ಥ್ರಿಲ್ಲರ್ ಟೆಸ್ಟ್ ನಲ್ಲಿ ಶ್ರೀಲಂಕಾ ವಿರುದ್ದ ನ್ಯೂಜಿಲೆಂಡ್ ಗೆ ಜಯ: WTC ಫೈನಲ್ ಗೆ ಭಾರತ ಲಗ್ಗೆ!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ರೇಸ್ ನಲ್ಲಿ ಭಾರತಕ್ಕೆ ತೀವ್ರ ಪೈಪೋಟಿ ನೀಡಿದ್ದ ಶ್ರೀಲಂಕಾ ತಂಡ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲುವ ಮೂಲಕ ರೇಸ್ ನಿಂದ ಹೊರ ಬಿದ್ದಿದ್ದು, ಭಾರತ WTC ಫೈನಲ್ ಗೆ ಲಗ್ಗೆ ಇಟ್ಟಿದೆ.
ಟೀಂ ಇಂಡಿಯಾ WTC ಫೈನಲ್ ಗೆ
ಟೀಂ ಇಂಡಿಯಾ WTC ಫೈನಲ್ ಗೆ

ಕ್ರೈಸ್ಟ್ ಚರ್ಚ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ರೇಸ್ ನಲ್ಲಿ ಭಾರತಕ್ಕೆ ತೀವ್ರ ಪೈಪೋಟಿ ನೀಡಿದ್ದ ಶ್ರೀಲಂಕಾ ತಂಡ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲುವ ಮೂಲಕ ರೇಸ್ ನಿಂದ ಹೊರ ಬಿದ್ದಿದ್ದು, ಭಾರತ WTC ಫೈನಲ್ ಗೆ ಲಗ್ಗೆ ಇಟ್ಟಿದೆ.

ಹೌದು.. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ನ್ಯೂಜಿಲೆಂಡ್ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಶ್ರೀಲಂಕಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಕನಸು ಭಗ್ನಗೊಂಡಿದ್ದು, ಭಾರತ ನೇರವಾಗಿ ಪ್ರವೇಶ ಪಡೆದುಕೊಂಡಿದೆ. 

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರೋಚಿತ ಆಟ ಪ್ರದರ್ಶಿಸಿದ ಶ್ರೀಲಂಕಾ ತಂಡ 2ನೇ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ಗೆ ಗೆಲ್ಲಲು 285 ರನ್ ಗಳ ಸವಾಲಿನ ಗುರಿ ನೀಡಿತು. ಈ ಮೊತ್ತವನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡ ಡರಿಲ್ ಮೆಚೆಲ್ ಶತಕ (102 ರನ್), ಟಾಮ್ ಲಾಥಮ್ ಅರ್ಧಶತಕ (67 ರನ್) ಮತ್ತು ಮ್ಯಾಟ್ ಹೆನ್ರಿ (72 ರನ್) ಅರ್ಧಶತಕದ ನೆರವಿನಿಂದ ಕೇವಲ 2 ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿತು. 

ಅಂತಿಮ ಓವರ್ ವರೆಗೂ ಶ್ರೀಲಂಕಾ ಕೂಡ ಪಟ್ಟುಬಿಡದೆ ಹೋರಾಡಿದರು, ಕೊನೆಗೆ ಸೋಲೊಪ್ಪಿಕೊಂಡಿದೆ. ಭಾರತ ಆಸ್ಟ್ರೇಲಿಯಾ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರು ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದುಕೊಂಡಿದೆ.

ಇನ್ನು ಈಗಾಗಲೇ ಫೈನಲ್ ಗೆ ಲಗ್ಗೆ ಇಟ್ಟಿರುವ ಆಸ್ಟ್ರೇಲಿಯಾ ತಂಡ 68.52 ಶೇಕಡಾ ಅಂಕಗಳೊಂದಿಗೆ (PCT) WTC ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. ಇಂದಿನ ಟೆಸ್ಟ್ ಪಂದ್ಯ ಗೆದ್ದಿದ್ದರೆ ಅದರ ಅಂಕ ಗಳಿಕೆ ಶೇ.53.33 ರಿಂದ 61.11ಕ್ಕೆ ಏರಿಕೆಯಾಗಿರುತ್ತಿತ್ತು. ಆಗ ಶೇ. 60.29 ಅಂಕಗಳಿಸಿರುವ ಭಾರತ ತಂಡ ಮೂರನೇ ಸ್ಥಾನಕ್ಕೆ ತಳ್ಳಲ್ಪಡುತ್ತಿತ್ತು. ಒಂದು ವೇಳೆ ಹೀಗಾಗಿದ್ದರೆ ಭಾರತ ಹಾಲಿ ಆಸ್ಟ್ರೇಲಿಯಾ ವಿರುದ್ಧ ಅಹ್ಮದಾಬಾದ್ ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಆಗ ಭಾರತದ ಅಂಕಗಳಿಕೆ ಶೇ. 62.5ಕ್ಕೆ ಏರಿಕೆಯಾಗಿ ಮತ್ತೆ ಭಾರತ 2ನೇ ಸ್ಥಾನಕ್ಕೇರಿ ತನ್ನ ಫೈನಲ್ ಪ್ರವೇಶ ಖಚಿತ ಮಾಡಿಕೊಳ್ಳುತ್ತಿತ್ತು. ಆದರೆ ಇದೀಗ ಲೆಕ್ಕಾಚಾರ ಸ್ಪಷ್ಟವಾಗಿದ್ದು ಭಾರತ ಅರ್ಹವಾಗಿಯೇ ಫೈನಲ್ ನಲ್ಲಿ ಸ್ಥಾನ ಖಚಿತ ಪಡಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com