ಅತ್ಯಧಿಕ ವೈಯಕ್ತಿಕ ಸ್ಕೋರ್: ಕೊಹ್ಲಿಯ ಮತ್ತೊಂದು ದಾಖಲೆ ಪತನ ಮಾಡಿದ ಶುಭ್ ಮನ್ ಗಿಲ್
ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಶತಕಗಳಿಸುವ ಮೂಲಕ ದಾಖಲೆ ಬರೆದಿದ್ದ ಭಾರತದ ಸ್ಫೋಟಕ ಬ್ಯಾಟರ್ ಶುಭ್ ಮನ್ ಗಿಲ್ ಇದೀಗ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.
Published: 02nd February 2023 11:48 AM | Last Updated: 02nd February 2023 01:51 PM | A+A A-

ಶುಭ್ ಮನ್ ಗಿಲ್
ಅಹ್ಮದಾಬಾದ್: ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಶತಕಗಳಿಸುವ ಮೂಲಕ ದಾಖಲೆ ಬರೆದಿದ್ದ ಭಾರತದ ಸ್ಫೋಟಕ ಬ್ಯಾಟರ್ ಶುಭ್ ಮನ್ ಗಿಲ್ ಇದೀಗ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಕೇವಲ 63 ಎಸೆತಗಳಲ್ಲಿ 126 ರನ್ ಗಳಿಸಿದ ಗಿಲ್ ಈ ಭರ್ಜರಿ ಪ್ರದರ್ಶನದೊಂದಿಗೆ ಭಾರತದ ಪರ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ಮೊತ್ತ ಗಳಿಸಿದ ದಾಖಲೆಗೂ ಭಾಜನರಾಗಿದ್ದಾರೆ. 63 ಎಸೆತಗಳನ್ನು ಎದುರಿಸಿದ ಗಿಲ್ 12 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 126 ರನ್ ಗಳಿಸಿ ಆಜೇಯರಾಗಿ ಉಳಿದರು.
ಇದನ್ನೂ ಓದಿ: ಟಿ20 ಶತಕದ ಮೂಲಕ ಕೊಹ್ಲಿ ದಾಖಲೆ ಪುಡಿಗಟ್ಟಿದ ಶುಭ್ಮನ್ ಗಿಲ್
54 ಎಸೆತಗಳಲ್ಲಿ ಶತಕ...
ಶುಭಮನ್ ಗಿಲ್ 54 ಎಸೆತಗಳಲ್ಲಿ ಚೊಚ್ಚಲ ಶತಕದ ಮೈಲಿಗಲ್ಲು ತಲುಪಿದರು. 35 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದ್ದ ಗಿಲ್, ಬಳಿಕದ 50 ರನ್‌ಗಾಗಿ ಕೇವಲ 19 ಎಸೆತಗಳನ್ನಷ್ಟೇ ಎದುರಿಸಿದರು.
Stat Alert - Shubman Gill now has the highest individual score by an Indian in T20Is #TeamIndia pic.twitter.com/8cNZdcPIpF
— BCCI (@BCCI) February 1, 2023
2022ರಲ್ಲಿ ದುಬೈನಲ್ಲಿ ಅಫ್ಗಾನಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಅಜೇಯ 122 ರನ್ ಗಳಿಸಿರುವುದು ಈವರೆಗಿನ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು. 2017ರಲ್ಲಿ ರೋಹಿತ್ ಶರ್ಮಾ, ಶ್ರೀಲಂಕಾ ವಿರುದ್ಧ ಇಂದೋರ್‌ನಲ್ಲಿ ಗಳಿಸಿದ್ದ 118 ರನ್ ಸಾಧನೆಯನ್ನು ಗಿಲ್ ಹಿಮ್ಮೆಟ್ಟಿಸಿದ್ದಾರೆ.
ಇದನ್ನೂ ಓದಿ: 3ನೇ ಟಿ20: ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 168 ರನ್ ಗಳ ಭರ್ಜರಿ ಜಯ, ಸರಣಿ ಕೈ ವಶ
ನ್ಯೂಜಿಲೆಂಡ್ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್
ಅಂತೆಯೇ ನ್ಯೂಜಿಲೆಂಡ್ ವಿರುದ್ಧ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿದ ಹಿರಿಮೆಗೂ ಗಿಲ್ ಪಾತ್ರರಾಗಿದ್ದು, ಇತ್ತೀಚೆಗಷ್ಟೇ ಅಂತ್ಯಗೊಂಡ ಏಕದಿನ ಸರಣಿಯಲ್ಲಿ ಗಿಲ್ ಚೊಚ್ಚಲ ದ್ವಿಶತಕ (208) ಗಳಿಸಿದ್ದರು.