3ನೇ ಏಕದಿನ ಪಂದ್ಯದಲ್ಲಿ ಲಂಕಾ ವಿರುದ್ಧ ಭಾರತಕ್ಕೆ 317 ರನ್ ಐತಿಹಾಸಿಕ ಜಯ: ಸರಣಿ ವೈಟ್ ವಾಶ್!

ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 317 ರನ್ ಗಳಿಂದ ಭರ್ಜರಿ ಜಯ ಗಳಿಸಿದ್ದು ಸರಣಿಯನ್ನು ವೈಟ್ ವಾಶ್ ಮಾಡಿದೆ.
Team India
Team India

ತಿರುವನಂತಪುರಂ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 317 ರನ್ ಗಳಿಂದ ಭರ್ಜರಿ ಜಯ ಗಳಿಸಿದ್ದು ಸರಣಿಯನ್ನು ವೈಟ್ ವಾಶ್ ಮಾಡಿದೆ.

ತಿರುವನಂತಪುರದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 390 ರನ್ ಗಳಿಸಿತು. ಭಾರತ ತಂಡದ ಪರ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಶ್ರೀಲಂಕಾ ಗೆಲುವಿಗೆ 50 ಓವರ್‌ಗಳಲ್ಲಿ 391 ರನ್‌ಗಳ ಗುರಿ ನೀಡಲಾಯಿತು.

ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಲಂಕಾ ಪಡೆ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು. ಲಂಕಾ 73 ರನ್ ಗಳಿಗೆ ಸರ್ವ ಪತನ ಕಂಡಿತು. ಇನ್ನು ಭಾರತ 317 ಅತ್ಯಾಧಿಕ ರನ್ ನಿಂದ ಗೆಲುವು ಸಾಧಿಸುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಇಷ್ಟು ದೊಡ್ಡ ಅಂತರದಿಂದ ಗೆದ್ದ ಮೊದಲ ತಂಡವಾಗಿ ಹೊರಹೊಮ್ಮಿದೆ. 

ಲಂಕಾ ಪರ ಬ್ಯಾಟಿಂಗ್ ನಲ್ಲಿ ನುವಾಂದಿಡು ಫೆರ್ನಾಂಡೊ 19, ದಸುನ್ ಶನಕಾ 11 ಮತ್ತು ಕುಸುನ್ ರಜಿತಾ ಅಜೇಯ 13 ರನ್ ಸಿಡಿಸಿದ್ದರೆ ಮತ್ಯಾವ ಬ್ಯಾಟರ್ ಸಹ ಒಂದಂಕಿ ದಾಟಲಿಲ್ಲ. ಭಾರತ ಪರ ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ 4, ಮೊಹಮ್ಮದ್ ಶಮಿ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದಿದ್ದಾರೆ.

ಭಾರತದ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ 49 ಎಸೆತಗಳಲ್ಲಿ 42 ರನ್ ಗಳಿಸಿದರು. ಆದರೆ, ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಶತಕ ಬಾರಿಸಿದರು. ಶುಭಮನ್ ಗಿಲ್ 89 ಎಸೆತಗಳಲ್ಲಿ ಶತಕ ಪೂರೈಸಿದರು. ಒಟ್ಟಾರೆ 97 ಎಸೆತಗಳಲ್ಲಿ 116 ರನ್‌ ಗಳಿಸಿ ಔಟಾದರು. ಶುಬ್ಮನ್ ಗಿಲ್ ಅವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಇನ್ನು ವಿರಾಟ್ ಕೊಹ್ಲಿ 85 ಎಸೆತಗಳಲ್ಲಿ 46ನೇ ಏಕದಿನ ಶತಕ ಪೂರೈಸಿದರು. ವಿರಾಟ್ ಕೊಹ್ಲಿ ಒಟ್ಟಾರೆ 110 ಎಸೆತಗಳಲ್ಲಿ 8 ಸಿಕ್ಸರೆ 13 ಬೌಂಡರಿಯೊಂದಿಗೆ ಅಜೇಯ 166 ರನ್ ಬಾರಿಸಿದರು.

ಅದೇ ಸಮಯದಲ್ಲಿ, ಶ್ರೇಯಸ್ ಅಯ್ಯರ್ 32 ಎಸೆತಗಳಲ್ಲಿ 38 ರನ್ ಕೊಡುಗೆ ನೀಡಿದರು. ನಂತರ ಬಂದ ಕೆಎಲ್ ರಾಹಲ್ 7 ಮತ್ತು ಸೂರ್ಯಕುಮಾರ್ ಯಾದವ್ 4 ರನ್ ಗೆ ಔಟಾದರು. 

ಲಂಕಾ ಪರ ರಜಿತಾ ಮತ್ತು ಲಹಿರು ಕುಮಾರಾ ತಲಾ ಎರಡು ವಿಕೆಟ್ ಪಡೆದರೆ ಕರುಣರತ್ನೆ 1 ವಿಕೆಟ್ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com