ಐಪಿಎಲ್ 2024: ಗುಜರಾತ್ ಟೈಟಾನ್ಸ್ ಗೆ ಹಾರ್ದಿಕ್ ಪಾಂಡ್ಯ ಬೈಬೈ? ಮುಂಬೈ ಇಂಡಿಯನ್ಸ್ ತಂಡಕ್ಕೆ ವಾಪಸ್?

ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ನಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಹೋಗುವ ಸಾಧ್ಯತೆ ಇದೆ. 
ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ನಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಹೋಗುವ ಸಾಧ್ಯತೆ ಇದೆ. 

ಡಿಸೆಂಬರ್ ನಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಪಾಂಡ್ಯ ಮುಂಬೈ ಇಂಡಿಯನ್ಸ್ ಪರ 7 ಸೀಸನ್ ಗಳಲ್ಲಿ ಆಡಿದ್ದರು. 2022 ರ ಆವೃತ್ತಿಯಲ್ಲಿ ಪಾಂಡ್ಯ ತಂಡದಿಂದ ಹೊರಬಂದಿದ್ದರು. ಗುಜರಾತ್ ಟೈಟಾನ್ಸ್ ಗೆ ಸೇರಿದ್ದ ಪಾಂಡ್ಯ, ಸತತವಾಗಿ ಐಪಿಎಲ್ ಫೈನಲ್ಸ್ ಗೆ ತಂಡವನ್ನು ಮುನ್ನಡೆಸಿದ್ದರು. ಅಷ್ಟೇ ಅಲ್ಲದೇ ಪ್ರಾಂಚೈಸಿ ಪರಿಚಯವಾದ ಚೊಚ್ಚಲ ಸೀಸನ್ ನಲ್ಲಿಯೆ ಟ್ರೋಫಿಯನ್ನೂ ಗೆದ್ದಿತ್ತು.

"ಹೌದು, ಹಾರ್ದಿಕ್ ಎಂಐಗೆ ಹೋಗುವ ಬಗ್ಗೆ ಮಾತುಕತೆ ನಡೆದಿದೆ ಎಂದು ನಾನು ದೃಢೀಕರಿಸಬಲ್ಲೆ. ಅವರು ತಂಡವನ್ನು ಬದಲಾಯಿಸುವ ಅವಕಾಶ ಉಳಿದಿದೆ ಆದರೆ ಈ ಕ್ಷಣದಲ್ಲಿ, ಒಪ್ಪಂದಕ್ಕೆ ಇನ್ನೂ ಸಹಿ ಹಾಕದ ಕಾರಣ ಹೆಚ್ಚಿನದನ್ನು ದೃಢೀಕರಿಸಲು ಸಾಧ್ಯವಿಲ್ಲ" ಎಂದು ಐಪಿಎಲ್ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದೆ.

ಐಪಿಎಲ್ ನಲ್ಲಿ ಆಟಗಾರರ ವಿನಿಮಯಕ್ಕೆ ಅವಕಾಶವಿದ್ದು, ಪಾಂಡ್ಯ ಮುಂಬೈ ಇಂಡಿಯನ್ಸ್  ತಂಡಕ್ಕೆ ಮರಳಿದರೆ, ಯಾರು ಟೈಟಾನ್ಸ್‌ಗೆ ಬದಲಾಯಿಸಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com