ಏಷ್ಯಾ ಕಪ್ 2023: ಕೊಹ್ಲಿ-ರಾಹುಲ್ ಭರ್ಜರಿ ಬ್ಯಾಟಿಂಗ್, ಏಷ್ಯಾ ಕಪ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಕನ್ನಡಿಗ ಕೆಎಲ್ ರಾಹುಲ್ ಜೋಡಿ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಏಷ್ಯಾ ಕಪ್ ಇತಿಹಾಸದ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದಾರೆ.
ಕೊಹ್ಲಿ-ಕೆಎಲ್ ರಾಹುಲ್ ಜೊತೆಯಾಟ
ಕೊಹ್ಲಿ-ಕೆಎಲ್ ರಾಹುಲ್ ಜೊತೆಯಾಟ

ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಕನ್ನಡಿಗ ಕೆಎಲ್ ರಾಹುಲ್ ಜೋಡಿ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಏಷ್ಯಾ ಕಪ್ ಇತಿಹಾಸದ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದಾರೆ.

ಭಾರತದ ಇನ್ನಿಂಗ್ಸ್ ಆರಂಭಿಸಿದ್ದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಮೊದಲ ವಿಕೆಟ್‌ಗೆ 16.4 ಓವರ್‌ಗಳಲ್ಲಿ 121 ರನ್‌ಗಳ ಜೊತೆಯಾಟ ನೀಡುವ ಮೂಲಕ ಭದ್ರ ಬುನಾದಿ ಒದಗಿಸಿದರು. ಬಳಿಕ ಇಬ್ಬರೂ ಆಟಗಾರರು ಔಟಾದರು. ಈ ವೇಳೆ ಪಂದ್ಯದ ನಿರ್ಣಾಯಕ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಜೋಡಿ ಅಕ್ಷರಶಃ ಪಾಕಿಸ್ತಾನ ಬೌಲರ್ ಗಳ ಬೆವರಿಳಿಸಿದರು.

ಆರಂಭದಲ್ಲಿ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದ ಉಭಯ ಆಟಗಾರರು ಕ್ರಮೇಣ ಲಯ ಕಂಡುಕೊಂಡು ಸಿಂಗಲ್ಸ್, ಡಬಲ್ಸ್ ಮೂಲಕ ರನ್ ವೇಗ ಹೆಚ್ಚಿಸಿಕೊಂಡರು. ಬೌಂಡರಿ, ಸಿಕ್ಸರ್ ಮೂಲಕ ಲಯ ಕಂಡುಕೊಂಡು ಆಟಗಾರರು ನೋಡ ನೋಡುತ್ತಲೇ ಅರ್ಧಶತಕ ಸಿಡಿಸಿ ಪಾಕಿಸ್ತಾನಿ ಬೌಲರ್ ಗಳಿಗೆ ತಲೆನೋವಾದರು. ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ರಾಹುಲ್-ಕೊಹ್ಲಿ ಜೋಡಿ ಒಬ್ಬರ ಬಳಿಕ ಒಬ್ಬರು ಶತಕ ಸಿಡಿಸಿ ಸಂಭ್ರಮಿಸಿದರು.

ಆ ಮೂಲಕ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಜೋಡಿಯು ಏಷ್ಯಾ ಕಪ್ ಇತಿಹಾಸದಲ್ಲಿ ಅತ್ಯಧಿಕ ಜೊತೆಯಾಟದ ದಾಖಲೆಯನ್ನು ನಿರ್ಮಿಸಿತು. ಈ ಜೋಡಿ ಮೂರನೇ ವಿಕೆಟ್‌ಗೆ 194 ಎಸೆತಗಳಲ್ಲಿ ದಾಖಲೆಯ ಬರೋಬ್ಬರಿ 233 ರನ್‌ಗಳ ಜೊತೆಯಾಟವಾಡಿ ಏಷ್ಯಾ ಕಪ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ನಿರ್ಮಿಸಿತು. 2012ರಲ್ಲಿ ಪಾಕಿಸ್ತಾನದ ಮೊಹಮ್ಮದ್ ಹಫೀಜ್ ಮತ್ತು ನಾಸಿರ್ ಜಮ್ಶೆಡ್ ಅವರ ಹೆಸರಿನಲ್ಲಿದ್ದ ಗರಿಷ್ಟ ರನ್ ಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಜೋಡಿ ಮುರಿದರು.

ಮೀರ್‌ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಸ್ಟೇಡಿಯಂನಲ್ಲಿ ಮೊಹಮ್ಮದ್ ಹಫೀಜ್ ಮತ್ತು ನಾಸಿರ್ ಜಮ್‌ಶೆಡ್ ಅವರು ಭಾರತದ ವಿರುದ್ಧ ಮೊದಲ ವಿಕೆಟ್‌ಗೆ 224 ರನ್‌ಗಳ ಜೊತೆಯಾಟ ನೀಡಿದ್ದರು. ಏಷ್ಯಾ ಕಪ್ ಏಕದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಒಂಬತ್ತನೇ 200 ಪ್ಲಸ್ ಜೊತೆಯಾಟ ಕೂಡ ನಿರ್ಮಾಣವಾಯಿತು. ಭಾರತದ ಪರ ಈ ಹಿಂದೆ ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಜೋಡಿಯ 213 ರನ್‌ಗಳ ಜೊತೆಯಾಟವಾಡಿತ್ತು. ಇದು ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಪರ ದಾಖಲಾಗಿದ್ದ ಗರಿಷ್ಟ ರನ್ ಜೊತೆಯಾಟವಾಗಿತ್ತು. ಆದರೆ ಕೊಹ್ಲಿ ಮತ್ತು ರಾಹುಲ್ ಜೋಡಿ 233ರನ್ ಗಳಿಸಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಗರಿಷ್ಛ ರನ್ ಜೊತೆಯಾಟ ಮಾತ್ರವಲ್ಲದೇ ಏಷ್ಯಾ ಕಪ್‌ನಲ್ಲಿ ಭಾರತದ ಪರವೂ ಅತ್ಯಧಿಕ ಜೊತೆಯಾಟ ದಾಖಲಿಸಿದೆ.

ಇದಲ್ಲದೇ ಕೊಹ್ಲಿ-ರಾಹುಲ್ ಜೋಡಿ ತಮ್ಮ ಜೊತೆಯಾಟದ ಮೂಲಕ ಕ್ರಿಕೆಟ್ ಜಗತ್ತಿನ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದ್ದು, ಹಲವು ದಾಖಲೆಗಳನ್ನು ಹಿಂದಿಕ್ಕಿದೆ.

ಪಾಕಿಸ್ತಾನ ವಿರುದ್ಧ ಭಾರತದ ಗರಿಷ್ಠ ಜೊತೆಯಾಟ
ಇನ್ನು ಇಂದಿನ ಪಂದ್ಯದಲ್ಲಿ ಕೊಹ್ಲಿ-ರಾಹುಲ್ ಗಳಿಸಿದ ಅಜೇಯ 233ರನ್ ಜೊತೆಯಾಟ ಪಾಕಿಸ್ತಾನ ವಿರುದ್ಧ ಭಾರತ ತಂಡಗಳಿಸಿದ ಗರಿಷ್ಠ ರನ್ ಗಳ ಜೊತೆಯಾಟವಾಗಿದೆ. ಈ ಹಿಂದೆ 1996ರಲ್ಲಿ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ನವಜೋತ್ ಸಿಂಗ್ ಸಿಂಧು ಮತ್ತು ಸಚಿನ್ ತೆಂಡೂಲ್ಕರ್ ಜೋಡಿ 2ನೇ ವಿಕೆಟ್ ಜೊತೆಯಾಟದಲ್ಲಿ 231 ರನ್ ಕಲೆಹಾಕಿತ್ತು. ಇದು ಪಾಕಿಸ್ತಾನ ವಿರುದ್ಧ ಭಾರತ ಪರ  ಈ ವರೆಗೂ ದಾಖಲಾಗಿದ್ದ ಗರಿಷ್ಟ ರನ್ ಜೊತೆಯಾಟವಾಗಿತ್ತು. ಅಂತೆಯೇ ಇದು 3ನೇ ವಿಕೆಟ್ ಜೊತೆಯಾಟದಲ್ಲಿ ಭಾರತದ ಪರ ದಾಖಲಾದ ಎರಡನೇ ಗರಿಷ್ಠ ರನ್ ಜೊತೆಯಾಟ ಕೂಡ ಆಗಿದೆ.

Highest partnership for India vs Pakistan in ODIs:
233* - V Kohli & KL Rahul, Colombo (RPS), today* (3rd wkt)
231 - NS Sidhu & SR Tendulkar, Sharjah, 1996 (2nd wkt)
210 - S Dhawan & R Sharma, Dubai (DSc), 2018 (1st wkt)
201 - Rahul Dravid & V Sehwag, Kochi, 2005 (3rd wkt)

- 233* also the India's second highest partnership for 3rd wickets in ODIs.

ಏಷ್ಯಾಕಪ್‌ನಲ್ಲಿ ಅತ್ಯಧಿಕ ಜೊತೆಯಾಟ
ಇನ್ನು ಇಂದಿನ ಕೊಹ್ಲಿ-ರಾಹುಲ್ ಜೊತೆಯಾಟ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ದಾಖಲಾದ ಗರಿಷ್ಠ ರನ್ ಗಳ ಜೊತೆಯಾಟ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಹಿಂದೆ 2012ರಲ್ಲಿ ಭಾರತ ತಂಡದ ವಿರುದ್ಧ ಇದೇ ಪಾಕಿಸ್ತಾನ ತಂಡದ ಮಹಮದ್ ಹಫೀಜ್ ಮತ್ತು ಜಮ್ಶೆಡ್ ಜೋಡಿ 224 ರನ್ ಕಲೆಹಾಕಿತ್ತು. ಇದು ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ದಾಖಲಾಗಿದ್ದ ಗರಿಷ್ಠ ರನ್ ಜೊತೆಯಾಟವಾಗಿತ್ತು. ಈ ದಾಖಲೆ ಇದೀಗ ಪತನವಾಗಿದೆ.

Highest partnership in ODI Asia Cup
233 - V Kohli & KL Rahul vs PAK, today*
224 - M Hafeez & N Jamshed vs IND, 2012
223 - S Malik & Younis Khan vs HK, 2004
214 - Babar & Iftikhar Ahmed vs NEP, 2023

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com