2ನೇ ಏಕದಿನ ಪಂದ್ಯ: ಗಿಲ್, ಅಯ್ಯರ್ ಅದ್ಭುತ ಶತಕ; ಆಸ್ಟ್ರೇಲಿಯಾಗೆ 400 ರನ್ ಗುರಿ ನೀಡಿದ ಭಾರತ

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಶತಕ ಬಾರಿಸಿದ್ದು ಭಾರತ 5 ವಿಕೆಟ್‌ಗೆ 399 ರನ್ ಗಳಿಸಿದೆ. 
ಭಾರತ ತಂಡ
ಭಾರತ ತಂಡ
Updated on

ಭೋಪಾಲ್: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಶತಕ ಬಾರಿಸಿದ್ದು ಭಾರತ 5 ವಿಕೆಟ್‌ಗೆ 399 ರನ್ ಗಳಿಸಿದೆ. 

ಭಾರತ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ 390ಕ್ಕೂ ಹೆಚ್ಚು ರನ್ ಗಳಿಸಿದೆ. ಇದಕ್ಕೂ ಮುನ್ನ 2013ರ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 6 ವಿಕೆಟ್‌ಗೆ 383 ರನ್‌ಗಳ ಗರಿಷ್ಠ ರನ್ ಪೇರಿಸಿತ್ತು. 3 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆ ಸಾಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ ಸರಣಿಯನ್ನೂ ವಶಪಡಿಸಿಕೊಳ್ಳಲಿದೆ.

ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮ್ಮಿನ್ಸ್ ಬದಲಿಗೆ ಸ್ಟೀವ್ ಸ್ಮಿತ್ ಕಾಂಗರೂ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಸ್ಮಿತ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಇದಕ್ಕುತ್ತರವಾಗಿ ಟೀಂ ಇಂಡಿಯಾ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ 12 ಎಸೆತಗಳಲ್ಲಿ 8 ರನ್ ಗಳಿಸಿ ಜೋಸ್ ಹ್ಯಾಜಲ್‌ವುಡ್‌ಗೆ ಬಲಿಯಾದರು. ಆದರೆ ಇದಾದ ಬಳಿಕ ಶುಭ್‌ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅಮೋಘ ಪ್ರದರ್ಶನ ನೀಡಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಎರಡನೇ ವಿಕೆಟ್‌ಗೆ 164 ಎಸೆತಗಳಲ್ಲಿ 200 ರನ್‌ಗಳ ಜೊತೆಯಾಟ ನೀಡಿದರು.

ಶ್ರೇಯಸ್ ಅಯ್ಯರ್ 90 ಎಸೆತಗಳಲ್ಲಿ 3 ಸಿಕ್ಸ್ ಮತ್ತು 11 ಬೌಂಡರಿಗಳೊಂದಿಗೆ 105 ಬಾರಿಸಿ ಔಟಾದರೆ, ಶುಭ್ಮನ್ ಗಿಲ್ 97 ಎಸೆತದಲ್ಲಿ 4 ಸಿಕ್ಸ್ ಮತ್ತು 6 ಬೌಂಡರಿಯೊಂದಿಗೆ 104 ರನ್ ಗಳಿಸಿ ಔಟಾದರು.

ನಂತರ ಬಂದ ನಾಯಕ ಕೆಎಲ್ ರಾಹುಲ್ ಸತತ ಎರಡನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿದರು. ಸೂರ್ಯಕುಮಾರ್ ಯಾದವ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿದರು. ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ 72 ರನ್ ಗಳಿಸಿದರು. 6 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಬಾರಿಸಿದರೆ ಕೆಎಲ್ ರಾಹುಲ್ 38 ಎಸೆತಗಳಲ್ಲಿ 52 ರನ್ ಗಳಿಸಿ ಔಟಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com