ಕಿವೀಸ್ ವಿರುದ್ಧ ಭಾರತಕ್ಕೆ 168 ರನ್ ಗೆಲುವು: ಟಿ20 ಇತಿಹಾಸದ ಅತಿದೊಡ್ಡ ಜಯ
ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 168 ರನ್ ಅಂತರದಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ಟೀಂ ಇಂಡಿಯಾ ಜಾಗತಿಕ ದಾಖಲೆ ನಿರ್ಮಿಸಿದೆ.
Published: 02nd February 2023 01:06 PM | Last Updated: 02nd February 2023 01:54 PM | A+A A-

ಟೀಂ ಇಂಡಿಯಾ ಭರ್ಜರಿ ಜಯ
ಅಹ್ಮದಾಬಾದ್: ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 168 ರನ್ ಅಂತರದಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ಟೀಂ ಇಂಡಿಯಾ ಜಾಗತಿಕ ದಾಖಲೆ ನಿರ್ಮಿಸಿದೆ.
ಹೌದು.. ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 168ರನ್ ಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ನಿಗಧಿತ 50 ಓವರ್ ಗಳಲ್ಲಿ ಶುಭ್ ಮನ್ ಗಿಲ್ ರ ಶತಕ (ಅಜೇಯ 126ರನ್)ದ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 234 ರನ್ ಪೇರಿಸಿತ್ತು. ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡ ಕೇವಲ 12.1 ಓವರ್ ನಲ್ಲಿ 66 ರನ್ ಗಳಿಗೆ ಆಲೌಟ್ ಆಯಿತು.
ಇದನ್ನೂ ಓದಿ: ತವರಿನಲ್ಲಿ 40 ಟಿ20ಐ ಸರಣಿ ಜಯ: ಈ ಸಾಧನೆ ಮಾಡಿದ ಜಗತ್ತಿನ ಮೊದಲ ತಂಡ ಭಾರತ!
ಆ ಮೂಲಕ 168ರನ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಟೀಂ ಇಂಡಿಯಾ ಸಾಧಿಸಿದ ಈ ಜಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಅತೀ ದೊಡ್ಡ ಅಂತರದ ಜಯವಾಗಿದೆ.
ಇದಕ್ಕೂ ಮೊದಲು 2018ರಲ್ಲಿ ಡಬ್ಲಿನ್ ನಲ್ಲಿ ಇದೇ ಭಾರತ ತಂಡ ಐರ್ಲೆಂಡ್ ವಿರುದ್ಧ 143ರನ್ ಅಂತರದ ಜಯ ದಾಖಲಿಸಿತ್ತು. ಇದು ಈ ವರೆಗಿನ ಟಿ20 ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಅತೀ ದೊಡ್ಡ ರನ್ ಅಂತರದ ಗೆಲುವಾಗಿತ್ತು.
ಇದನ್ನೂ ಓದಿ: ಅತ್ಯಧಿಕ ವೈಯಕ್ತಿಕ ಸ್ಕೋರ್'; ಕೊಹ್ಲಿಯ ಮತ್ತೊಂದು ದಾಖಲೆ ಪತನ ಮಾಡಿದ ಶುಭ್ ಮನ್ ಗಿಲ್
ಅದೇ ವರ್ಷ ಕರಾಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ ಕೂಡ 143ರನ್ ಅಂತರದ ಗೆಲುವು ಸಾಧಿಸಿತ್ತು. ಬಳಿಕ 2019ರಲ್ಲಿ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧ 137ರನ್ ಗಳ ಅಂತರದ ಗೆಲುವು ಸಾಧಿಸಿತ್ತು.
Biggest margin of win in a T20I between two Full Member teams
168 runs Ind vs NZ Ahmedabad 2023 *
143 runs Ind vs Ire Dublin 2018
143 runs Pak vs WI Karachi 2018
137 runs Eng vs WI Basseterre 2019