ICC Cricket World Cup 2023: ವಿಶ್ವಕಪ್, ಏಕದಿನ ಇತಿಹಾಸದಲ್ಲೇ ದಕ್ಷಿಣ ಆಫ್ರಿಕಾಕ್ಕೆ ಹೀನಾಯ ಸೋಲು

ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ನಿನ್ನೆಯ ಪಂದ್ಯದಲ್ಲಿ ಭಾರತದ ವಿರುದ್ಧ 243 ರನ್ ಗಳ ಅಂತರದಲ್ಲಿ ಸೋತ ದಕ್ಷಿಣ ಆಫ್ರಿಕಾಕ್ಕೆ ಇದು ಕ್ರಿಕೆಟ್ ಇತಿಹಾಸದಲ್ಲಿಯೇ ತನ್ನ ವಿರುದ್ಧ ದಾಖಲಾದ ಹೀನಾಯ ಸೋಲಾಗಿದೆ.
ಏಕದಿನ ಇತಿಹಾಸದಲ್ಲೇ ದಕ್ಷಿಣ ಆಫ್ರಿಕಾಕ್ಕೆ ಹೀನಾಯ ಸೋಲು
ಏಕದಿನ ಇತಿಹಾಸದಲ್ಲೇ ದಕ್ಷಿಣ ಆಫ್ರಿಕಾಕ್ಕೆ ಹೀನಾಯ ಸೋಲು
Updated on

ಕೋಲ್ಕತಾ: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ನಿನ್ನೆಯ ಪಂದ್ಯದಲ್ಲಿ ಭಾರತದ ವಿರುದ್ಧ 243 ರನ್ ಗಳ ಅಂತರದಲ್ಲಿ ಸೋತ ದಕ್ಷಿಣ ಆಫ್ರಿಕಾಕ್ಕೆ ಇದು ಕ್ರಿಕೆಟ್ ಇತಿಹಾಸದಲ್ಲಿಯೇ ತನ್ನ ವಿರುದ್ಧ ದಾಖಲಾದ ಹೀನಾಯ ಸೋಲಾಗಿದೆ.

ಹೌದು.. ನಿನ್ನೆ ಭಾರತ ನೀಡಿದ್ದ 327 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 27.1ಓವರ್ ನಲ್ಲಿ ಕೇವಲ 83 ರನ್ ಗಳಿಗೇ ಆಲೌಟ್ ಆಗುವ ಮೂಲಕ 243 ರನ್ ಗಳ ಅಂತರದಲ್ಲಿ ಸೋಲು ಕಂಡಿತು. ಏಕದಿನ ಕ್ರಿಕೆಟ್ ಮತ್ತು ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ಸಿಕ್ಕ ಅತೀ ದೊಡ್ಡ ಸೋಲಾಗಿದೆ.

ಏಕದಿನ ಇತಿಹಾಸದಲ್ಲೇ ದಕ್ಷಿಣ ಆಫ್ರಿಕಾಕ್ಕೆ ಹೀನಾಯ ಸೋಲು
ಭಾರತದ ವಿರುದ್ಧ 243 ರನ್ ಗಳ ಅಂತರದಲ್ಲಿ ಸೋತ ದಕ್ಷಿಣ ಆಫ್ರಿಕಾಕ್ಕೆ ಇದು ಕ್ರಿಕೆಟ್ ಇತಿಹಾಸದಲ್ಲಿಯೇ ತನ್ನ ವಿರುದ್ಧ ದಾಖಲಾದ ಹೀನಾಯ ಸೋಲಾಗಿದ್ದು, ಈ ಹಿಂದೆ 2002ರಲ್ಲಿ ಪೋರ್ಟ್ ಆಫ್ ಎಲಿಜೆಬೆತ್ ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 182 ರನ್ ಗಳ ಅಂತರದಲ್ಲಿ ಸೋಲುಂಡಿತ್ತು. ಇದು ರನ್ ಗಳ ಲೆಕ್ಕಾಚಾರದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸಿಕ್ಕ ಅತೀ ದೊಡ್ಡ ಸೋಲಾಗಿತ್ತು. ಆದರೆ ನಿನ್ನೆ ಭಾರತ 243 ರನ್ ಗಳ ಅಂತರದಲ್ಲಿ ಸೋಲಿಸಿದ್ದು, ಇದೀಗ ಇದು ದಕ್ಷಿಣ ಆಫ್ರಿಕಾದ ಅತೀ ದೊಡ್ಡ ಸೋಲಾಗಿದೆ. ಅಚ್ಚರಿ ಎಂದರೆ ಈ ಹಿಂದಿನ ಅಂದರೆ 2015ರಲ್ಲೂ ಮೆಲ್ಬರ್ನ್ ನಲ್ಲಿ ನಡೆದಿದ್ದ ಭಾರತದ ವಿರುದ್ಧದ ಪಂದ್ಯದಲ್ಲೂ ದಕ್ಷಿಣ ಆಫ್ರಿಕಾ ತಂಡ 130 ರನ್ ಗಳ ಹೀನಾಯ ಸೋಲು ಅನುಭವಿಸಿತ್ತು.

Biggest defeats for SA in ODIs (by runs)
243 vs Ind Kolkata 2023
182 vs Pak Port Elizabeth 2002
180 vs SL Colombo RPS 2013
178 vs SL Colombo RPS 2018

Their previous biggest in a World Cup match was by 130 runs vs India in Melbourne in 2015.

ಏಕದಿನದಲ್ಲಿ 2ನೇ ಕನಿಷ್ಠ ಮೊತ್ತ
ಇನ್ನು ನಿನ್ನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 27.1ಓವರ್ ನಲ್ಲಿ ಕೇವಲ 83 ರನ್ ಗಳಿಗೇ ಆಲೌಟ್ ಆಗಿದ್ದು, ಇದು ದಕ್ಷಿಣ ಆಫ್ರಿಕಾ ತಂಡದ ಏಕದಿನ ಕ್ರಿಕೆಟ್ ನ 2ನೇ ಕನಿಷ್ಟ ಮೊತ್ತವಾಗಿದೆ. ಈ ಹಿಂದೆ 1993ರಲ್ಲಿ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 69ರನ್ ಗಳಿಗೆ ಆಲೌಟ್ ಆಗಿತ್ತು. ಇದು ಏಕದಿನ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾ ಗಳಿಸಿದ ಕಡಿಮೆ ಮೊತ್ತವಾಗಿದೆ. ಬಳಿಕ 2008ರಲ್ಲಿ ಇಂಗ್ಲೆಂಡ್ ವಿರುದ್ಧ ನಾಟಿಂಗ್ ಹ್ಯಾಮ್ ನಲ್ಲಿ (83 ರನ್), 2022ರಲ್ಲಿ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್ ನಲ್ಲಿ (83ರನ್) ಇದೇ 83 ರನ್ ಗೆ ಆಲೌಟ್ ಆಗಿತ್ತು. ಇದೀಗ ಮತ್ತೆ ಭಾರತ ತಂಡದ ವಿರುದ್ದ ಕೋಲ್ಕತಾದ ಈಡನ್ ಗಾರ್ಡೆನ್ ಕ್ರೀಡಾಂಗಣದಲ್ಲಿ 83ರನ್ ಗೇ ಆಲೌಟ್ ಆಗಿದೆ.

Lowest all out totals for SA in ODIs
69 vs Aus Sydney 1993
83 vs Eng Nottingham 2008
83 vs Eng Manchester 2022
83 vs Ind Kolkata 2023
99 vs Ind Delhi 2022

Their previous lowest in a World Cup match was 149 vs Australia in Gros Islet in 2007.

ವಿಶ್ವಕಪ್ ನಲ್ಲಿ ರನ್ ಲೆಕ್ಕಾಟಾರದಲ್ಲಿ 3ನೇ ಅತಿ ದೊಡ್ಡ ಸೋಲು
ಭಾರತ ನೀಡಿದ್ದ 327 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 27.1ಓವರ್ ನಲ್ಲಿ ಕೇವಲ 83 ರನ್ ಗಳಿಗೇ ಆಲೌಟ್ ಆಗುವ ಮೂಲಕ 243 ರನ್ ಗಳ ಅಂತರದಲ್ಲಿ ಸೋಲು ಕಂಡಿದ್ದು, ಇದು ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದರ 3ನೇ ಅತೀ ದೊಡ್ಡ ಸೋಲಾಗಿದೆ. ಈ ಹಿಂದೆ ಅಂದರೆ ಹಾಲಿ ವಿಶ್ವಕಪ್ ಟೂರ್ನಿಯಲ್ಲೇ ಈ ಹಿಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಇದೇ ಭಾರತ ತಂಡ 302ರನ್ ಗಳ ಅಂತರದಲ್ಲಿ ಸೋಲಿಸಿತ್ತು. ಇದು ವಿಶ್ವಕಪ್ ಇತಿಹಾಸದಲ್ಲಿನ ತಂಡವೊಂದರ (ರನ್ ಗಳ ಲೆಕ್ಕಾಚಾರದಲ್ಲಿ) ಅತೀ ದೊಡ್ಡ ಸೋಲಾಗಿದೆ. ಅಚ್ಚರಿ ಎಂದರೆ ಹಾಲಿ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ಒಂದೂ ಸಿಕ್ಸರ್ ಸಿಡಿಸದ ಮೊದಲ ಪಂದ್ಯ ಇದಾಗಿದೆ.

Biggest defeats by runs for a Full Member nation in World Cups
302 SL vs Ind Mumbai WS 2023
257 WI vs SA Sydney 2015
243 SA vs Ind Kolkata 2023
229 Eng vs SA Mumbai WS 2023
215 NZ vs Aus St George's 2007


First time in ODIs in 2023 South Africa have failed to hit a single six

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com