ಐಸಿಸಿ ವಿಶ್ವಕಪ್ 2023: ಮೊದಲ 3 ವಿಕೆಟ್ ಗೆ ಕನಿಷ್ಠ ಮೊತ್ತ ದಾಖಲಿಸಿಯೂ ಜಯ, ಟೀಂ ಇಂಡಿಯಾ ದಾಖಲೆ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯ ಹಲವು ದಾಖಲೆಗಳಿಗೆ ಪಾತ್ರವಾಗಿದ್ದು, ಈ ಪಟ್ಟಿಗೆ ಇದೀಗ ಭಾರತ ತಂಡ ಆರಂಭಿಕ ಕಳಪೆ ಬ್ಯಾಟಿಂಗ್ ಹೊರತಾಗಿಯೂ ಪಂದ್ಯ ಜಯಿಸಿದ ಸಾಧನೆ ಕೂಡ ಸೇರಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ಚೆನ್ನೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯ ಹಲವು ದಾಖಲೆಗಳಿಗೆ ಪಾತ್ರವಾಗಿದ್ದು, ಈ ಪಟ್ಟಿಗೆ ಇದೀಗ ಭಾರತ ತಂಡ ಆರಂಭಿಕ ಕಳಪೆ ಬ್ಯಾಟಿಂಗ್ ಹೊರತಾಗಿಯೂ ಪಂದ್ಯ ಜಯಿಸಿದ ಸಾಧನೆ ಕೂಡ ಸೇರಿದೆ.

ಹೌದು.. ನಿನ್ನೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 200ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ಕೆಎಲ್ ರಾಹುಲ್ (ಅಜೇಯ 97 ರನ್) ಮತ್ತು ವಿರಾಟ್ ಕೊಹ್ಲಿ (85ರನ್) ಅಮೋಘ ಬ್ಯಾಟಿಂಗ್ ನೆರವಿನಿಂದ 41.2 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 201ರನ್ ಕಲೆ ಹಾಕಿ 6 ವಿಕೆಟ್ ಅಂತರದಲ್ಲಿ ಗೆದ್ದು ಬೀಗಿತು. ಆದರೆ ಇದೇ ಪಂದ್ಯದಲ್ಲಿ ಆರಂಭಿಕ ವಿಕೆಟ್ ಗಳನ್ನು ಕಳೆದುಕೊಂಡರೂ ಪಂದ್ಯ ಗೆಲ್ಲುವ ಮೂಲಕ ಭಾರತ ಅಪರೂಪದ ದಾಖಲೆ ಬರೆದಿದೆ.

ಜಾಗತಿಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಮೊದಲ 3 ವಿಕೆಟ್ ಕಳೆದುಕೊಂಡು ಕನಿಷ್ಛ ರನ್ ಗಳಿಸಿಯೂ ಪಂದ್ಯ ಜಯಿಸಿದ ಮೊದಲ ಪ್ರಸಂಗ ಇದಾಗಿದೆ. ಈ ಪಂದ್ಯದಲ್ಲಿ ಭಾರತ ತಂಡ ಕೇವಲ 2 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ಕೆಎಲ್ ರಾಹುಲ್ (ಅಜೇಯ 97ರನ್) ಮತ್ತು ವಿರಾಟ್ ಕೊಹ್ಲಿ (85ರನ್) ಜೋಡಿ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಕ್ರಿಕೆಟ್ ಇತಿಹಾಸದಲ್ಲಿ ಕನಿಷ್ಟ ಮೊತ್ತಕ್ಕೆ ಆರಂಭಿಕ 3 ವಿಕೆಟ್ ಕಳೆದುಕೊಂಡು ಪಂದ್ಯ ಜಯಿಸಿದ ಮೊದಲ ಪಂದ್ಯ ಇದಾಗಿದೆ.

ಇದಕ್ಕೂ ಮೊದಲು 2004ರಲ್ಲಿ ಅಡಿಲೇಡ್ ನಲ್ಲಿ ನಡೆದ ವಿಬಿ ಸಿರೀಸ್ ನ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ ಕೇವಲ 4 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆ ಪಂದ್ಯವನ್ನೂ ಕೂಡ ಭಾರತ ಕೇವಲ 3 ರನ್ ಗಳ ಅಂತರದಲ್ಲಿ ಗೆದ್ದು ಬೀಗಿತ್ತು. ಆ ಪಂದ್ಯದಲ್ಲಿ ಭಾರತದ ಆರಂಭಿಕರಾದ ಸಂಜಯ್ ಬಂಗಾರ್ ಮತ್ತು ಪಾರ್ಥೀವ್ ಪಟೇಲ್ ಶೂನ್ಯ ಸುತ್ತಿದ್ದರೆ, ನಾಯಕ ಸೌರವ್ ಗಂಗೂಲಿ ಕೇವಲ 1 ರನ್ ಗೆ ನಿರ್ಗಮಿಸಿದ್ದರು.

ಆ ಪಂದ್ಯದಲ್ಲಿ ಭಾರತದ ಪರ ವಿವಿಎಸ್ ಲಕ್ಷ್ಮಣ್ (131 ರನ್), ರಾಹುಲ್ ದ್ರಾವಿಡ್ (56 ರನ್) ಮತ್ತು ರೋಹನ್ ಗವಾಸ್ಕರ್ (54 ರನ್) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತವನ್ನು 280ರ ಗಡಿಗೆ ಕೊಂಡೊಯ್ದರು. ಅಂದು ಜಿಂಬಾಬ್ವೆ ತಂಡ ನಿಗಧಿತ 50 ಓವರ್ ಗಳಲ್ಲಿ ಸ್ಟುವರ್ಟ್ ಕಾರ್ಲಿಸ್ಲೆ (109 ರನ್)ಮತ್ತು ಸೀನ್ ಎರ್ವಿನ್ (100) ಶತಕದ ನೆರವಿನಿಂದ ಜಯದ ಹೊಸ್ತಿಲಲ್ಲಿತ್ತು. ಆದರೆ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 277ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿ ಕೇವಲ 3 ರನ್ ಗಳ ಅಂತರದಲ್ಲಿ ಸೋಲು ಕಂಡಿತು. ಅಂದಿನ ಪಂದ್ಯದಲ್ಲಿ ಭಾರತದ ವೇಗಿ ಅಜಿತ್ ಅಗರ್ಕರ್ 3 ವಿಕೆಟ್ ಪಡೆದು ಗೆಲುವಿನ ರೂವಾರಿಯಾಗಿದ್ದರು.

Lowest score at fall of 3rd wkt to win an ODI match
2 - India vs AUS, Chennai, 2023*
4 - India vs ZIM, Adelaide, 2004
4 - Sri Lanka vs BAN, Mirpur, 2009
5 - Sri Lanka vs NZ, Dhaka, 1998

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com