2ನೇ ಏಕದಿನ: ಭಾರತ ತಂಡದ ಭರ್ಜರಿ ಬ್ಯಾಟಿಂಗ್, ಕ್ರಿಕೆಟ್ ಇತಿಹಾಸದ ಕಳಪೆ ದಾಖಲೆ ಬರೆದ ಆಸಿಸ್ 'ದೈತ್ಯ' ಬೌಲರ್

ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಜಗತ್ತಿನ ಶ್ರೇಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ಆಸ್ಟ್ರೇಲಿಯಾ ತಂಡ ಅಕ್ಷರಶಃ ಕಳಪೆ ಆಟ ಪ್ರದರ್ಶನ ಮಾಡುವ ಮೂಲಕ ಕ್ರಿಕೆಟ್ ಇತಿಹಾಸದ ಕಳಪೆ ದಾಖಲೆಗಳನ್ನು ಬರೆದಿದೆ.
ಆಸಿಸ್ ವೇಗಿ ಕೆಮೆರಾನ್ ಗ್ರೀನ್
ಆಸಿಸ್ ವೇಗಿ ಕೆಮೆರಾನ್ ಗ್ರೀನ್

ಇಂದೋರ್: ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಜಗತ್ತಿನ ಶ್ರೇಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ಆಸ್ಟ್ರೇಲಿಯಾ ತಂಡ ಅಕ್ಷರಶಃ ಕಳಪೆ ಆಟ ಪ್ರದರ್ಶನ ಮಾಡುವ ಮೂಲಕ ಕ್ರಿಕೆಟ್ ಇತಿಹಾಸದ ಕಳಪೆ ದಾಖಲೆಗಳನ್ನು ಬರೆದಿದೆ.

ಹೌದು.. ನಿನ್ನೆ ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ 399ರನ್ ಕಲೆಹಾಕಿದ ಭಾರತ ತಂಡ ಆಸ್ಟ್ರೇಲಿಯನ್ ಬೌಲರ್ ಗಳನು ಇನ್ನಿಲ್ಲದಂತೆ ಕಾಡಿತು. ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 399ರನ್ ಕಲೆ ಹಾಕಿತು. ಭಾರತದ ಪರ ಶುಭ್ ಮನ್ ಗಿಲ್ (104 ರನ್), ಶ್ರೇಯಸ್ ಅಯ್ಯರ್ (105 ರನ್) ಮತ್ತು ಸೂರ್ಯ ಕುಮಾರ್ ಯಾದವ್ (72 ರನ್) ನಾಯಕ ಕೆಎಲ್ ರಾಹುಲ್ (52 ರನ್) ಮತ್ತು ಇಶಾನ್ ಕಿಶನ್ (31 ರನ್) ಅಮೋಘ ಬ್ಯಾಟಿಂಗ್ ಮಾಡಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.

ನಿನ್ನೆಯ ಪಂದ್ಯದಲ್ಲಿ ಅಕ್ಷರಶಃ ದಂಡನೆಗೆ ಒಳಗಾಗಿದ್ದು ಮಾತ್ರ ಆಸ್ಚ್ರೇಲಿಯಾ ದೈತ್ಯ ವೇಗಿ ಕೆಮೆರಾನ್ ಗ್ರೀನ್.. ಹೌದು.. ಆಸ್ಟ್ರೇಲಿಯಾದ ಕೆಮೆರಾನ್ ಗ್ರೀನ್ ತಮ್ಮ 10 ಓವರ್ ನಲ್ಲಿ ಒಟ್ಟು 10.30 ಸರಾಸರಿಯಲ್ಲಿ ಬರೊಬ್ಬರಿ 103ರನ್ ನೀಡಿದ್ದು, 2 ವಿಕೆಟ್ ಕಬಳಿಸಿದ್ದರು. ಆ ಮೂಲಕ ಗ್ರೀನ್ ಆಸಿಸ್ ಪರ ದುಬಾರಿ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾದರು. ಮಾತ್ರವಲ್ಲದೇ ತಮ್ಮ ಕಳಪೆ ಬೌಲಿಂಗ್ ನಿಂದಲೇ ಹಲವು ಕಳಪೆ ದಾಖಲೆಗಳನ್ನೂ ಗ್ರೀನ್ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

Most expensive ODI spells vs India
0/106 - Nuwan Pradeep (SL), Mohali, 2017
0/105 - Tim Southee (NZ), Christchurch, 2009
2/103 - Cameron Green (AUS), Indore, 2023
3/100 - Jacob Duffy (NZ), Indore, 2023

ಭಾರತದ ವಿರುದ್ಧದ ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ನೀಡಿಕೆ
ಇನ್ನು ಈ ಪಂದ್ಯದಲ್ಲಿ ಗ್ರೀನ್ 2 ವಿಕೆಟ್ ಕಬಳಿಸಿ 103 ರನ್ ನೀಡಿದ್ದು, ಇದು ಭಾರತದ ಪರ ಬೌಲರ್ ಓರ್ವ ನೀಡಿರುವ 3ನೇ ಅತೀ ಹೆಚ್ಚು ರನ್ ನೀಡಿಕೆಯಾಗಿದೆ. ಈ ಹಿಂದೆ 2017ರಲ್ಲಿ ಮೊಹಾಲಿಯಲ್ಲಿ ಶ್ರೀಲಂಕಾದ ನುವಾನ್ ಪ್ರದೀಪ್ 106ರನ್ ನೀಡಿದ್ದರು. ಇದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದಕ್ಕೂ ಮೊದಲು 2009ರಲ್ಲಿ ನ್ಯೂಜಿಲೆಂಡ್ ನ ಟಿಮ್ ಸೌಥಿ ಕ್ರೈಸ್ಟ್ ಚರ್ಚ್ ಪಂದ್ಯದಲ್ಲಿ 105ರನ್ ನೀಡಿದ್ದರು. ಇತ್ತೀಚೆಗೆ ಇದೇ ವರ್ಷ ಇದೇ ಇಂದೋರ್ ಮೈದಾನದಲ್ಲಿ ನ್ಯೂಜಿಲೆಂಡ್ ನ ಜೇಕಬ್ ಡಫಿ 3 ವಿಕೆಟ್ ಪಡೆದು 100ರನ್ ನೀಡಿದ್ದರು.

Most expensive ODI spells for Australia
0/113 - Mick Lewis vs SA, Johannesburg, 2006
0/113 - Adam Zampa vs SA, Centurion, 2023
2/103 - Cameron Green vs IND, Indore, 2023
0/100 - Andrew Tye vs ENG, Nottingham, 2018
3/92 - Jhye Richardson vs ENG, Nottingham, 2018

3ನೇ ಅತೀ ಹೆಚ್ಚು ರನ್ ನೀಡಿದ ಆಸ್ಟ್ರೇಲಿಯಾದ ಬೌಲರ್
ಇನ್ನು ಪಂದ್ಯವೊಂದರಲ್ಲಿ ಅತೀ ಹೆಚ್ಚು ರನ್ ನೀಡಿದ ಆಸ್ಚ್ರೇಲಿಯಾ ಬೌಲರ್ ಗಳಲ್ಲಿ ಪಟ್ಟಿಗೆ ಗ್ರೀನ್ ಸೇರ್ಪಡೆಯಾಗಿದ್ದು, ಇದೀಗ ಗ್ರೀನ್ ಅತೀ ಹೆಚ್ಚು ರನ್ ನೀಡಿದ ಆಸ್ಚ್ರೇಲಿಯಾದ 3ನೇ ಬೌಲರ್ ಎನಿಸಿಕೊಂಡಿದ್ದಾರೆ. 2006ರಲ್ಲಿ ಜೋಹನ್ಸ್ ಬರ್ಗ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಿಕಿ ಲೂಯಿಸ್ 113ರನ್ ನೀಡಿದ್ದರು. ಇವರು ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಬಿಟ್ಟುಕೊಟ್ಟ ಆಸ್ಚ್ರೇಲಿಯಾದ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಆಡಂ ಜಂಪಾ ಇದ್ದು, ಜಂಪಾ 2023ರಲ್ಲಿ ಸೆಂಚುರಿಯನ್ ಗ್ರೌಂಡ್ ನಲ್ಲಿ 113ರನ್ ನೀಡಿದ್ದರು. 2018ರಲ್ಲಿ ನಾಟಿಂಗ್ ಹ್ಯಾಮ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಂಡ್ರ್ಯೂ ಟೈ 100ರನ್ ನೀಡಿದ್ದರು. 

Most expensive overs for Australia in ODIs
26 - Simon Davis vs England, Perth, 1987
26 - Craig McDermott vs South Africa, Centurion, 1994
26 - Xavier Doherty vs India, Bengaluru, 2013
26 - Adam Zampa vs South Africa, Centurion, 2023
26 - Cameron Green vs India, Indore, 2023

ಒಂದೇ ಓವರ್ ನಲ್ಲಿ ಅತೀ ಹೆಚ್ಚು ರನ್, ಗ್ರೀನ್ 4ನೇ ಸ್ಥಾನಕ್ಕೇರಿದ ಗ್ರೀನ್
ಇನ್ನು ಏಕದಿನ ಕ್ರಿಕೆಟ್ ಪಂದ್ಯವೊಂದರ ಒಂದೇ ಓವರ್ ನಲ್ಲಿ ಅತೀ ಹೆಚ್ಚು ರನ್ ನೀಡಿದ ಆಟಗಾರರ ಪಟ್ಟಿಗೂ ಗ್ರೀನ್ ಸೇರ್ಪಡೆಯಾಗಿದ್ದು, ಗ್ರೀನ್ ಇನ್ನಿಂಗ್ಸ್ ನ 44ನೇ ಓವರ್ ನಲ್ಲಿ ಒಟ್ಟು 26ರನ್ ಬಿಟ್ಟಕೊಟ್ಟಿದ್ದರು. ಆ ಓವರ್ ನಲ್ಲಿ ಭಾರತದ ಸೂರ್ಯ ಕುಮಾರ್ ಯಾದವ್ 4ಸಿಕ್ಸರ್ ಗಳನ್ನು ಸಿಡಿಸಿದ್ದರು. ಆ ಮೂಲಕ ಗ್ರೀನ್ ಏಕದಿನ ಕ್ರಿಕೆಟ್ ನಲ್ಲಿ ದುಬಾರಿ ಓವರ್ ಎಸೆದ 5ನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮೊದಲು 1987ರಲ್ಲಿ ಪರ್ತ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಸೈಮನ್ ಡೇವಿಸ್ ಒಂದೇ ಓವರ್ ನಲ್ಲಿ 26ರನ್ ನೀಡಿದ್ದರು.

ಅಂತೆಯೇ 1994ರಲ್ಲಿ ಸೆಂಚುರಿಯನ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕ್ರೇಗ್ ಮೆಕ್ ಡರ್ಮಾಟ್ 26ರನ್ ನೀಡಿದ್ದರು. 2013ರಲ್ಲಿ ಬೆಂಗಳೂರಿನಲ್ಲಿ ಭಾರತದ ವಿರುದ್ಧ ಕ್ಸೇವಿಯರ್ ಡೊಹರ್ಟಿ ಕೂಡ 26ರನ್ ನೀಡಿದ್ದರು. ಇದೇ ವರ್ಷ ಅಂದರೆ 2023ರಲ್ಲಿ ಸೆಂಚುರಿಯನ್ ಗ್ರೌಂಡ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಂ ಜಂಪಾ ಕೂಡ 26ರನ್ ನೀಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com