ಐಪಿಎಲ್ 2023: ಆರ್ ಸಿಬಿಗೆ ಗೆಲ್ಲಲು 201 ರನ್ ಗಳ ಬೃಹತ್ ಗುರಿ ನೀಡಿದ ಕೋಲ್ಕತಾ ನೈಟ್ ರೈಡರ್ಸ್!

ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು ಕೋಲ್ಕತಾ ನೈಟ್ ರೈಡರ್ಸ್ ತಂಡ 201 ರನ್ ಗಳ ಬೃಹತ್ ಗುರಿ ನೀಡಿದೆ.
ಆರ್ ಸಿಬಿ vs ಕೆಕೆ ಆರ್
ಆರ್ ಸಿಬಿ vs ಕೆಕೆ ಆರ್

ಬೆಂಗಳೂರು: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು ಕೋಲ್ಕತಾ ನೈಟ್ ರೈಡರ್ಸ್ ತಂಡ 201 ರನ್ ಗಳ ಬೃಹತ್ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡ ನಿಗಧಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200ರನ್ ಗಳಿಸಿತು.

ಕೋಲ್ಕತಾ ಪರ ಜೇಸನ್ ರಾಯ್ (56 ರನ್), ನಿತೀಶ್ ರಾಣಾ (48 ರನ್) ವೆಂಕಟೇಶ್ ಅಯ್ಯರ್ (31 ರನ್) ಮತ್ತು ಇನ್ನಿಂಗ್ಸ್ ನ ಅಂತಿಮ ಹಂತದಲ್ಲಿ ರಿಂಕು ಸಿಂಗ್ ಭರ್ಜರಿ ಬ್ಯಾಟಿಂಗ್  ಮಾಡಿ ಕೋಲ್ಕತಾ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾದರು.

ಕೇವಲ 10 ಎಸೆತಗಳನ್ನು ಎದುರಿಸಿದ ರಿಂಕು ಸಿಂಗ್ 1 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 18 ರನ್ ಸಿಡಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ಡೇವಿಡ್ ವೈಸ್ 3 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 12 ರನ್ ಸಿಡಿಸಿ ಕೋಲ್ಕತಾದ ರನ್ ಗಳಿಕೆಯನ್ನು 200ಕ್ಕೆ ಏರಿಕೆ ಮಾಡಿದರು. 

ಆ ಮೂಲಕ ಕೋಲ್ಕತಾ ತಂಡ ಬೆಂಗಳೂರು ತಂಡಕ್ಕೆ ಗೆಲ್ಲಲು 201 ರನ್ ಗಳ ಬೃಹತ್ ಗುರಿ ನೀಡಿದೆ. ಬೆಂಗಳೂರು ಪರ ಹಸರಂಗ ಮತ್ತು ವಿಜಯ್ ಕುಮಾರ್ ವೈಶಾಕ್ ತಲಾ 2 ವಿಕೆಟ್ ಪಡೆದರೆ, ಸಿರಾಜ್ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com