WTC ಫೈನಲ್ 2023: ಹೆಡ್- ಸ್ಮಿತ್ ಅಬ್ಬರ, ಮೊದಲ ದಿನದಾಟದ ಅಂತ್ಯ; 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದ ಆಸ್ಟ್ರೇಲಿಯಾ
ಲಂಡನ್ ನ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಮೊದಲ ದಿನದಂದು ಟ್ರಾವಿಸ್ ಹೆಡ್ ಅವರ ಭರ್ಜರಿ ಶತಕ ಹಾಗೂ ಸ್ಮೀವ್ ಸ್ಮಿತ್ ಅವರ ಅಜೇಯ 95 ರನ್ ಗಳ ನೆರವಿನಿಂದ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 85 ಓವರ್ ಗೆ 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದೆ.
Published: 08th June 2023 12:18 AM | Last Updated: 08th June 2023 02:13 PM | A+A A-

ಆಸ್ಟ್ರೇಲಿಯಾದ ಬ್ಯಾಟರ್ ಗಳಾದ ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್
ಲಂಡನ್: ಲಂಡನ್ ನ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಮೊದಲ ದಿನದಂದು ಟ್ರಾವಿಸ್ ಹೆಡ್ ಅವರ ಭರ್ಜರಿ ಶತಕ ಹಾಗೂ ಸ್ಮೀವ್ ಸ್ಮಿತ್ ಅವರ ಅಜೇಯ 95 ರನ್ ಗಳ ನೆರವಿನಿಂದ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 85 ಓವರ್ ಗೆ 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲಿಯೇ ಮೊಹಮದ್ ಸಿರಾಜ್ ಬೌಲಿಂಗ್ ನಲ್ಲಿ ಉಸ್ಮಾನ್ ಕವಾಜಾ ಶೂನ್ಯಕ್ಕೆ ಔಟಾದರೆ, ಡೇವಿಡ್ ವಾರ್ನರ್ 43 ರನ್ ಗಳಿಸಿ, ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: ಸ್ಟೀವ್ ಸ್ಮಿತ್ ಈ ಪೀಳಿಗೆಯ ಅತ್ಯುತ್ತಮ ಟೆಸ್ಟ್ ಬ್ಯಾಟರ್: ವಿರಾಟ್ ಕೊಹ್ಲಿ ಪ್ರಶಂಸೆ
ಭೋಜನ ವಿರಾಮ ನಂತರ ಕ್ರೀಸ್ಗೆ ಬಂದ ಮಾರ್ನಸ್ ಲ್ಯಾಬುಸ್ಚಾಗ್ನೆ 26 ರನ್ ಗಳಿಸಿ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಔಟಾದರು. ನಂತರ ಒಂದಾದ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಭಾರತೀಯ ಬೌಲರ್ಗಳ ಬೆಂಡತ್ತಿದರು.
ಈ ಜೋಡಿ ದ್ವಿಶತಕದ ಆಟವಾಡಿದ್ದು ದಿನದಾಟದ ಅಂತ್ಯಕ್ಕೆ ಟ್ರಾವಿಸ್ ಹೆಡ್ 156 ಎಸೆತದಲ್ಲಿ 1 ಸಿಕ್ಸ್ ಮತ್ತು 22 ಬೌಂಡರಿಗಳ ಮೂಲಕ 146 ರನ್ ಮತ್ತು ಸ್ಟೀವ್ ಸ್ಮಿತ್ 227 ಎಸೆತದಲ್ಲಿ 14 ಬೌಂಡರಿಗಳ ಮೂಲಕ 95 ರನ್ ಗಳಿಸಿದ್ದು, ನಾಳೆಗೆ ಕ್ರೀಸ್ ಕಾಯ್ದಿರಿಸಿಕೊಂಡಿದ್ದಾರೆ.
ಭಾರತದ ಪರ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ , ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದರು.