
ಟೀಂ ಇಂಡಿಯಾ ವರ್ಸಸ್ ನ್ಯೂಜಿಲೆಂಡ್
ಅಹ್ಮದಾಬಾದ್: ಭಾರತದ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ 168ರನ್ ಗಳ ಹೀನಾಯ ಸೋಲು ಕಂಡ ನ್ಯೂಜಿಲೆಂಡ್ ತಂಡ ಇದೇ ಪಂದ್ಯದಲ್ಲಿ ಬೇಡವಾದ ಹೀನಾಯ ದಾಖಲೆ ಬರೆದಿದೆ.
ಹೌದು.. ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 168ರನ್ ಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ನಿಗಧಿತ 50 ಓವರ್ ಗಳಲ್ಲಿ ಶುಭ್ ಮನ್ ಗಿಲ್ ರ ಶತಕ (ಅಜೇಯ 126ರನ್)ದ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 234 ರನ್ ಪೇರಿಸಿತ್ತು. ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡ ಕೇವಲ 12.1 ಓವರ್ ನಲ್ಲಿ 66 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ನ್ಯೂಜಿಲೆಂಡ್ 168ರನ್ ಗಳ ಅಂತರದ ಹೀನಾಯ ಸೋಲು ಕಂಡಿತು.
ಇದನ್ನೂ ಓದಿ: ಕಿವೀಸ್ ವಿರುದ್ಧ ಭಾರತಕ್ಕೆ 168ರನ್ ಗಳ ಗೆಲುವು: ಟಿ20 ಇತಿಹಾಸದ ಅತಿದೊಡ್ಡ ಜಯ
ಈ ಸೋಲಿನೊಂದಿಗೆ ಕಿವೀಸ್ ಪಡೆ ಹೀನಾಯ ದಾಖಲೆ ಬರೆದಿದ್ದು, ಇಂದು ಗಳಿಸಿದ ಮೊತ್ತ ನ್ಯೂಜಿಲೆಂಡ್ ತಂಡದ ಮೂರನೇ ಕನಿಷ್ಠ ತಂಡದ ಮೊತ್ತವಾಗಿದ್ದು, ಈ ಹಿಂದೆ 2014ರಲ್ಲಿ ಶ್ರೀಲಂಕಾ ವಿರುದ್ಧ 60ರನ್ ಗೆ ಆಲೌಟ್ ಆಗಿತ್ತು. ಇದು ಕಿವೀಸ್ ಪಡೆಯ ಟಿ20 ಕನಿಷ್ಟ ಮೊತ್ತವಾಗಿದೆ. 2021ರಲ್ಲೂ ಇಂತಹುದೇ ಕಳಪೆ ದಾಖಲೆ ಬರೆದಿದ್ದ ನ್ಯೂಜಿಲೆಂಡ್ ತಂಡ ಮೀರ್ಪುರ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಮತ್ತೆ 60ರನ್ ಗಳಿಗೆ ಆಲೌಟ್ ಅಗಿತ್ತು.
ಇದೀಗ 66 ರನ್ ಗಳಿಗೆ ಆಲೌಟ್ ಆಗಿ ಮತ್ತೊಂದು ಕಳಪೆ ದಾಖಲೆ ಬರೆದಿದೆ.
ಇದನ್ನೂ ಓದಿ: ತವರಿನಲ್ಲಿ 40 ಟಿ20ಐ ಸರಣಿ ಜಯ: ಈ ಸಾಧನೆ ಮಾಡಿದ ಜಗತ್ತಿನ ಮೊದಲ ತಂಡ ಭಾರತ!
ಟೀಂ ಇಂಡಿಯಾ ವಿರುದ್ಧ ಕಳಪೆ ಮೊತ್ತ
ಅಂತೆಯೇ ನಿನ್ನೆಯ ಪಂದ್ಯದ ಮೂಲಕ ಟೀಂ ಇಂಡಿಯಾ ವಿರುದ್ಧ ದಾಖಲಾದ ಅತ್ಯಂತ ಕಳಪೆ ಮೊತ್ತವಾಗಿದ್ದು, ಇದಕ್ಕೂ ಮೊದಲು 2018ರಲ್ಲಿ ಡಬ್ಲಿನ್ ನಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್ 70ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೂ ಮೊದಲು 2012ರಲ್ಲಿ ಕೊಲಂಬೋದಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ 80ರನ್ ಗಳಿಗೆ ಆಲೌಟ್ ಮಾಡಿತ್ತು.
Lowest T20I totals for New Zealand
60 vs SL Chattogram 2014
60 vs Ban Mirpur 2021
66 vs Ind Ahmedabad 2023 *
Lowest T20I totals against India
66 by NZ Ahmedabad 2023 *
70 by Ire Dublin 2018
80 by Eng Colombo RPS 2012