46ನೇ ಶತಕದೊಂದಿಗೆ ಸಚಿನ್ ತೆಂಡೂಲ್ಕರ್ ರ ಎರಡು ದೊಡ್ಡ ದಾಖಲೆ ಧೂಳಿಪಟ ಮಾಡಿದ ಕಿಂಗ್ ಕೊಹ್ಲಿ!

ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದು 46ನೇ ಶತಕ ಸಿಡಿಸಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on: 

ತಿರುವಂತಪುರಂ: ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದು 46ನೇ ಶತಕ ಸಿಡಿಸಿದ್ದಾರೆ.

ತಿರುವನಂತಪುರಂನ ಗ್ರೀನ್ ಫೀಲ್ಡ್ ಸ್ಟೇಡಿಯಂನಲ್ಲಿ ಕೊಹ್ಲಿ ಶ್ರೀಲಂಕಾ ಬೌಲರ್ ಗಳನ್ನು ದಂಡಿಸಿದರು. 110 ಎಸೆತಗಳನ್ನು ಎದುರಿಸಿದ ಕೊಹ್ಲಿ ಅಜೇಯ 166 ರನ್ ಗಳಿಸಿದರು. ಈ ವೇಳೆ ಇನ್ನಿಂಗ್ಸ್‌ನಲ್ಲಿ ಕೊಹ್ಲಿ 13 ಬೌಂಡರಿ ಮತ್ತು 8 ಸಿಕ್ಸರ್‌ ಸಿಡಿಸಿದರು. ಇದು ಕೊಹ್ಲಿ ಅವರ ಏಕದಿನ ವೃತ್ತಿ ಬದುಕಿನ 46ನೇ ಶತಕವಾಗಿದೆ. ಇನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಮುರಿಯಲು ಅವರು ಕೇವಲ ನಾಲ್ಕು ಹೆಜ್ಜೆ ದೂರದಲ್ಲಿದ್ದಾರೆ.

ವಿರಾಟ್ 46 ಶತಕ ವರ್ಸಸ್ ಸಚಿನ್ 46 ಶತಕ
ವಿರಾಟ್ ತಮ್ಮ 46ನೇ ಶತಕದಿಂದಾಗಿ ಸಚಿನ್ ಅವರ ಎರಡು ದೊಡ್ಡ ದಾಖಲೆಗಳನ್ನು ನಾಶಪಡಿಸಿದ್ದಾರೆ. ಒಂದು ತಂಡದ ವಿರುದ್ಧ ಅತಿ ಹೆಚ್ಚು ಏಕದಿನ ಶತಕಗಳನ್ನು(10) ಮತ್ತು ತವರಿನಲ್ಲಿ(21) ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಷಯದಲ್ಲಿ ಕೊಹ್ಲಿ ಸಚಿನ್ ಅವರನ್ನು ಮೀರಿಸಿದ್ದಾರೆ.

ಕೊಹ್ಲಿ ಮತ್ತು ಸಚಿನ್ ತಮ್ಮ 46ನೇ ಏಕದಿನ ಶತಕದ ಇನ್ನಿಂಗ್ಸ್‌ನಲ್ಲಿ 150ಕ್ಕಿಂತ ಹೆಚ್ಚು ವೈಯಕ್ತಿಕ ರನ್ ಗಳಿಸಿದ್ದಾರೆ. ಅಲ್ಲದೆ ಇಬ್ಬರೂ ಬ್ಯಾಟ್ಸ್ ಮನ್ ಗಳು ಅಜೇಯವಾಗಿ ಪೆವಿಲಿಯನ್ ಗೆ ಮರಳಿರುವುದು ವಿಶೇಷ. ಫೆಬ್ರವರಿ 2010ರ ಫೆಬ್ರವರಿಯಲ್ಲಿ ಸಚಿನ್ ದಕ್ಷಿಣ ಆಫ್ರಿಕಾ ವಿರುದ್ಧ ಗ್ವಾಲಿಯರ್ ಮೈದಾನದಲ್ಲಿ ತಮ್ಮ 46ನೇ ಶತಕವನ್ನು ಗಳಿಸಿದರು. ಸಚಿನ್ 147 ಎಸೆತಗಳಲ್ಲಿ 25 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ಅಜೇಯ 200 ರನ್ ಪೇರಿಸಿದ್ದರು. ಇನ್ನು ಪುರುಷರ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಸಚಿನ್ ಪಾತ್ರರಾಗಿದ್ದಾರೆ.

ಕೊಹ್ಲಿ ಮತ್ತು ಸಚಿನ್ ಅವರ ಏಕದಿನ ವೃತ್ತಿಜೀವನ
2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಕೊಹ್ಲಿ ಇಲ್ಲಿಯವರೆಗೆ 258 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಅವರು 58.24ರ ಸರಾಸರಿಯಲ್ಲಿ 12,754 ರನ್ ಗಳಿಸಿದ್ದಾರೆ. ಅವರು 64 ಅರ್ಧಶತಕಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಮತ್ತೊಂದೆಡೆ, ಸಚಿನ್ 1989ರಲ್ಲಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದು 2013ರಲ್ಲಿ ಕೊನೆಗೊಂಡಿತು. ಸಚಿನ್ 463 ಏಕದಿನ ಗಳಲ್ಲಿ 44.83 ಸರಾಸರಿಯಲ್ಲಿ 18,426 ರನ್ ಗಳಿಸಿದ್ದಾರೆ. 49 ಏಕದಿನ ಶತಕಗಳನ್ನು ಹೊರತುಪಡಿಸಿ, 96 ಅರ್ಧಶತಕಗಳನ್ನು ಗಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com