ಐಪಿಎಲ್ ನಲ್ಲಿ ಸ್ಫೋಟಕ ಬ್ಯಾಟಿಂಗ್: ಯಶಸ್ವಿ ಜೈಸ್ವಾಲ್ ಮೇಲೆ ಆಯ್ಕೆಗಾರರ ಕಣ್ಣು, ಶೀಘ್ರ ಭಾರತ ತಂಡಕ್ಕೆ: ರವಿಶಾಸ್ತ್ರಿ

ಯಶಸ್ವಿ ಜೈಸ್ವಾಲ್ ಅವರ ಐಪಿಎಲ್‌ನಲ್ಲಿನ ಯಶಸ್ಸು ಅವರ ಮೇಲೆ ರಾಷ್ಟ್ರೀಯ ಆಯ್ಕೆಗಾರರ ಕಣ್ಣು ಬೀಳುವಂತೆ ಮಾಡಿದ್ದು, ಶೀಘ್ರದಲ್ಲೇ ಭಾರತ ತಂಡಕ್ಕೆ ಆಡುವ ವಿಶ್ವಾಸವಿದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಯಶಸ್ವಿ ಜೈಸ್ವಾಲ್
ಯಶಸ್ವಿ ಜೈಸ್ವಾಲ್
Updated on

ಮುಂಬೈ: ಯಶಸ್ವಿ ಜೈಸ್ವಾಲ್ ಅವರ ಐಪಿಎಲ್‌ನಲ್ಲಿನ ಯಶಸ್ಸು ಅವರ ಮೇಲೆ ರಾಷ್ಟ್ರೀಯ ಆಯ್ಕೆಗಾರರ ಕಣ್ಣು ಬೀಳುವಂತೆ ಮಾಡಿದ್ದು, ಶೀಘ್ರದಲ್ಲೇ ಭಾರತ ತಂಡಕ್ಕೆ ಆಡುವ ವಿಶ್ವಾಸವಿದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಕ್ರೀಡಾ ವೆಬ್ ಸೈಟ್ ನೊಂದಿಗೆ ಮಾತನಾಡಿದ ರವಿಶಾಸ್ತ್ರಿ, 'ಆಯ್ಕೆದಾರರು ಯುವ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು..ಶೀಘ್ರ ಅವರು ಭಾರತ ತಂಡಕ್ಕೆ ಆಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

ಅಂತೆಯೇ ಜೈಸ್ವಾಲ್ ರನ್ನು "ಪವರ್ ಮತ್ತು ಟೈಮಿಂಗ್" ಆಟಗಾರ ಎಂದು ಶ್ಲಾಘಿಸಿರುವ ಶಾಸ್ತ್ರಿ, 'ಆಯ್ಕೆಗಾರರು ಜೈಸ್ವಾಲ್ ಅವರನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಅವರು ಶೀಘ್ರದಲ್ಲೇ ಭಾರತಕ್ಕಾಗಿ ಆಡಲಿದ್ದಾರೆ. ಅವರ ಅತ್ಯುತ್ತಮ ವಿಷಯವೆಂದರೆ ಅವರು ತಮ್ಮ ಗ್ರಾಫ್ ಅನ್ನು ಹೆಚ್ಚಿಸಿದ ರೀತಿ. ಅವರ ಆಟದಲ್ಲಿ ಶಕ್ತಿ ಇದೆ, ಸಮಯವಿದೆ. ಅವರು ಉಜ್ವಲ ಭವಿಷ್ಯದ ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಜೈಸ್ವಾಲ್ ಪ್ರಸ್ತುತ IPL 2023 ರಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, ಅವರು 12 ಪಂದ್ಯಗಳಲ್ಲಿ 52.27 ಸರಾಸರಿಯಲ್ಲಿ ಮತ್ತು 167 ಸ್ಟ್ರೈಕ್ ರೇಟ್‌ನಲ್ಲಿ 575 ರನ್ ಗಳಿಸಿದ್ದಾರೆ. ಅವರು ಇಲ್ಲಿಯವರೆಗೆ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com