ಮೈದಾನದಲ್ಲೇ ಸಂಘರ್ಷ: ವಿರಾಟ್ ಕೊಹ್ಲಿ ದಂಡ ಪಾವತಿಸಲ್ಲ, ಹಾಗಾದರೆ ಯಾರು ಪಾವತಿಸುತ್ತಾರೆ? ಗಂಭೀರ್ ಕತೆ ಏನು?

ಐಪಿಎಲ್ ಟೂರ್ನಿಯ 43ನೇ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘನೆಗಾಗಿ ವಿರಾಟ್ ಕೊಹ್ಲಿಗೆ ಹೇರಲಾಗಿದ್ದ 1. 7ಕೋಟಿ ರೂ ದಂಡವನ್ನು ಅವರು ಪಾವತಿಸುವುದಿಲ್ಲ ಎಂದು ಹೇಳಲಾಗಿದೆ.
ವಿರಾಟ್ ಕೊಹ್ಲಿ-ಗಂಭೀರ್ ಸಂಘರ್ಷ
ವಿರಾಟ್ ಕೊಹ್ಲಿ-ಗಂಭೀರ್ ಸಂಘರ್ಷ

ನವದೆಹಲಿ: ಐಪಿಎಲ್ ಟೂರ್ನಿಯ 43ನೇ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘನೆಗಾಗಿ ವಿರಾಟ್ ಕೊಹ್ಲಿಗೆ ಹೇರಲಾಗಿದ್ದ 1. 7ಕೋಟಿ ರೂ ದಂಡವನ್ನು ಅವರು ಪಾವತಿಸುವುದಿಲ್ಲ ಎಂದು ಹೇಳಲಾಗಿದೆ.

ಹೌದು..  ಐಪಿಎಲ್​ನ 43ನೇ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘನೆಗಾಗಿ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಹಾಗೂ ನವೀನ್ ಉಲ್ ಹಕ್​ಗೆ ದಂಡ ವಿಧಿಸಲಾಗಿತ್ತು. ಇಲ್ಲಿ ಕೊಹ್ಲಿ ಹಾಗೂ ಗಂಭೀರ್​ಗೆ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಿದರೆ, ನವೀನ್ ಉಲ್ ಹಕ್​ಗೆ ಮ್ಯಾಚ್ ಫೀನ ಶೇ.50 ರಷ್ಟು ದಂಡ ವಿಧಿಸಲಾಗಿದೆ. ಅದರಂತೆ ವಿರಾಟ್ ಕೊಹ್ಲಿ 1.07 ಕೋಟಿ ರೂ. ದಂಡ ಪಾವತಿಸಬೇಕಾಗಿದೆ. ಹಾಗೆಯೇ ಗೌತಮ್ ಗಂಭೀರ್​ 25 ಲಕ್ಷ ದಂಡ ಕಟ್ಟಬೇಕಿದೆ.  ಅಂದರೆ ಇಲ್ಲಿ ವಿರಾಟ್ ಕೊಹ್ಲಿಯ ಐಪಿಎಲ್ ಸಂಭಾವನೆ 15 ಕೋಟಿ ರೂ.ಗೆ ಅನುಗುಣವಾಗಿ ಪ್ರತಿ ಪಂದ್ಯದ ಶುಲ್ಕ ಸುಮಾರು 1.07 ಕೋಟಿ ರೂ. ಆಗಿರಲಿದೆ. 

ವಿರಾಟ್ ಕೊಹ್ಲಿ ದಂಡ ಪಾವತಿಸಲ್ಲ
ಕೊಹ್ಲಿಗೆ ವಿಧಿಸಲಾಗಿರುವ 1.7 ಕೋಟಿ ರೂ ದಂಡದ ಮೊತ್ತವನ್ನು ಕೊಹ್ಲಿ ಪಾವತಿಸುವುದಿಲ್ಲ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ವಿರಾಟ್ ಕೊಹ್ಲಿಗೆ ಹಾಗೂ ಗಂಭೀರ್​ಗೆ ದಂಡ ವಿಧಿಸಲಾಗಿದ್ದರೂ, ಅದನ್ನು ಪಾವತಿಸುವುದು ಐಪಿಎಲ್ ಮುಕ್ತಾಯದ ಬಳಿಕ. ಅಂದರೆ ಐಪಿಎಲ್​ ಮುಗಿದ ನಂತರ ಪ್ರತಿ ತಂಡಗಳಿಗೆ ಹಾಗೂ ಆಟಗಾರರಿಗೆ ವಿಧಿಸಲಾದ ದಂಡ ಮೊತ್ತ ಲೆಕ್ಕವನ್ನು ಫ್ರಾಂಚೈಸ್​​ಗಳಿಗೆ ನೀಡಲಾಗುತ್ತದೆ. ಅದಕ್ಕನುಗುಣವಾಗಿ ಫೈನ್ ಮೊತ್ತವನ್ನು ಪಾವತಿಸಿ ಕ್ಲಿಯರ್ ಮಾಡಲಾಗುತ್ತದೆ.

ಆರ್ ಸಿಬಿಯಿಂದಲೇ ದಂಡ ಪಾವತಿ
ಇಲ್ಲಿ ಕುತೂಹಲಕಾರಿ ವಿಷಯ ಎಂದರೆ ಆರ್​ಸಿಬಿ ಫ್ರಾಂಚೈಸ್​ಯು ವಿರಾಟ್ ಕೊಹ್ಲಿಯ ದಂಡದ ಮೊತ್ತವನ್ನು ಪಾವತಿಸಲಿದೆ. ಕೊಹ್ಲಿಗೆ ನೀಡಲಿರುವ 15 ಕೋಟಿ ರೂ. ಸಂಭಾವನೆಯಿಂದ ಆರ್​ಸಿಬಿ ಯಾವುದೇ ಮೊತ್ತವನ್ನು ಕಡಿತಗೊಳಿಸುವುದಿಲ್ಲ. ಈ ನಷ್ಟದ ಹೊರೆಯನ್ನು ಆರ್​ಸಿಬಿ ಫ್ರಾಂಚೈಸಿಯೇ ಭರಿಸಲಿದೆ ಎಂದು ಹೇಳಲಾಗಿದೆ. ಹೆಚ್ಚಿನ ಫ್ರಾಂಚೈಸಿಗಳು ತಮ್ಮ ಆಟಗಾರರಿಗೆ ಹಾಗೂ ಸಿಬ್ಬಂದಿಗೆ ವಿಧಿಸಲಾಗುವ ದಂಡದ ಮೊತ್ತವನ್ನು ಅವರೇ ಪಾವತಿಸುತ್ತಾರೆ. ಹೀಗಾಗಿ ವಿರಾಟ್ ಕೊಹ್ಲಿ ಅವರ ವೇತನದಲ್ಲಿ ಯಾವುದೇ ಕಡಿತವಾಗುವುದಿಲ್ಲ ಎಂದು ತಿಳಿದು ಬಂದಿದೆ. 

BCCI ತಂಡಗಳ ಮೇಲೆ ವಿಧಿಸಲಾದ ಎಲ್ಲಾ ದಂಡಗಳ ಬಿಲ್ ಅನ್ನು ಫ್ರಾಂಚೈಸಿಗಳಿಗೆ ಕಳುಹಿಸುತ್ತದೆ. ಆ ಬಳಿಕ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ಹಾಗೂ ಆಟಗಾರರ ದಂಡವನ್ನು ಪಾವತಿ ಮಾಡಿ ತೆರವುಗೊಳಿಸಬೇಕು. ಇಲ್ಲಿ ಆಟಗಾರನ ವೇತನದಿಂದ ಈ ಮೊತ್ತವನ್ನು ಕಡಿತಗೊಳಿಸಬೇಕೇ ಅಥವಾ ಬೇಡವೇ ಎಂಬುದು ಆಯಾ ತಂಡದ ಆಂತರಿಕ ವಿಷಯವಾಗಿರುತ್ತದೆ. ಇದಾಗ್ಯೂ ಆರ್​ಸಿಬಿ ಕಿಂಗ್ ಕೊಹ್ಲಿಯ ವೇತನದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಹೀಗಾಗಿ ವಿರಾಟ್ ಕೊಹ್ಲಿ ದಂಡ ಪಾವತಿಸುವುದಿಲ್ಲ, ಬದಲಾಗಿ ಆರ್​ಸಿಬಿಯೇ ಆ ವೆಚ್ಚವನ್ನು ಭರಿಸಲಿದೆ ಎಂದು ತಿಳಿದುಬಂದಿದೆ.

ಗಂಭೀರ್ ಕತೆ ಏನು?
ಕೊಹ್ಲಿ ಆರ್ ಸಿಬಿಯ ಪ್ರಮುಖ ಆಟಗಾರ.. ಹೀಗಾಗಿ ಆರ್ ಸಿಬಿ ಫ್ರಾಂಚೈಸಿ ಕೊಹ್ಲಿಯ ದಂಡದ ಮೊತ್ತವನ್ನು ಪಾವತಿ ಮಾಡಲಿದೆ. ಆದರೆ ಲಕ್ನೋ ತಂಡದ ಮೆಂಟರ್ ಅಥವಾ ಮಾರ್ಗದರ್ಶಕ ಗೌತಮ್ ಗಂಭೀರ್ ಗೆ ವಿಧಿಸಲಾಗಿರುವ ದಂಡದ ಕತೆ ಏನು? ಇದಕ್ಕೂ ಉತ್ತರ ಇಲ್ಲಿದೆ... ಕೊಹ್ಲಿ ಅಥವಾ ನವೀನ್ ಉಲ್ ಹಕ್ ರಂತೆ ಗೌತಮ್ ಗಂಭೀರ್ ರನ್ನು ಲಕ್ನೋ ಫ್ರಾಂಚೈಸಿ ಬಿಡ್ ಮಾಡಿ ಖರೀದಿಸಿಲ್ಲ.. ಒಪ್ಪಂದದ ಮೇರೆಗೆ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. LSG ಯಿಂದ ಗಂಭೀರ್ ಪಡೆಯುವ ಯಾವುದೇ ಸಂಬಳವು ಫ್ರಾಂಚೈಸಿ ಮಾಲೀಕರ ನಡುವೆ ಕಟ್ಟುನಿಟ್ಟಾಗಿ ಇರುತ್ತದೆ. ಹೀಗಾಗಿ ಅದು RCB ಯಂತೆಯೇ ಗಂಭೀರ್ ಮತ್ತು ನವೀನ್ ಉಲ್ ಹಕ್ ಅವರ ದಂಡವನ್ನು ಎಲ್ಎಸ್ಜಿ ಫ್ರಾಂಚೈಸಿಯೇ ಪಾವತಿಸುತ್ತದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com