ಕ್ರಿಕೆಟ್

'ವೈಭವ್ ಸೂರ್ಯವಂಶಿಗೆ 15 ಅಲ್ಲ, 20, 21 ವರ್ಷ': 'ಬೋನ್ ಪರೀಕ್ಷೆ'ಗೆ ಆಗ್ರಹಿಸಿದ ಪಾಕ್ ಮಾಜಿ ಕ್ರಿಕೆಟಿಗ!

'ವೈಭವ್ ಸೂರ್ಯವಂಶಿಗೆ 15 ಅಲ್ಲ, 20, 21 ವರ್ಷ': 'ಬೋನ್ ಪರೀಕ್ಷೆ'ಗೆ ಆಗ್ರಹಿಸಿದ ಪಾಕ್ ಮಾಜಿ ಕ್ರಿಕೆಟಿಗ!
ವೈಭವ್ ಸೂರ್ಯವಂಶಿ - ತನ್ವೀರ್ ಅಹ್ಮದ್
Published On :

ಇಸ್ಲಾಮಾಬಾದ್: ಭಾರತದ ಉದಯೋನ್ಮುಖ ಪ್ರತಿಭೆ, ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಯುಎಇ (UAE) ವಿರುದ್ಧ ಸಿಡಿಲಬ್ಬರದ ದ್ವಿಶತಕ ಸಿಡಿಸಿದ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ವೇಗಿ ತನ್ವೀರ್ ಅಹ್ಮದ್, ಆತನ ವಯಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

'ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026' ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಯುಎಇ (UAE) ವಿರುದ್ಧ ಭಾರತ 'ಎ' ತಂಡದ ವೈಭವ್ ಸೂರ್ಯವಂಶಿ ಕೇವಲ 52 ಎಸೆತಗಳಲ್ಲಿ ಅತ್ಯಂತ ವೇಗದ ದ್ವಿಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.

ವೈಭವ್ ಸಿಡಿಲಬ್ಬರದ ಬ್ಯಾಟಿಂಗ್ ಬಗ್ಗೆ ಪಾಕಿಸ್ತಾನದ ಟಿವಿ ಚಾನೆಲ್ ಒಂದರಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ವೇಗದ ಬೌಲರ್ ತನ್ವೀರ್ ಅಹ್ಮದ್ ಅವರು, ಆತನಿಗೆ 15 ವರ್ಷ ವಯಸ್ಸಲ್ಲ, ಕನಿಷ್ಠ 20 ರಿಂದ 21 ವರ್ಷ ವಯಸ್ಸಾಗಿರಬೇಕು ಎಂದು ಹೇಳಿದ್ದಾರೆ.

ಎಷ್ಟೇ ದೊಡ್ಡ ಪ್ರತಿಭೆಯಾಗಿದ್ದರೂ 15 ವರ್ಷದ ಹುಡುಗ ಈ ರೀತಿಯಾಗಿ 28 ಸಿಕ್ಸರ್‌ಗಳನ್ನು ಬಾರಿಸಲು ಸಾಧ್ಯವೇ ಇಲ್ಲ. 15 ವರ್ಷದ ಬಾಲಕನ ದೇಹದ ಬುನಾದಿ(ಬೇಸ್) ಇಷ್ಟೊಂದು ಗಟ್ಟಿಯಾಗಿರಲು ಸಾಧ್ಯವಿಲ್ಲ ಹಾಗೂ ಆತನ ತೋಳು ಮತ್ತು ಭುಜಗಳಲ್ಲಿ ಇಷ್ಟೊಂದು ಶಕ್ತಿ ಇರಲು ಸಾಧ್ಯವಿಲ್ಲ. ಇದನ್ನು ನಾನು ನಂಬುವುದೇ ಇಲ್ಲ ಎಂದು ತನ್ವೀರ್ ಅಹ್ಮದ್ ಹೇಳಿದ್ದಾರೆ.

ಇದೇ ವೇಳೆ ಕಾರ್ಯಕ್ರಮದ ನಿರೂಪಕರು ವೈಭವ್ ಅವರಿಗೆ ಮಣಿಕಟ್ಟಿನ ಪರೀಕ್ಷೆ (Wrist Test) ನಡೆಸಬೇಕು ಎಂದಾಗ, ತಕ್ಷಣವೇ ಪ್ರತಿಕ್ರಿಯಿಸಿದ ತನ್ವೀರ್, "ಹೌದು, ಖಂಡಿತವಾಗಿಯೂ 'ಬೋನ್ ವಯಸ್ಸು ಪರೀಕ್ಷೆ'ಗೆ (Bone Age Test) ಒಳಪಡಿಸಬೇಕು. ಆಗ ನಿಜಾಂಶ ಹೊರಬರುತ್ತದೆ. ಆದರೆ, ಆತ 15 ವರ್ಷದ ಹುಡುಗ ಎಂದು ನಾನು ಒಪ್ಪುವುದಿಲ್ಲ" ಎಂದು ತನ್ವೀರ್​ ಅಚ್ಚರಿ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.