2-0 ಅಂತರದಿಂದ ಆಸ್ಟ್ರೇಲಿಯಾ ವಿರುದ್ಧದ ಸರಣಿ ಭಾರತದ ವಶ: 2 ನೇ ಏಕದಿನ ಪಂದ್ಯದಲ್ಲಿ 99 ರನ್ ಗಳ ಜಯ
ಆಸ್ಟ್ರೇಲಿಯಾ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ತಂಡವನ್ನು 2-0 ಅಂತರದಿಂದ ಮಣಿಸುವ ಮೂಲಕ 3 ಪಂದ್ಯಗಳ ಸರಣಿಯನ್ನು ವಶಪಡಿಸಿಕೊಂಡಿದೆ.
Published: 24th September 2023 11:02 PM | Last Updated: 24th September 2023 11:04 PM | A+A A-

ಭಾರತ- ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ
ಇಂದೋರ್: ಆಸ್ಟ್ರೇಲಿಯಾ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ತಂಡವನ್ನು 2-0 ಅಂತರದಿಂದ ಮಣಿಸುವ ಮೂಲಕ 3 ಪಂದ್ಯಗಳ ಸರಣಿಯನ್ನು ವಶಪಡಿಸಿಕೊಂಡಿದೆ.
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನದ ಪರಿಣಾಮ, ಭಾರತ 5 ವಿಕೆಟ್‌ಗೆ 399 ರನ್ ಗಳಿಸಿ, ಆಸ್ಟ್ರೇಲಿಯಾ ತಂಡಕ್ಕೆ 400 ರನ್ ಗಳ ಗುರಿ ನೀಡಿತ್ತು.
ಇದನ್ನೂ ಓದಿ: 2ನೇ ಏಕದಿನ ಪಂದ್ಯ: ಗಿಲ್, ಅಯ್ಯರ್ ಅದ್ಭುತ ಶತಕ; ಆಸ್ಟ್ರೇಲಿಯಾಗೆ 400 ರನ್ ಗುರಿ ನೀಡಿದ ಭಾರತ
ಮಳೆಯ ಪರಿಣಾಮ ಟಾರ್ಗೆಟ್ ನ್ನು 33 ಓವರ್ ಗಳಿಗೆ 317 ರನ್ ಗಳನ್ನು ನಿಗದಿಪಡಿಸಲಾಯಿಗಿತ್ತು. ಆದರೆ ಭಾರತದ ಮಾರಕ ಬೌಲಿಂಗ್ ಗೆ ತತ್ತರಿಸಿದ ಆಸ್ಟ್ರೇಲಿಯಾ 28.2 ಓವರ್ ಗಳಲ್ಲಿ 217 ರನ್ ಗಳಿಗೆ ಸರ್ವಪತನ ಕಂಡು ಭಾರತದ ಎದುರು ಸೋಲೊಪ್ಪಿಕೊಂಡಿತು.