2ನೇ ಏಕದಿನ ಪಂದ್ಯ: ಸೋಲಿನ ನಡುವೆಯೂ ದಾಖಲೆ ಮೂಲಕ ಗಮನ ಸೆಳೆದ ಆಸಿಸ್ ಬಾಲಂಗೋಚಿ ಬ್ಯಾಟರ್ ಗಳು

ಭಾರತದ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ 99ರನ್ ಗಳ ಹೀನಾಯ ಸೋಲು ಕಂಡ ಆಸ್ಚ್ರೇಲಿಯಾ ತಂಡ ಸೋಲಿನ ನಡುವೆಯೂ ಅಂತಿಮ ಹಂತದವರೆಗೂ ಹೋರಾಡಿ ದಾಖಲೆಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಸೀನ್ ಅಬಾಟ್ ಬ್ಯಾಟಿಂಗ್
ಸೀನ್ ಅಬಾಟ್ ಬ್ಯಾಟಿಂಗ್

ಇಂದೋರ್: ಭಾರತದ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ 99ರನ್ ಗಳ ಹೀನಾಯ ಸೋಲು ಕಂಡ ಆಸ್ಚ್ರೇಲಿಯಾ ತಂಡ ಸೋಲಿನ ನಡುವೆಯೂ ಅಂತಿಮ ಹಂತದವರೆಗೂ ಹೋರಾಡಿ ದಾಖಲೆಗಳ ಪಟ್ಟಿಗೆ ಸೇರ್ಪಡೆಯಾಗಿದೆ.

ಹೌದು.. ನಿನ್ನೆ ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾಗೆ ಗೆಲ್ಲಲು 400ರನ್ ಗಳ ಗುರಿ ನೀಡಿತ್ತು. ಆದರೆ ಆಸ್ಟ್ರೇಲಿಯಾ ಬ್ಯಾಟಿಂಗ್ ವೇಳೆ ಮಳೆ ಬಂದ ಕಾರಣ ಡಕ್ವರ್ತ್ ಲೂಯಿಸ್ ನಿಯಮದನ್ವಯ ಆಸ್ಚ್ರೇಲಿಯಾಗೆ ಗೆಲಲ್ಲು 33 ಓವರ್ ನಲ್ಲಿ 317ರನ್ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನು ಹತ್ತಿದ ಆಸ್ಚ್ರೇಲಿಯಾ ತಂಡ 28.2 ಓವರ್ ನಲ್ಲಿ 217ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಭಾರತದ ಎದುರು 99ರನ್ ಗಳ ಅಂತರದಲ್ಲಿ ಶರಣಾಯಿತು.

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಬಾಲಂಗೋಚಿ ಆಟಗಾರರಾದ ಸೀನ್ ಅಬಾಟ್ ಮತ್ತು ಜೋಷ್ ಹೇಜಲ್ ವುಡ್ ಉತ್ತಮ ಬ್ಯಾಟಿಂಗ್ ನಿರ್ವಹಿಸಿದರು. 36 ಎಸೆತಗಳನ್ನು ಎದುರಿಸಿದ್ದ ಸೀನ್ ಅಬಾಟ್ 5ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 54 ರನ್ ಗಳಿಸಿದರು. ಅವರಿಗೆ 9ನೇ ವಿಕೆಟ್ ನಲ್ಲಿ ಜೊತೆಯಾಗಿ ಉತ್ತಮ ಸಾಥ್ ನೀಡಿದ ಜೋಷ್ ಹೇಜಲ್ವುಡ್ ಕೇವಲ 16 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ನೆರವಿನಿಂದ 23ರನ್ ಕಲೆಹಾಕಿದರು. ಈ ಜೋಡಿ 9ನೇ ವಿಕೆಟ್ ಗೆ 77ರನ್ ಕಲೆಹಾಕಿತು. ಆ ಮೂಲಕ ಈ ಜೋಡಿ ಆಸ್ಚ್ರೇಲಿಯಾ ಪರ 9ನೇ ವಿಕೆಟ್ ಜೊತೆಯಾಟದಲ್ಲಿ 4ನೇ ಗರಿಷ್ಠ ರನ್ ಕಲೆಹಾಕಿದ ಸಾಧನೆ ಮಾಡಿತು.

ಈ ಪಟ್ಟಿಯಲ್ಲಿ 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಜೇಮ್ಸ್ ಫಾಲ್ಕನರ್ ಮತ್ತು ಕ್ಲಿಂಚ್ ಮೆಕೇ ಜೋಡಿ 9ನೇ ವಿಕೆಟ್ ಜೊತೆಯಾಟದಲ್ಲಿ 115ರನ್ ಕಲೆ ಹಾಕಿತ್ತು. ಇದು ಆಸ್ಟ್ರೇಲಿಯಾ ಪರ 9ನೇ ವಿಕೆಟ್ ನಲ್ಲಿ ದಾಖಲಾದ ಗರಿಷ್ಟರನ್ ಗಳ ಜೊತೆಯಾಟವಾಗಿದೆ. 

Highest 9th wicket partnerships for Australia in ODIs
115 - James Faulkner & Clint McCay vs IND, Bengaluru, 2013
88 - Shaun Marsh & Doug Bollinger vs ENG, Hobart, 2011
77 - Michael Bevan & Shane Warne vs WI, Port of Spain, 1999
77 - Sean Abbott & Josh Hazlewood vs IND, Indore, 2023

8ನೇ ಕ್ರಮಾಂಕದಲ್ಲಿ ಅತೀ ಸಿಕ್ಸರ್ ಸಿಡಿಸಿದ ಆಸಿಸ್ ಆಟಗಾರ
ಇನ್ನು ಇದೇ ಇನ್ನಿಂಗ್ಸ್ ನಲ್ಲಿ ಆಸ್ಚ್ರೇಲಿಯಾದ ಸೀನ್ ಅಬಾಟ್  5ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 54 ರನ್ ಗಳಿಸಿದರು. ಆ ಮೂಲಕ 8ನೇ ಕ್ರಮಾಂಕದಲ್ಲಿ ಅತೀ ಹೆಚ್ಚು ಸಿಕ್ಸರ್ ಗಳಿಸಿದ ಆಸ್ಟ್ರೇಲಿಯಾದ 5ನೇ ಆಟಗಾರ ಎಂಬ ಕೀರ್ತಿಗೆ ಸೀನ್ ಅಬಾಟ್ ಪಾತ್ರರಾಗಿದ್ದಾರೆ. ಇಂದೋರ್ ಮೈದಾನದಲ್ಲಿ ಸೀನ್ ಅಬಾಟ್ ಒಟ್ಟು 5 ಸಿಕ್ಸರ್ ಸಿಡಿಸಿದ್ದರು. 2013ರಲ್ಲಿ ಮೊಹಾಲಿಯಲ್ಲಿ ಇದೇ ಭಾರತ ತಂಡದ ವಿರುದ್ದ ಆಸ್ಟ್ರೇಲಿಯಾದ ಜೇಮ್ಸ್ ಫಾಲ್ಕನರ್ 6 ಸಿಕ್ಸರ್ ಸಿಡಿಸಿದ್ದರು. 2013 ರಲ್ಲಿ ಬೆಂಗಳೂರಿನಲ್ಲಿ ಭಾರತದ ವಿರುದ್ದ ಇದೇ 8ನೇ ಕ್ರಮಾಂಕದಲ್ಲಿ ಆಸಿಸ್ ನ ಶೇನ್ ವಾಟ್ಸನ್ ಕೂಡ 6 ಸಿಕ್ಸರ್ ಸಿಡಿಸಿದ್ದರು.

Most sixes in an innings from No.8 or below for (Australia)
6 - James Faulkner vs India, Mohali, 2013
6 - Shane Watson vs India, Bengaluru, 2013
5 - Brett Lee vs WI, Gros Islet, 2012
5 - James Faulkner vs ENG, Brisbane, 2014
5 - Sean Abbott vs IND, Indore, 2023

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com