2ನೇ ಏಕದಿನ ಪಂದ್ಯ: ಅಲ್ಪ ಮೊತ್ತಕ್ಕೆ 5 ವಿಕೆಟ್, ಕಿವೀಸ್ ವಿರುದ್ಧ ಟೀಂ ಇಂಡಿಯಾ ದಾಖಲೆ

ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ 5 ವಿಕೆಟ್ ಕಳೆದುಕೊಳ್ಳುವ ಮೂಲಕ ನ್ಯೂಜಿಲೆಂಡ್ ತಂಡ ಹೀನಾಯ ದಾಖಲೆ ಬರೆದರೆ, ಇತ್ತ ಕಡಿಮೆ ಮೊತ್ತಕ್ಕೆ 5 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಕೂಡ ದಾಖಲೆ ಬರೆದಿದೆ.
ಭಾರತದ ಬೌಲಿಂಗ್ ದಾಳಿ
ಭಾರತದ ಬೌಲಿಂಗ್ ದಾಳಿ

ರಾಯ್ಪುರ: ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ 5 ವಿಕೆಟ್ ಕಳೆದುಕೊಳ್ಳುವ ಮೂಲಕ ನ್ಯೂಜಿಲೆಂಡ್ ತಂಡ ಹೀನಾಯ ದಾಖಲೆ ಬರೆದರೆ, ಇತ್ತ ಕಡಿಮೆ ಮೊತ್ತಕ್ಕೆ 5 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಕೂಡ ದಾಖಲೆ ಬರೆದಿದೆ.

ಹೌದು.. ಇಂದು ರಾಯ್ಪುರದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಭಾರತೀಯ ಬೌಲಿಂಗ್ ಪಡೆ ಶಾಕ್ ನೀಡಿದ್ದು, ಕೇವಲ 15 ರನ್ ಗಳಿಗೆ ಪ್ರವಾಸಿ ತಂಡದ 5 ವಿಕೆಟ್ ಪಡೆಯುವ ಮೂಲಕ ದಾಖಲೆ ನಿರ್ಮಾಣ ಮಾಡಿದೆ. ಜಾಗತಿಕ ಏಕದಿನ ಕ್ರಿಕೆಟ್ ನಲ್ಲಿ ಅತ್ಯಲ್ಪ ಮೊತ್ತಕ್ಕೆ 5 ವಿಕೆಟ್ ಪಡೆದ ಕೀರ್ತಿ ಇದೀಗ ಭಾರತದ ಪಾಲಾಗಿದೆ.

ಈ ಹಿಂದೆ 2001ರಲ್ಲಿ ಕೊಲಂಬೋದಲ್ಲಿ ನಡೆದ ಪಂದ್ಯದಲ್ಲಿ  ಶ್ರೀಲಂಕಾ ತಂಡ 18 ರನ್ ಗಳಿಗೆ ನ್ಯೂಜಿಲೆಂಡ್ ನ 5 ವಿಕೆಟ್ ಪಡೆದಿತ್ತು. ಇದು ಈ ವರೆಗೂ ಕ್ರಿಕೆಟ್ ಜಗತ್ತಿನಲ್ಲಿ ಏಕದಿನ ಮಾದರಿಯಲ್ಲಿ ಕಡಿಮೆ ಮೊತ್ತಕ್ಕೆ 5 ವಿಕೆಟ್ ಪಡೆದ ಪಂದ್ಯವಾಗಿತ್ತು. ಇದಾದ ಬಳಿಕ 2010ರಲ್ಲಿ ಮೀರ್ ಪುರ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಕೇವಲ 20 ರನ್ ಗಳಿಗೆ ನ್ಯೂಜಿಲೆಂಡ್ 5 ವಿಕೆಟ್ ಕಳೆದುಕೊಂಡಿದ್ದು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಂತೆಯೇ 2003ರಲ್ಲಿ ಆಸ್ಚ್ರೇಲಿಯಾ ವಿರುದ್ಧ 21 ರನ್ ಗಳಿಗೆ 4 ವಿಕೆಟ್ ಕಳೆದು ಕೊಂಡಿತ್ತು. ಈ ಪಟ್ಟಿಯಲ್ಲಿ ಇಂದಿನ 2ನೇ ಏಕದಿನ ಪಂದ್ಯ ಅಗ್ರ ಸ್ಥಾನಕ್ಕೇರಿದೆ.

STAT: Lowest scores for NZ at the fall of 5th wkt
15/5 vs Ind Raipur 2023 *
18/5 vs SL Colombo 2001
20/5 vs Ban Mirpur 2010
21/5 vs Aus Faridabad 2003

ಭಾರತದ ವಿರುದ್ಧ ಕಳಪೆ ದಾಖಲೆ
ಇನ್ನು ಭಾರತದ ವಿರುದ್ಧ ಕಳಪೆ ಆರಂಭ ಪಡೆದ ಇನ್ನಿಂಗ್ಸ್ ಗಳ ಪಟ್ಟಿಯಲ್ಲೂ ಇಂದಿನ ನ್ಯೂಜಿಲೆಂಡ್ ಇನ್ನಿಂಗ್ಸ್ ಅಗ್ರ ಸ್ಥಾನಕ್ಕೇರಿದ್ದು, ಈ ಹಿಂದೆ ಈ ಪಟ್ಟಿಯಲ್ಲಿ ಕಳೆದ ವರ್ಷ ಅಂದರೆ 2022ರಲ್ಲಿ ದಿ ಓವಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 26 ರನ್ ಗಳಿಗೆ 5 ವಿಕೆಟ್ ಕಬಳಿಸಿತ್ತು. ಇದಕ್ಕೂ ಮೊದಲು 1997ರಲ್ಲಿ ಕೊಲಂಬೋದಲ್ಲಿ ಪಾಕಿಸ್ತಾನದ ವಿರುದ್ಧ 29 ರನ್ ಗಳಿಗೆ ಭಾರತ 5 ವಿಕೆಟ್ ಕಬಳಿಸಿತ್ತು. ಬಳಿಕ 2005ರಲ್ಲಿ ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಭಾರತ 30 ರನ್ ಗಳಿಗೆ ಜಿಂಬಾಬ್ವೆಯ 5 ವಿಕೆಟ್ ಪಡೆದಿತ್ತು.

STAT: Lowest scores at the fall of 5th wkt vs India
15/5 NZ Raipur 2023 *
26/5 Eng The Oval 2022
29/5 Pak Colombo 1997
30/5 Zim Harare 2005

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com