2ನೇ ಏಕದಿನ ಪಂದ್ಯ: ಅನಿಲ್ ಕುಂಬ್ಳೆ ದಾಖಲೆ ಮುರಿದ ಆರ್ ಅಶ್ವಿನ್, ಇಷ್ಟಕ್ಕೂ ಏನದು ದಾಖಲೆ?

ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ಆರ್ ಅಶ್ವಿನ್ ಅಪರೂಪದ ದಾಖಲೆ ನಿರ್ಮಿಸಿದ್ದು, ಸ್ಪಿನ್ ದಂತಕಥೆ ಅನಿಲ್ ಕುಂಭ್ಳೆ ದಾಖಲೆ ಮುರಿದಿದ್ದಾರೆ.
ಆರ್ ಅಶ್ವಿನ್ ಬೌಲಿಂಗ್
ಆರ್ ಅಶ್ವಿನ್ ಬೌಲಿಂಗ್

ಇಂದೋರ್: ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ಆರ್ ಅಶ್ವಿನ್ ಅಪರೂಪದ ದಾಖಲೆ ನಿರ್ಮಿಸಿದ್ದು, ಸ್ಪಿನ್ ದಂತಕಥೆ ಅನಿಲ್ ಕುಂಭ್ಳೆ ದಾಖಲೆ ಮುರಿದಿದ್ದಾರೆ.

ಇಂದೋರ್ ಹೋಳ್ಕರ್ ಕ್ರೀಂಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಶ್ವಿನ್ ಒಟ್ಟು 7 ಓವರ್ ಎಸೆದು 41 ರನ್ ನೀಡಿ 3 ವಿಕೆಟ್ ಪಡೆದರು. ಆ ಮೂಲಕ ಅಶ್ವಿನ್ ಆಸ್ಟ್ರೇಲಿಯಾ ತಂಡದ ವಿರುದ್ಧ ಅತೀ ಹೆಚ್ಚು ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ಈ ದಾಖಲೆ ಭಾರತ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಹೆಸರಿನಲ್ಲಿತ್ತು.

ಕುಂಬ್ಳೆ ಇದೇ ಆಸ್ಟ್ರೇಲಿಯಾ ವಿರುದ್ದ ಒಟ್ಟು 142 ವಿಕೆಟ್ ಕಬಳಿಸಿ ತಂಡವೊಂದರ ವಿರುದ್ಧ ಅತೀ ಹೆಚ್ಚು ವಿಕೆಟ್ ಕಬಳಿಸಿದ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದರು. ಆದರೆ ಅಶ್ವಿನ್ ಅಸ್ಟ್ರೇಲಿಯಾ ವಿರುದ್ಧ 3 ವಿಕೆಟ್ ಕಬಳಿಸಿ ಆ ತಂಡದ ವಿರುದ್ಧ ತಮ್ಮ ವಿಕೆಟ್ ಗಳ ಸಂಖ್ಯೆಯನ್ನು 144ಕ್ಕೆ ಏರಿಕೆ ಮಾಡಿಕೊಂಡರು.

ಆ ಮೂಲಕ ತಂಡವೊಂದರ ವಿರುದ್ಧ ಅತೀ ಹೆಚ್ಚು ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಮತ್ತು ಆಸ್ಟ್ರೇಲಿಯಾ ತಂಡದ ವಿರುದ್ದ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಉಳಿದಂತೆ ಭಾರತದ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಅವರು ಪಾಕಿಸ್ತಾನ ತಂಡದ ವಿರುದ್ದ 141 ವಿಕೆಟ್ ಪಡೆದಿದ್ದು, ಇದೇ ಪಾಕಿಸ್ತಾನ ವಿರುದ್ಧ ಅನಿಲ್ ಕುಂಬ್ಳೆ 135 ವಿಕೆಟ್ ಕಬಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದ ಕಪಿಲ್ ದೇವ್ 132 ವಿಕೆಟ್ ಕಬಳಿಸಿದ್ದಾರೆ.

Most international wickets for India against a team
144 - Ravichandran Ashwin vs Australia
142 - Anil Kumble vs Australia
141 - Kapil Dev vs Pakistan
135 - Anil Kumble vs Pakistan
132 - Kapil Dev vs West Indies

India’s ODI series wins against Australia (matches)
3-2 - Home, 1986 (6)
1-0 - Home, 2010 (3)
3-2 - Home, 2013 (7)
4-1 - Home, 2017 (5)
2-1 - Away, 2019 (3)
2-1 - Home, 2020 (3)
2-0 - Home, 2023 (with a match to go)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com