ಭಾರತದ ಬೌಲರ್​ಗಳಿಗೆ ವಿಭಿನ್ನ ಚೆಂಡು ಆರೋಪ: 'ಆ ರೀತಿ ಯಾರು ಯೋಚಿಸ್ತಾರೆ'; ತನ್ನದೇ ದೇಶದ ಆಟಗಾರನಿಗೆ ಜಾಡಿಸಿದ ವಸೀಂ ಅಕ್ರಂ

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಬೌಲರ್​ಗಳಿಗೆ ಅನುಮಾನಾಸ್ಪದ ಮತ್ತು ವಿಭಿನ್ನ ಚೆಂಡು ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಸರಿಯಾಗಿಯೇ ಜಾಡಿಸಿರುವ ಪಾಕಿಸ್ತಾನ ಕ್ರಿಕೆಟ್ ದಂತಕಥೆ ವಸೀಂ ಅಕ್ರಂ ಆ ರೀತಿ ಯಾರು ಯೋಚಿಸುತ್ತಾರೆ ಎಂದು ಹೇಳಿದ್ದಾರೆ.
ವಸೀಂ ಅಕ್ರಂ ಮತ್ತು ಭಾರತೀಯ ಬೌಲರ್ ಗಳು
ವಸೀಂ ಅಕ್ರಂ ಮತ್ತು ಭಾರತೀಯ ಬೌಲರ್ ಗಳು

ಲಾಹೋರ್: ಐಸಿಸಿ ವಿಶ್ವಕಪ್ ಟೂರ್ನಿ (ICC Cricket World Cup 2023)ಯಲ್ಲಿ ಭಾರತದ ಬೌಲರ್​ಗಳಿಗೆ ಅನುಮಾನಾಸ್ಪದ ಮತ್ತು ವಿಭಿನ್ನ ಚೆಂಡು ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಸರಿಯಾಗಿಯೇ ಜಾಡಿಸಿರುವ ಪಾಕಿಸ್ತಾನ ಕ್ರಿಕೆಟ್ ದಂತಕಥೆ ವಸೀಂ ಅಕ್ರಂ (Wasim Akram) ಆ ರೀತಿ ಯಾರು ಯೋಚಿಸುತ್ತಾರೆ ಎಂದು ಹೇಳಿದ್ದಾರೆ.

ಐಸಿಸಿ (ICC) ಮತ್ತು ಬಿಸಿಸಿಐ (BCCI) ಭಾರತದ ಬೌಲರ್​​​​​ಗಳಿಗೆ ವಿಶೇಷ ಬಾಲ್​​​​ಗಳನ್ನು ನೀಡುತ್ತಿದೆ. ಇದೇ ಕಾರಣಕ್ಕಾಗಿ ಅವರು ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಹಸನ್ ರಾಝಾ (Hasan Raza) ಆರೋಪಿಸಿದ್ದರು. ಹಾಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ICC ODI World Cup 2023) ಟೀಮ್ ಇಂಡಿಯಾ (Team India) ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ.

ಶ್ರೀಲಂಕಾ ವಿರುದ್ಧ 302 ರನ್​​ಗಳ ಭರ್ಜರಿ ಗೆಲುವು ದಾಖಲಿಸಿದ ಭಾರತ (India vs Sri Lanka), ಸತತ 7 ಗೆಲುವುಗಳಿಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಈ ಪಂದ್ಯದ ಕುರಿತ ಟಿವಿ ಚರ್ಚೆಯಲ್ಲಿ ಹಸನ್ ರಾಝಾ ಇಂತಹ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆ ಕಳೆದ ಮೂರು ದಿನಗಳಿಂದ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದ್ದು, ಅವರ ಹೇಳಿಕೆ ವ್ಯಾಪಕ ವಿರೋಧ ಕೂಡ ಕೇಳಿಬರುತ್ತಿದೆ. 

ಇದೀಗ ಈ ಬಗ್ಗೆ ಪಾಕಿಸ್ತಾನ (Pakistan)ದ ಮತ್ತೋರ್ವ ಮಾಜಿ ಆಟಗಾರ ಮತ್ತು ಪಾಕ್ ಕ್ರಿಕೆಟ್ ಲೆಜೆಂಡರಿ ಆಲ್ರೌಂಡರ್ ವಸೀಂ ಅಕ್ರಂ ಆಕ್ರೋಶ ವ್ಯಕ್ತಪಡಿಸಿದ್ದು, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅದರಲ್ಲೂ ಐಸಿಸಿ ಟೂರ್ನಿಯಲ್ಲಿ ಯಾರು ಆ ರೀತಿ ಯೋಚಿಸುತ್ತಾರೆ ಎಂದು ಹಸನ್ ರಾಝಾರನ್ನು ಜಾಡಿಸಿದ್ದಾರೆ.

'ಕಳೆದ ಎರಡು ದಿನಗಳಿಂದ ನಾನು ಇದರ ಬಗ್ಗೆ ಓದುತ್ತಿದ್ದೇನೆ. ಈ ವ್ಯಕ್ತಿಗಳು ಹೊಂದಿರುವ ಅದೇ ವಿಷಯವನ್ನು ನಾನು ಹೊಂದಲು ಬಯಸುತ್ತೇನೆ, ಅದರೆ ಹಾಸ್ಯಾಸ್ಪದ ಎನಿಸುತ್ತದೆ. ನೀವು ಇಂತಹ ಹೇಳಿಕೆಗಳ ಮೂಲಕ ನಿಮಗೆ ಮಾತ್ರವಲ್ಲ ನಮಗೂ ಮುಜುಗರ ಉಂಟು ಮಾಡುತ್ತಿದ್ದೀರಿ. ನೋಡಿ, ಇದು ತುಂಬಾ ಸರಳ ವಿಷಯ. ಪ್ರತೀ ಪಂದ್ಯಕ್ಕೂ ಮುನ್ನ ಇತರ ಪಂದ್ಯದ ಅಧಿಕಾರಿಗಳ ಸಮ್ಮುಖದಲ್ಲಿ ಅಂಪೈರ್ ಗಳು 12 ಚೆಂಡುಗಳನ್ನು ಹೊಂದಿರುವ ಬಾಕ್ಸ್‌ನೊಂದಿಗೆ ಮೊದಲು ಬೌಲಿಂಗ್ ಮಾಡುವ ತಂಡದ ಬಳಿ ಹೋಗುತ್ತಾರೆ. ಅಲ್ಲಿ ಬೌಲರ್(ಗಳು) ಅವರ ಆದ್ಯತೆಗೆ ಅನುಗುಣವಾಗಿ ಎರಡು ಚೆಂಡುಗಳನ್ನು ಆಯ್ಕೆ ಮಾಡುತ್ತಾರೆ.

ನಂತರ ಅವರು ಉಳಿದ ಎಂಟು ಚೆಂಡುಗಳನ್ನು ಇತರ ತಂಡದ ಆಟಗಾರರಿರುವ ಡ್ರೆಸ್ಸಿಂಗ್ ಕೋಣೆಗೆ ತೆಗೆದುಕೊಂಡು ಹೋಗಿ ಮತ್ತದೇ ಕಾರ್ಯ ಮಾಡುತ್ತಾರೆ. ಉಭಯ ತಂಡಗಳು ಆಯ್ಕೆ ಮಾಡಿದ 4 ಚೆಂಡುಗಳನ್ನು ನಾಲ್ಕನೇ ಅಂಪೈರ್‌ಗೆ ಹಸ್ತಾಂತರಿಸುತ್ತಾರೆ. ಇದೆಲ್ಲವೂ ಪಂದ್ಯದ ಅಧಿಕಾರಿಗಳ ಸಮ್ಮುಖದಲ್ಲಿಯೇ ನಡೆಯುತ್ತದೆ. ಪರಿಸ್ಥಿತಿ ಹೀಗಿರುವಾಗ ಒಂದು ತಂಡಕ್ಕೆ ವಿಶೇಷ ಚೆಂಡು ನೀಡುವ ಪ್ರಶ್ನೆ ಎಲ್ಲಿ ಉದ್ಭವಿಸುತ್ತದೆ ಎಂದು ಅಕ್ರಂ ಪ್ರಶ್ನಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತೀಯ ಬೌಲರ್ ಗಳ ಪರಿಶ್ರಮವನ್ನು ಶ್ಲಾಗಿಸಿದ ಅಕ್ರಂ, ಜಸ್ಪ್ರೀತ್ ಬುಮ್ರಾ (Jusprit Bumrah), ಮೊಹಮ್ಮದ್ ಶಮಿ (Mohammed Shami) ಮತ್ತು ಮೊಹಮ್ಮದ್ ಸಿರಾಜ್ (Mohammed Siraj) ಅವರ ಮೂವರು ಇತರೆ ಆಟಗಾರರಿಗಿಂತ ಬೌಲಿಂಗ್ ನಲ್ಲಿ "ಉತ್ತಮರಾಗಿರಬಹುದು" ಎಂದು ಅಕ್ರಂ ಭಾರತೀಯ ವೇಗಿಗಳನ್ನು ಶ್ಲಾಘಿಸಿದರು.

"ಕೌನ್ ಸೋಚ್ತಾ ಹೈ ಯೇ ಚೀಝೀನ್? (ಯಾರು ಹೀಗೆ ಯೋಚಿಸುತ್ತಾರೆ?) ಯಾವುದೇ ಸಾಧನದಿಂದ ಚೆಂಡು ಹೇಗೆ ಸ್ವಿಂಗ್ ಆಗುತ್ತದೆ. ಇಲ್ಲಿ ಎಲ್ಲವೂ ಸರಳ..  ಚೆಂಡಿನ ಒಂದು ಬದಿ ಮೃದುವಾಗಿದ್ದು, ಮತ್ತೊಂದು ಬದಿ ಒರಟಾಗಿರುತ್ತದೆ. ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ನಮ್ಮ ದೇಶ ಸೇರಿದಂತೆ ಇತರ ದೇಶಗಳ ಆಟಗಾರರು ಬೌಲಿಂಗ್ ನಲ್ಲಿ ಅಷ್ಟು ಪ್ರಭಾವಶಾಲಿಯಾಗಿರಲಿಲ್ಲ ಎಂದ ಮಾತ್ರಕ್ಕೆ ಅಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆದಿದೆ ಎಂದು ಅರ್ಥವಲ್ಲ.. ಅಲ್ಲಿ ಭಾರತೀಯ ಬೌಲರ್ ಗಳು ಉತ್ತಮವಾದದ್ದನ್ನು ಮಾಡುತ್ತಿದ್ದಾರೆ. ಅವರು ಹೆಚ್ಚುವರಿಯಾಗಿ ಏನನ್ನಾದರೂ ಕಲಿತಿರಬಹುದು ಎಂದು ನಾನು ಭಾವಿಸುತ್ತೇನೆ. ಅವರು ಇದೀಗ ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿಯಾಗಿರಬಹುದು" ಎಂದು ಪಾಕ್ ಕ್ರಿಕೆಟ್ ದಂತಕಥೆ ಅಕ್ರಂ ಹೇಳಿದ್ದಾರೆ.

ಇನ್ನು ಇದೇ ಡಿಬೇಟ್ ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ (Shoaib Malik) ಮತ್ತು ಮಿಸ್ಬಾ-ಉಲ್-ಹಕ್  ಕೂಡ ಇದ್ದರು. ಅವರೂ ಕೂಡ ಅಕ್ರಂ ಹೇಳಿಕೆ ಧನಿಗೂಡಿಸಿದರು. "ನಾವು ಅವರಿಂದ (ಭಾರತೀಯ ಬೌಲರ್‌ಗಳು) ಕಲಿಯುವ ಬದಲು, ನಾವು ಅನುಮಾನ ವ್ಯಕ್ತಪಡಿಸುತ್ತಿದ್ದೇವೆ. ನಕಾರಾತ್ಮಕವಾಗಿ ಯೋಚಿಸುತ್ತಿದ್ದೇವೆ" ಎಂದು ಮಲಿಕ್ ಹೇಳಿದರು.

ಇದೇ ರೀತಿಯ ಹೇಳಿಕೆ ನೀಡಿಗ ಮಿಸ್ಬಾ ಉಲ್ ಹಕ್ (Misbah ul haq), "ಭಾರತೀಯ ಬೌಲರ್‌ಗಳು ಬ್ಯಾಟರ್‌ಗಳಿಗೆ ಬೌಲ್ ಮಾಡುವಾಗ ಟಿವಿ ಸೆಟ್‌ಗಳಲ್ಲಿ ಸೀಮ್ ಸ್ಥಾನವು ಗೋಚರಿಸುತ್ತದೆ. ಅದು ಕೈಯಿಂದ ಸರಿಯಾಗಿ ಹೊರಬರುತ್ತಿದೆ" ಎಂದು ಹೇಳಿದರು.

ಭಾರತ ಗುರುವಾರ ಶ್ರೀಲಂಕಾವನ್ನು 302 ರನ್‌ಗಳಿಂದ ಸೋಲಿಸಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ (Semi Final)ಗೆ ಅರ್ಹತೆ ಪಡೆದ ಮೊದಲ ತಂಡವಾಯಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com