ಸಚಿನ್ ತೆಂಡೊಲ್ಕರ್
ಸಚಿನ್ ತೆಂಡೊಲ್ಕರ್

ವಿಶ್ವಕಪ್ ಫೈನಲ್: ಮೊಟೇರಾ ಕ್ರೀಡಾಂಗಣದತ್ತ ಗಣ್ಯರು, ಅಭಿಮಾನಿಗಳು, ಸುಮಾರು 6,000 ಪೊಲೀಸರ ನಿಯೋಜನೆ

ಭಾರತ- ಆಸ್ಟ್ರೇಲಿಯಾ ನಡುವಣ ಹೈವೋಲ್ಟೆಜ್ ವಿಶ್ವಕಪ್ ಕ್ರಿಕೆಟ್ ಪಂದ್ಯ ವೀಕ್ಷಣೆಗಾಗಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಅಭಿಮಾನಿಗಳು ಕ್ರೀಡಾಂಗಣದತ್ತ ಆಗಮಿಸುತ್ತಿದ್ದು, ಭದ್ರತೆಗಾಗಿ ಸುಮಾರು 6,000 ಪೊಲೀಸರನ್ನು ನಿಯೋಜಿಸಲಾಗಿದೆ.
Published on

ಅಹಮದಾಬಾದ್: ಭಾರತ- ಆಸ್ಟ್ರೇಲಿಯಾ ನಡುವಣ ಹೈವೋಲ್ಟೆಜ್ ವಿಶ್ವಕಪ್ ಕ್ರಿಕೆಟ್ ಪಂದ್ಯ ವೀಕ್ಷಣೆಗಾಗಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಅಭಿಮಾನಿಗಳು ಕ್ರೀಡಾಂಗಣದತ್ತ ಆಗಮಿಸುತ್ತಿದ್ದು, ಭದ್ರತೆಗಾಗಿ ಸುಮಾರು 6,000 ಪೊಲೀಸರನ್ನು ನಿಯೋಜಿಸಲಾಗಿದೆ.

 ವಿಶ್ವಕಪ್ ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಸೇರಿದ್ದಾರೆ ಹಲವು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು  ಅಹಮದಾಬಾದ್ ಪೊಲೀಸ್ ಕಮಿಷನರ್ ಜಿಎಸ್ ಮಲಿಕ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲಿಕ್, ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರ ಪ್ರೇಕ್ಷಕರು ಹಾಗೂ ಹಲವು ಗಣ್ಯರ ಉಪಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗುಜರಾತ್ ಪೊಲೀಸ್, ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್), ಗೃಹ ರಕ್ಷಕರು ಮತ್ತು ಇತರ ಸಿಬ್ಬಂದಿಗಳೊಂದಿಗೆ  ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಫೈನಲ್ ಪಂದ್ಯ ಸುಗಮವಾಗಿ ಸಾಗಲು ಖಚಿತಪಡಿಸಿಕೊಳ್ಳಲು 6,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.  ಈ ಪೈಕಿ ಸುಮಾರು 3,000 ಮಂದಿ ಕ್ರೀಡಾಂಗಣದೊಳಗೆ ನಿಯೋಜಿಸಿದ್ದರೆ, ಇತರರನ್ನು ಆಟಗಾರರು ಮತ್ತು ಇತರ ಗಣ್ಯರು ತಂಗಿರುವ ಹೋಟೆಲ್‌ಗಳಂತಹ  ಪ್ರಮುಖ ಸ್ಥಳಗಳಲ್ಲಿ ಕಾವಲು ಕಾಯಲು ನಿಯೋಜಿಸಲಾಗಿದೆ ಎಂದು  ಹೇಳಿದರು.

ಆರ್‌ಎಎಫ್‌ನ ಒಂದು ತುಕಡಿಯನ್ನು ಕ್ರೀಡಾಂಗಣದೊಳಗೆ ನಿಯೋಜಿಸಲಾಗಿದ್ದರೆ, ಇನ್ನೊಂದು ಕ್ರೀಡಾಂಗಣದ ಹೊರಗೆ ಕರ್ತವ್ಯ ನಿರ್ವಹಿಸಲಿದೆ. ನಗರ ಪೊಲೀಸರು ಸ್ಥಳದೊಳಗೆ ತಾತ್ಕಾಲಿಕ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ರಚಿಸಿದ್ದಾರೆ. ಇದು ವೈರ್‌ಲೆಸ್ ನೆಟ್‌ವರ್ಕ್ ಹೊಂದಿದ್ದು ಅದು ಮೊಬೈಲ್ ಸಂವಹನ ವಿಫಲತೆ  ಸಮಯದಲ್ಲಿಯೂ ಕಾರ್ಯನಿರ್ವಹಿಸುತ್ತದೆ.  ಐಜಿ ಮತ್ತು ಡಿಐಜಿ ಶ್ರೇಣಿಯ ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳು ಮತ್ತು 23 ಡಿಸಿಪಿ ಶ್ರೇಣಿಯ ಅಧಿಕಾರಿಗಳು ಪಂದ್ಯದ ದಿನದಂದು ಸಿಬ್ಬಂದಿಯನ್ನು ಮೇಲ್ವಿಚಾರಣೆ ಮಾಡಲಿದ್ದು, ಮಾರ್ಗದರ್ಶನ ನೀಡುತ್ತಾರೆ ಎಂದರು.

ಬಾಂಬ್ ಪತ್ತೆ ಮತ್ತು ನಿಷ್ಕ್ರೀಯ ದಳ 10 ತಂಡಗಳು ಮತ್ತು ಚೇತಕ್ ಕಮಾಂಡೋಸ್‌ನ ಎರಡು ತಂಡಗಳು  ಕ್ರೀಡಾಂಗಣದ ಬಳಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಭಾರತೀಯ ವಾಯುಪಡೆಯ ಹೆಸರಾಂತ ಸೂರ್ಯ ಕಿರಣ್ ಏರೋಬ್ಯಾಟಿಕ್ಸ್ ತಂಡ ಭಾನುವಾರದಂದು ಏರ್ ಶೋ ನಡೆಸಲು ನಿರ್ಧರಿಸಿದೆ. 1.32 ಲಕ್ಷ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ಪಂದ್ಯವು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದೆ. ಭಾರತ ತಂಡ ಇದುವರೆಗೆ ಆಡಿದ ಎಲ್ಲಾ 10 ಪಂದ್ಯಗಳನ್ನು ಗೆದ್ದು ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದು, ಕಪ್ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com