ಪಾಕಿಸ್ತಾನ ವೇಗಿ ಶಾಹೀನ್ ಅಫ್ರಿದಿ
ಪಾಕಿಸ್ತಾನ ವೇಗಿ ಶಾಹೀನ್ ಅಫ್ರಿದಿ

ICC Cricket World Cup 2023: ಬೆಂಡೆತ್ತಿದ ನ್ಯೂಜಿಲೆಂಡ್; ಶಾಹೀನ್ ಅಫ್ರಿದಿ ಸೇರಿ ಪಾಕ್ ಬೌಲರ್ ಗಳ ಕಳಪೆ ದಾಖಲೆ

ಐಸಿಸಿ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ಪಾಕಿಸ್ತಾನ ಬೌಲರ್ ಗಳು ಹೀನಾಯ ದಾಖಲೆ ಬರೆದಿದ್ದಾರೆ.

ಬೆಂಗಳೂರು: ಐಸಿಸಿ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ಪಾಕಿಸ್ತಾನ ಬೌಲರ್ ಗಳು ಹೀನಾಯ ದಾಖಲೆ ಬರೆದಿದ್ದಾರೆ.

ಹೌದು.. ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್ ಗಳು ಅಕ್ಷರಶಃ ವಿಫಲರಾಗಿ ದುಬಾರಿಯಾದರು. ನ್ಯೂಜಿಲೆಂಡ್ ತಂಡ ನಿಗಧಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 401 ರನ್ ಪೇರಿಸಿತು. ಈ ಪೈಕಿ ಶಾಹೀನ್ ಅಫ್ರಿದಿ 10 ಓವರ್ ನಲ್ಲಿ 90 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರೆ, ಹಸನ್ ಅಲಿ 10 ಓವರ್ ಗೆ 82ರನ್ ನೀಡಿದರು. ಅಂತೆಯೇ ಹ್ಯಾರಿಸ್ ರೌಫ್ 10 ಓವರ್ ಎಸೆದು 85 ರನ್ ನೀಡಿದರು. ಈ ದುಬಾರಿ ಸ್ಪೆಲ್ ಗಳ ಮೂಲಕ ಪಾಕಿಸ್ತಾನ ಬೌಲರ್ ಗಳು ಬೇಡದ ಹೀನಾಯ ದಾಖಲೆಗೆ ತುತ್ತಾಗಿದ್ದಾರೆ.

ವಿಶ್ವಕಪ್ ನಲ್ಲಿ ಅತೀ  ಹೆಚ್ಚು ರನ್ ನೀಡಿದ ಪಾಕ್ ಬೌಲರ್ ಶಾಹೀನ್ ಅಫ್ರಿದಿ
ಇನ್ನು 10 ಓವರ್ ನಲ್ಲಿ 90ರನ್ ನೀಡಿದ ಶಾಹೀನ್ ಅಫ್ರಿದಿ ಪಾಕಿಸ್ತಾನ ಪರ ಪಂದ್ಯವೊಂದರಲ್ಲಿ ಅತೀ ಹೆಚ್ಚು ರನ್ ನೀಡಿದ ದುಬಾರಿ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2019ರಲ್ಲಿ ಹಸನ್ ಅಲಿ ಮ್ಯಾಂಚೆಸ್ಟರ್ ನಲ್ಲಿ ಭಾರತದ ವಿರುದ್ದ ಪಂದ್ಯದಲ್ಲಿ 84ರನ್ ನೀಡಿದ್ದರು. ಇದು ಈ ಹಿಂದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಬೌಲರ್ ಓರ್ವ ನೀಡಿದ್ದ ದುಬಾರಿ ರನ್ ಗಳಾಗಿತ್ತು. ಆದರೆ ಈ ಬಾರಿ ಪಾಕಿಸ್ತಾನದ ಮೂರು ಬೌಲರ್ ಗಳು ದುಬಾರಿ ಪಟ್ಟಿಯಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಶಾಹೀನ್ ಅಫ್ರಿದಿ ಇದ್ದರೆ, 2ನೇ ಸ್ಥಾನದಲ್ಲಿ ಇಂದು 85ರನ್ ನೀಡಿದ ಹ್ಯಾರಿಸ್ ರೌಫ್ ಇದ್ದಾರೆ. ಅಂತೆಯೇ 4ನೇ ಸ್ಥಾನದಲ್ಲಿ ಇದೇ ವಿಶ್ವಕಪ್ ಟೂರ್ನಿಯಲ್ಲಿ ಇದೇ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ 83ರನ್ ನೀಡಿದ್ದ ಇದೇ ಹ್ಯಾರಿಸ್ ರೌಫ್ 4ನೇ ಸ್ಥಾನದಲ್ಲಿದ್ದಾರೆ.

ಅಂದಹಾಗೆ ಕಳೆದ 24 ಏಕದಿನ ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ.

Most runs conceded by a Pakistan bowler in a WC innings
0/90 - Shaheen Afridi vs NZ, Bengaluru, today*
1/85 - Haris Rauf vs NZ, Bengaluru, today*
1/84 - Hasan Ali vs IND, Manchester, 2019
3/83 - Haris Rauf vs AUS, Bengaluru, 2023

- This is the first time in 24 ODI innings Shaheen Afridi has gone without a wicket.

ಒಂದೇ ಪಂದ್ಯದಲ್ಲಿ 80ಕ್ಕೂ ಹೆಚ್ಚು ರನ್ ನೀಡಿದ ತಂಡವೊಂದರ ಬೌಲರ್ ಗಳು
ಇನ್ನು ಇಂದಿನ ಪಂದ್ಯದಲ್ಲಿ ಪಾಕಿಸ್ತಾನ 3 ಬೌಲರ್ ಗಳು ಅಂದರೆ ಶಾಹೀನ್ ಅಫ್ರಿದಿ (90ರನ್) ಹ್ಯಾರಿಸ್ ರೌಫ್ (85) ಮತ್ತು ಹಸನ್ ಅಲಿ (82 ರನ್) 80ಕ್ಕೂ ಹೆಚ್ಚು ರನ್ ನೀಡಿದ್ದಾರೆ. ಆ ಮೂಲಕ ವಿಶ್ವಕಪ್ ಟೂರ್ನಿಯ ಪಂದ್ಯವೊಂದರಲ್ಲಿ ಹೆಚ್ಚು ಬೌಲರ್ ಗಳು 80ಕ್ಕೂ ಅಧಿಕ ರನ್ ನೀಡಿದ ಪಟ್ಟಿಯಲ್ಲಿ ಪಾಕ್ ವೇಗಿಗಳು 3ನೇ ಸ್ಥಾನ ಗಳಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಇದೇ ವಿಶ್ವಕಪ್ ಟೂರ್ನಿಯ ದೆಹಲಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ 4 ಬೌಲರ್ ಗಳು 80ಕ್ಕೂ ಅಧಿಕ ರನ್ ನೀಡಿದ್ದರು. ಇದಕ್ಕೂ ಮೊದಲು 2015ರಲ್ಲಿ ಪರ್ತ್ ನಲ್ಲಿ ನಡೆದ ಆಸ್ಚ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಫ್ಘಾನಿಸ್ತಾನದ 3 ಬೌಲರ್ ಗಳು 80ಕ್ಕೂ ಅಧಿಕ ರನ್ ನೀಡಿದ್ದರು.

Most bowlers conceded 80+ runs in an ODI WC
4 - Sri Lanka vs South Africa, Delhi 2023
3 - Afghanistan vs Australia, Perth 2015
3 - Pakistan vs New Zealand, Bengaluru, today*

Related Stories

No stories found.

Advertisement

X
Kannada Prabha
www.kannadaprabha.com