ಕ್ಯಾಚ್ ನೀಡಿ ಶೂನ್ಯಕ್ಕೆ ಔಟಾದರು. ಐಪಿಎಲ್‌ನಲ್ಲಿ ರೋಹಿತ್ ಶೂನ್ಯಕ್ಕೆ ಔಟಾಗಿರುವುದು ಇದು 16ನೇ ಬಾರಿ. ಆ ಮೂಲಕ ಅವರು ಈಗ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಕ್‌ ಔಟ್ ಆದ ಆಟಗಾರ ಎಂಬ ಹೀನಾಯ ದಾಖಲೆ ಬರೆದಿದ್ದಾರೆ.

ಈ ಪಂದ್ಯದ ಮೊದಲು, ರೋಹಿತ್ ಇತರ ಮೂವರು ಆಟಗಾರರೊಂದಿಗೆ 15 ಐಪಿಎಲ್ ಡಕ್‌ ಔಟ್ ನಲ್ಲಿ ಜಂಟಿ ಅಗ್ರ ಸ್ಥಾನದಲ್ಲಿದ್ದರು. ಆದರೆ 16ನೇ ಬಾರಿಗೆ ಡಕೌಟ್ ಆಗುವ ಮೂಲಕ ದಿನೇಶ್ ಕಾರ್ತಿಕ್, ಮನದೀಪ್ ಸಿಂಗ್ ಮತ್ತು ವೆಸ್ಟ್ ಇಂಡೀಸ್ ಆಲ್ ರೌಂಡರ್ ಸುನಿಲ್ ನರೈನ್ ರನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದ್ದಾರೆ.. ಭಾರತದ ಬ್ಯಾಟರ್ ಅಂಬಟಿ ರಾಯುಡು ಐಪಿಎಲ್ ಇತಿಹಾಸದಲ್ಲಿ 14 ಡಕ್‌ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com