ಮಿಷನ್ 2024: ಹೊಸ ನಾಯಕ ಹಾರ್ದಿಕ್ ನೇತೃತ್ವದಲ್ಲಿ 'ಬಿಗ್ 3 ರಹಿತ' ಭಾರತ T20 ತಂಡಕ್ಕೆ ಹೊಸ ಸವಾಲು
2024ರ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆ ಆರಂಭಿಸಿರುವ ಭಾರತ ತಂಡಕ್ಕೆ 2023 ಬಹುದೊಡ್ಡ ಸವಾಲಾಗಿದ್ದು, ಲಂಕಾ ಪ್ರವಾಸಕ್ಕೆ ಸಜ್ಜುಗೊಂಡಿರುವ ಹಾರ್ದಿಕ್ ಪಾಂಡ್ಯಾ ನೇತೃತ್ವದ 'ಬಿಗ್ 3 ರಹಿತ' ಭಾರತ ತಂಡಕ್ಕೆ ಅಗ್ನಿ ಪರೀಕ್ಷೆ ಎದುರಾಗಲಿದೆ.
Published: 02nd January 2023 05:03 PM | Last Updated: 02nd January 2023 05:03 PM | A+A A-

ಹಾರ್ದಿಕ್ ಪಾಂಡ್ಯ ಮತ್ತು ತಂಡ
ಮುಂಬೈ: 2024ರ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆ ಆರಂಭಿಸಿರುವ ಭಾರತ ತಂಡಕ್ಕೆ 2023 ಬಹುದೊಡ್ಡ ಸವಾಲಾಗಿದ್ದು, ಲಂಕಾ ಪ್ರವಾಸಕ್ಕೆ ಸಜ್ಜುಗೊಂಡಿರುವ ಹಾರ್ದಿಕ್ ಪಾಂಡ್ಯಾ ನೇತೃತ್ವದ 'ಬಿಗ್ 3 ರಹಿತ' ಭಾರತ ತಂಡಕ್ಕೆ ಅಗ್ನಿ ಪರೀಕ್ಷೆ ಎದುರಾಗಲಿದೆ.
ಹೌದು.. 2024ರ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆ ಹಂತವಾಗಿ ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾ ಸಜ್ಜಾಗಿದೆ. ಹಾರ್ದಿಕ್ ಪಾಂಡ್ಯಾ ನೇತೃತ್ವದಲ್ಲಿ ಟೀಂ ಇಂಡಿಯಾ ಕಣಕ್ಕಿಳಿದಿದ್ದು, ಟಿ20 ವಿಶ್ವಕಪ್ ಟೂರ್ನಿಯ ಸಿದ್ಧತಾ ಹಂತದಲ್ಲಿ ಈ ಟೂರ್ನಿ ಪಾಂಡ್ಯಾ ಅಂಡ್ ಟೀಂ ಗೆ ಮಹತ್ವದ್ದಾಗಿದೆ. ಈ ಟೂರ್ನಿ ಮೂಲಕ ಹಾರ್ದಿಕ್ ಪಾಂಡ್ಯಾ ಭಾರತ ಟಿ20 ತಂಡದ ಪೂರ್ಣ ಸಮಯದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ.
ಟೀಂ ಇಂಡಿಯಾಗೆ ಕಾಡಲಿದ್ಯಾ 'ಬಿಗ್ 3' ಅನುಪಸ್ಥಿತಿ
ಇನ್ನು ಮುಂಬರುವ ಟಿ20 ವಿಶ್ವಕಪ್ ತಯಾರಿ ನಿಟ್ಟಿನಲ್ಲಿ ತಂಡದ ಮೂರು ಪ್ರಮುಖ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹಾಲಿ ಟೂರ್ನಿಯಲ್ಲಿ ಉದಯೋನ್ಮುಖ ಆಟಗಾರರಿಗೆ ಸ್ಥಾನ ಕಲ್ಪಿಸಲಾಗಿದೆ. ಪ್ರಮುಖವಾಗಿ ಟೀಂ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ರನ್ನು ಲಂಕಾ ಸರಣಿಯಿಂದ ಕೈಬಿಡಲಾಗಿದ್ದು, ಇದು ಟೀಂ ಇಂಡಿಯಾಗೆ ಯಾವ ರೀತಿಯ ಪರಿಣಾಮ ಉಂಟುಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಸೋಂಕಿನ ಅಪಾಯ, ರಿಷಬ್ ಪಂತ್ರನ್ನು ಐಸಿಯುನಿಂದ ವಿಶೇಷ ವಾರ್ಡ್ಗೆ ಸ್ಥಳಾಂತರ: ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ
ಈ ಹಿಂದೆ ನ್ಯೂಜಿಲೆಂಡ್‌ನಲ್ಲಿ ಮಳೆ-ಹಾನಿಗೊಳಗಾದ T20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಮಳೆಯ ಹೊರತಾಗಿಯೂ ಹಾರ್ದಿಕ್ ನಾಯಕತ್ವ ಗಮನ ಸೆಳೆದಿತ್ತು. ಕಳೆದ ವರ್ಷ ಏಕದಿನ ವಿಶ್ವಕಪ್ ಹಿನ್ನಲೆಯಲ್ಲಿ ಟಿ20 ಮಾದರಿ ಮೇಲೆ ಭಾರತ ಅಷ್ಟೇನೂ ಗಮನ ಕೇಂದ್ರೀಕರಿಸಿರಲಿಲ್ಲ.. ಆದರೆ ಮುಂದಿನ ವರ್ಷ ಟಿ20 ವಿಶ್ವಕಪ್ ಟೂರ್ನಿ ಇರುವ ಹಿನ್ನಲೆಯಲ್ಲಿ ಈ ವರ್ಷ ಬಿಸಿಸಿಐ ಟಿ20 ಮಾದರಿ ಟೂರ್ನಿಗಳ ಮೇಲೆ ಗಮನ ಕೇಂದ್ರೀಕರಿಸಿದೆ ಎನ್ನಲಾಗಿದೆ. ನಿರ್ದಿಷ್ಟವಾಗಿ 2024 T20 ವಿಶ್ವಕಪ್‌ಗಾಗಿ ಯೋಜನೆಯನ್ನು ಪ್ರಾರಂಭಿಸಲು ಲಂಕಾ ವಿರುದ್ಧದ ಸರಣಿ ಅನುವು ಮಾಡಿಕೊಡುತ್ತದೆ. ಭಾರತದ ಹಿರಿಯ ಆಟಗಾರರ T20 ಭವಿಷ್ಯದ ಹೊರತಾಗಿಯೂ, ತಂಡವು ಅವರಿಲ್ಲದೆ ತಯಾರಿ ನಡೆಸಬೇಕು.
ಇದನ್ನೂ ಓದಿ: ಸೋಂಕಿನ ಅಪಾಯ, ರಿಷಬ್ ಪಂತ್ರನ್ನು ಐಸಿಯುನಿಂದ ವಿಶೇಷ ವಾರ್ಡ್ಗೆ ಸ್ಥಳಾಂತರ: ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ
ತಂಡವನ್ನು ಕಾಡುತ್ತಿದೆ ಸಾಕಷ್ಟು ಸಮಸ್ಯೆ
ಇನ್ನು ಇತ್ತೀಚಿನ ದಿನಗಳಲ್ಲಿ ಪ್ರಸ್ತುತ ಭಾರತೀಯ T20 ತಂಡದ ಸಮಸ್ಯೆಯೆಂದರೆ, ನಿರ್ಭೀತ ಕ್ರಿಕೆಟ್ ಆಡುವ ಉದ್ದೇಶ ಮತ್ತು ಸಾಮರ್ಥ್ಯದ ಸ್ಪಷ್ಟ ಕೊರತೆ. ಪರಿಣಾಮಕಾರಿ ಪ್ರದರ್ಶನದ ವೆಚ್ಚದಲ್ಲಿ ಸ್ವಯಂ ಸಂರಕ್ಷಣೆಯ ಕಲ್ಪನೆಯು ದೀರ್ಘಕಾಲದವರೆಗೆ ತಂಡವನ್ನು ಕಾಡುತ್ತಿದೆ. ಬಹುಶಃ T20 ವಿಶ್ವಕಪ್‌ನಲ್ಲಿನ ಕಳಪೆ ಪ್ರದರ್ಶನವು ತಂಡಕ್ಕೆ ಮೇಜರ್ ಸರ್ಜರಿ ಮಾಡಲು ಪ್ರೋತ್ಸಾಹಿಸಿದೆ ಎನ್ನಬಹುದು. ಆದಾಗ್ಯೂ ಈ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ತಂಡ ಉತ್ತಮ ಪ್ರದರ್ಶನ ನೀಡಲು ಉತ್ತಮ ತಂಡದ ಸಂಯೋಜನೆಯತ್ತ ಗಮನ ಹರಿಸಬೇಕಿದೆ.
ತಂಡ ಸಂಯೋಜನೆ
ಕಳೆದ ವಾರ ಭೀಕರ ಕಾರು ಅಪಘಾತಕ್ಕೆ ಒಳಗಾದ ರಿಷಭ್ ಪಂತ್ ಲಂಕಾ ಸರಣಿಯಿಂದ ದೂರು ಉಳಿಯಲಿದ್ದು, ಇಶಾನ್ ಕಿಶನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಗುವ ಟಿ20 ಸರಣಿಯಲ್ಲಿ ಇಶಾನ್ ಕಿಶನ್ ಮತ್ತು ರುತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಸಂಯೋಜನೆ ಫಲ ನೀಡಿದರೆ ಇದನ್ನೇ ದೀರ್ಘಕಾಲದ ವರೆಗೆ ಮುಂದುವರೆಸುವ ಯೋಜನೆ ತಂಡದಲ್ಲಿ ಕೇಳಿಬರುತ್ತಿದೆ. ಕಿಶನ್ ಮತ್ತು ಗಾಯಕ್‌ವಾಡ್ ಇಬ್ಬರೂ ಕಳೆದ ಕೆಲವು ವರ್ಷಗಳಿಂದ ಐಪಿಎಲ್‌ನ ಅತ್ಯುತ್ತಮ ಪ್ರದರ್ಶನ ನೀಡಿಗ ಆಟಗಾರರಾಗಿದ್ದಾರೆ. ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ಚಿಂತಿಸದೆ ತಮ್ಮ ಆಟ ಪ್ರದರ್ಶಿಸಲು ಇದು ಅವರಿಗೆ ನಿಜವಾದ ಅವಕಾಶವಾಗಿರಲಿದೆ.
ಇದನ್ನೂ ಓದಿ: ಅಮಿತ್ ಶಾ ಭೇಟಿ ಮಾಡಿದ ಟೀಂ ಇಂಡಿಯಾ ಟಿ20 ನೂತನ ನಾಯಕ ಹಾರ್ದಿಕ್ ಪಾಂಡ್ಯ
ಮುಂದಿನ T20 ವಿಶ್ವಕಪ್‌ಗೆ ಕನಿಷ್ಠ 18 ತಿಂಗಳುಗಳು ಬಾಕಿಯಿರುವುದರಿಂದ, ಈ ವರ್ಷ T20 ಇಂಟರ್‌ನ್ಯಾಶನಲ್‌ಗಳ ಸಂಖ್ಯೆ 15 ಕ್ಕಿಂತ ಕಡಿಮೆಯಿದ್ದರೂ ODI ಹೆಚ್ಚು ಪ್ರಾಶಸ್ತ್ಯವನ್ನು ಪಡೆಯುವುದರೊಂದಿಗೆ ಇವರಿಬ್ಬರು ಹೆಚ್ಚಿನ ಪಂದ್ಯಗಳಿಗೆ ಆಯ್ಕೆಯಾಗಬಹುದು. ಇನ್ನೂ ಟಿ20 ಪಾದಾರ್ಪಣೆ ಮಾಡದ ಶುಭಮನ್ ಗಿಲ್ ಹಾರ್ದಿಕ್‌ಗೆ ಮತ್ತೊಂದು ಆರಂಭಿಕ ಆಯ್ಕೆಯಾಗಿದ್ದಾರೆ. ಮೂರನೇ ಕ್ರಮಾಂಕದಲ್ಲಿ ನಾಯಕ ವಿಶ್ವದ ನಂ.1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಪ್ರತಿಭೆಯನ್ನು ನೆಚ್ಚಿಕೊಳ್ಳಲಿದ್ದಾರೆ. ಹಾರ್ದಿಕ್ ಆಡುವ ಹನ್ನೊಂದರಲ್ಲಿ ಆರು ಬೌಲಿಂಗ್ ಆಯ್ಕೆಗಳನ್ನು ಹೊಂದಲು ಉತ್ಸುಕನಾಗಿರುವುದರಿಂದ, ದೀಪಕ್ ಹೂಡಾ ಮಂಗಳವಾರದ ಪಂದ್ಯಕ್ಕೆ ಆರಂಭಿಕ ಬೌಲಿಂಗ್ ಆಯ್ಕೆಯಾಗಿರಬಹುದು.
ಮಧ್ಯಮ ಕ್ರಮಾಂಕದಲ್ಲಿ ಒಂದು ಸ್ಥಾನಕ್ಕಾಗಿ ಮ್ಯಾನೇಜ್‌ಮೆಂಟ್ ಸಂಜು ಸ್ಯಾಮ್ಸನ್ ಮತ್ತು ಅನ್‌ಕ್ಯಾಪ್ಡ್ ರಾಹುಲ್ ತ್ರಿಪಾಠಿ ಅವರನ್ನು ಆಯ್ಕೆ ಮಾಡಬೇಕಾಗುತ್ತದೆ. ತ್ರಿಪಾಠಿ ಈಗ ಸ್ವಲ್ಪ ಸಮಯದವರೆಗೆ ಬೆಂಚ್ ಕಾದಿದ್ದು, ಇದು ಶ್ರೀಲಂಕಾ ವಿರುದ್ಧ ಮುಂದುವರಿಯಬಹುದು. ಆದರೆ ಅನುಭವದ ಖಾತೆಯಲ್ಲಿ ಸ್ಯಾಮ್ಸನ್ ಮೊದಲ ಪ್ರಾಶಸ್ತ್ರ್ಯ ಪಡೆದಿದ್ದಾರೆ. ಅಂತೆಯೇ ಅನ್‌ಕ್ಯಾಪ್ ಆಗಿರುವ ಶಿವಂ ಮಾವಿ ಮತ್ತು ಮುಖೇಶ್ ಕುಮಾರ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದ್ದರೂ, ವೇಗದ ಬೌಲಿಂಗ್ ಆಯ್ಕೆ ವಿಚಾರದಲ್ಲಿ ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್ ಮತ್ತು ಉಮ್ರಾನ್ ಮಲಿಕ್ ತಂಡ ಪ್ರಮುಖ ಬೌಲರ್ ಗಳಾಗಿರುತ್ತಾರೆ. ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಅವರ ಆಯ್ಕೆಯೊಂದಿಗೆ ಭಾರತ ತಂಡದಲ್ಲಿ ಹೆಚ್ಚಿನ ಆಲ್ ರೌಂಡರ್‌ಗಳ ಆಯ್ಕೆ ಕೂಡ ಸೇರಿದೆ. ಸ್ಪೆಷಲಿಸ್ಟ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಸರಣಿಯ ಆರಂಭಿಕ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ.
ಇದನ್ನೂ ಓದಿ: ವರದಿಗಾರನ ಪ್ರಶ್ನೆಗೆ ಆಕ್ರೋಶಗೊಂಡ ಬಾಬರ್ ಅಜಂ, ಪತ್ರಕರ್ತನನ್ನು ಗುರಾಯಿಸಿದ ನಾಯಕ: ವಿಡಿಯೋ ವೈರಲ್
ಇನ್ನು ಶ್ರೀಲಂಕಾ ತಂಡ ವಿಚಾರಕ್ಕೆ ಬರುವುದಾದರೆ ಏಷ್ಯಾಕಪ್ ಚಾಂಪಿಯನ್ ಆಗಿರುವ ಶ್ರೀಲಂಕಾಗೆ ಭಾರತ ಟೂರ್ನಿ ಪ್ರಮುಖವಾಗಿದ್ದು, ಲಂಕಾ ಪ್ರೀಮಿಯರ್ ಲೀಗ್‌ನ ಸ್ಟಾರ್ ಪರ್ಫಾರ್ಮರ್‌ಗಳಾದ ಅವಿಷ್ಕಾ ಫರ್ನಾಂಡೋ, ಚಾಮಿಕಾ ಕರುಣಾರತ್ನೆ ಮತ್ತು ಸದೀರ ಸಮರವಿಕ್ರಮ ಅವರನ್ನು ಭಾರತ ಸರಣಿಗೆ ತಂಡದಲ್ಲಿ ಸೇರಿಸಿಕೊಳ್ಳುವ ಮೂಲಕ ಶ್ರೀಲಂಕಾ ಕಠಿಣ ತಂಡವನ್ನು ಭಾರತಕ್ಕೆ ಕಳುಹಿಸಿದೆ. ಅಂತೆಯೇ ತಂಡಕ್ಕೆ ಸ್ಚಾರ್ ಆಟಗಾರರಾದ ಫರ್ನಾಂಡೊ ಮತ್ತು ಕರುಣಾರತ್ನ ಇಬ್ಬರೂ ಪುನರಾಗಮನ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಭಾನುಕಾ ರಾಜಪಕ್ಸೆ ಅವರ ಪ್ರಮುಖ ಬ್ಯಾಟರ್ ಆಗಿದ್ದಾರೆ.
ತಂಡಗಳು ಇಂತಿವೆ
ಭಾರತ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪ ನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್.
ಇದನ್ನೂ ಓದಿ: ನಾವೇನು ಭಾರತದ ಸೇವಕರೇ?- ರಮೀಜ್ ರಾಜ; ಬಿಸಿಸಿಐ 'ಶಾ'ಕ್ ಗೆ ನಲುಗಿದ ಪಾಕ್ ಕ್ರಿಕೆಟ್ ಮಂಡಳಿ
ಶ್ರೀಲಂಕಾ: ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ಅವಿಷ್ಕಾ ಫೆರ್ನಾಂಡೊ, ಸದೀರ ಸಮರವಿಕ್ರಮ, ಕುಸಾಲ್ ಮೆಂಡಿಸ್ (ಏಕದಿನ ವಿಕೆಟ್ ಕೀಪರ್), ಭಾನುಕಾ ರಾಜಪಕ್ಸೆ (ಟಿ20ಐಗೆ ವಿಕೆಟ್ ಕೀಪರ್), ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ (ಟಿ20ಐ ಉಪ ನಾಯಕ), ಬಂಡಾರ, ಮಹೇಶ್ ತೀಕ್ಷಣ, ಜೆಫ್ರಿ ವಾಂಡರ್ಸೆ (ಏಕದಿನ), ಚಾಮಿಕ ಕರುಣಾರತ್ನೆ, ದಿಲ್ಶಾನ್ ಮಧುಶಂಕ, ಕಸುನ್ ರಜಿತ, ನುವಾನಿಡು ಫೆರ್ನಾಂಡೋ (ಏಕದಿನ), ದುನಿತ್ ವೆಲ್ಲಲಾಗೆ, ಪ್ರಮೋದ್ ಮದುಶನ್, ಲಹಿರು ಕುಮಾರ, ನುವಾನ್ ತುಷಾರ (ಟ್ವೆಂಟಿ-20).