ಎಲ್‌ಬಿಡಬ್ಲ್ಯೂ ವಿವಾದ: ಥರ್ಡ್ ಅಂಪೈರ್ ಔಟ್ ಗೆ ಕೋಪಗೊಂಡ ವಿರಾಟ್ ಕೊಹ್ಲಿ, ವಿಡಿಯೋ ವೈರಲ್

ಭಾರತ-ಆಸ್ಟ್ರೇಲಿಯಾ ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರೀ ವಿವಾದ ಉಂಟಾಗಿದೆ. ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಔಟ್ ಕುರಿತಂತೆ ಪ್ರಶ್ನೆಗಳು ಎದ್ದಿವೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಭಾರತ-ಆಸ್ಟ್ರೇಲಿಯಾ ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರೀ ವಿವಾದ ಉಂಟಾಗಿದೆ. ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಔಟ್ ಕುರಿತಂತೆ ಪ್ರಶ್ನೆಗಳು ಎದ್ದಿವೆ. ಅಭಿಮಾನಿಗಳು ಮಾತ್ರವಲ್ಲದೆ ಸ್ವತಃ ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾದ ಮ್ಯಾನೇಜ್ಮೆಂಟ್ ಈ ಔಟ್ ಬಗ್ಗೆ ಸಂಪೂರ್ಣವಾಗಿ ಹತಾಶವಾಗಿದೆ.

ಭಾರತದ ಇನ್ನಿಂಗ್ಸ್‌ನ 50ನೇ ಓವರ್‌ನಲ್ಲಿ ಮ್ಯಾಥ್ಯೂ ಕುನ್ಹೆಮನ್ ಅವರು ವಿರಾಟ್ ಕೊಹ್ಲಿಗೆ ಬಾಲ್ ಮಾಡಿದಾಗ, ಚೆಂಡು ಪ್ಯಾಡ್‌ಗೆ ಬಡಿದಿತು. ಅಂಪೈರ್ ಅದಕ್ಕೆ ಔಟ್ ಎಂದು ನೀಡಿದರು. ಆದರೆ ಇದಕ್ಕೆ ವಿರಾಟ್ ಕೊಹ್ಲಿ ರಿವ್ಯೂಗೆ ಮನವಿ ಮಾಡಿದರು. ರಿವ್ಯೂನಲ್ಲಿ ಕೂಡ ವಿಕೆಟ್‌ನಲ್ಲಿ ಯಾವುದೇ ಸ್ಪಷ್ಟವಾದ ಅಂಶ ಕಂಡುಬಂದಿಲ್ಲ, ಆದರೆ ಅಂಪೈರ್‌ಗಳ ಕರೆಯಿಂದಾಗಿ ವಿರಾಟ್ ಕೊಹ್ಲಿಯನ್ನು ಔಟ್ ಎಂದು ಘೋಷಿಸಲಾಯಿತು.

ಮೂರನೇ ಅಂಪೈರ್ ಔಟ್ ನಿರ್ಧಾರದ ಬಳಿಕ ಕೋಪಗೊಂಡು ಪೆವಿಲಿಯನ್ ಗೆ ವಿರಾಟ್ ಕೊಹ್ಲಿ ಮರಳಿದರು. ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತಿದ್ದ ಟೀಮ್ ಇಂಡಿಯಾದ ಮ್ಯಾನೇಜ್‌ಮೆಂಟ್ ಕೂಡ ಈ ನಿರ್ಧಾರದಿಂದ ಸಂತಸಗೊಂಡಿಲ್ಲ, ಕೋಚ್ ರಾಹುಲ್ ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಕೂಡ ಮೂರನೇ ಅಂಪೈರ್ ನಿರ್ಧಾರದಿಂದ ಬೇಸರಗೊಂಡರು.

ಟೀಂ ಇಂಡಿಯಾ ಸಂಕಷ್ಟದಲ್ಲಿದ್ದಾಗ ವಿರಾಟ್ ಕೊಹ್ಲಿ ಸ್ಥಿರ ಇನ್ನಿಂಗ್ಸ್ ಆಡುತ್ತಿದ್ದರು. ರವೀಂದ್ರ ಜಡೇಜಾ ಜೊತೆಗೂಡಿ ಟೀಂ ಇಂಡಿಯಾ ಇನ್ನಿಂಗ್ಸ್ ಮುನ್ನಡೆಸುತ್ತಿದ್ದರು. ಈ ಇನ್ನಿಂಗ್ಸ್‌ನಲ್ಲಿ, ವಿರಾಟ್ ಕೊಹ್ಲಿ 84 ಎಸೆತಗಳಲ್ಲಿ 44 ರನ್ ಗಳಿಸಿದರು, ಈ ಸಮಯದಲ್ಲಿ ಅವರು 4 ಬೌಂಡರಿಗಳನ್ನು ಬಾರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com